More

    ಧಾರ್ಮಿಕ ಕಾರ್ಯ ಎಲ್ಲರನ್ನೂ ಒಗ್ಗೂಡಿಸುವ ಮಹಾನ್ ಅಸ್ತ್ರ

    ಸಿಂಧನೂರು: ಧಾರ್ಮಿಕ ಕಾರ್ಯಗಳು ಸಮಾಜದಲ್ಲಿನ ಮೇಲು – ಕೀಳು, ಭೇದ,ಭಾವಗಳನ್ನು ಬದಿಗೊತ್ತಿ ಎಲ್ಲರನ್ನು ಒಂದೆಡೆ ಒಗ್ಗೂಡಿಸುವ ಮಹಾನ್ ಅಸ್ತ್ರಗಳು ಎಂದು ಬಂಗಾರಿಕ್ಯಾಂಪ್‌ನ ಸಿದ್ಧಾಶ್ರಮದ ಸಿದ್ದರಾಮೇಶ್ವರ ಶರಣರು ಹೇಳಿದರು.

    ಇದನ್ನೂ ಓದಿ: ಸಾಮಾಜಿಕ, ಧಾರ್ಮಿಕ ಕಾರ್ಯದಿಂದ ಲಭಿಸಲಿದೆ ಮಾನಸಿಕ ನೆಮ್ಮದಿ

    ನಗರದ ವಿವಿ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ಶ್ರೀ ವಳಕೋಟೆ ವೀರಭದ್ರೇಶ್ವರ ಮಹಾದ್ವಾರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

    ಪೂರ್ವಜರು ನಂಬಿಕೆಯಿಟ್ಟು ಬದುಕಿ, ಬಾಳಿದ ಧಾರ್ಮಿಕತೆಯನ್ನು ಮರೆತರೆ ನಮ್ಮದನ್ನು ನಾವು ಕಳೆದುಕೊಂಡಂತೆ. ಇಂಥ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದಾಗಲೇ ಮುಂದಿನ ಪೀಳಿಗೆಯ ಸೌಹಾರ್ದತೆ ಜೀವನಕ್ಕೆ ಸಹಕಾರಿಯಾಗಲಿದೆ.

    ವಿವಿ ನಗರ ಯುವಕರು ಅತ್ಯುತ್ತಮ ಕೆಲಸ ಮಾಡಿದ್ದು ಬೃಹತ್ ಮಹಾದ್ವಾರ ನಿರ್ಮಾಣ ಮಾಡುವ ಮೂಲಕ ನಗರಕ್ಕೆ ಒಂದು ಕಳೆ ತಂದಿದ್ದಾರೆ ಎಂದರು.
    ಕಲ್ಮಠದ ಸಿದ್ಧಲಿಂಗ ಶಿವಯೋಗಿ ಸ್ವಾಮೀಜಿ ಮಾತನಾಡಿ, ಧರ್ಮ ಕೊಡುವ ಫಲಗಳು ಮನುಷ್ಯನನ್ನು ಉತ್ತುಂಗದ ತುತ್ತತುದಿಗೆ ಕೊಂಡೊಯ್ಯುತ್ತವೆ.

    ಹಣ, ಅಂತಸ್ತು, ಅಧಿಕಾರದಿಂದ ಶಾಂತಿ ದೊರೆಯುವುದು ಸಾಧ್ಯವಿಲ್ಲ. ಇವೆಲ್ಲವನ್ನೂ ಮೀರಿ ಶಾಂತಿ, ನೆಮ್ಮದಿ ನೀಡುವ ಶಕ್ತಿ ಧರ್ಮದಲ್ಲಿ ಅಡಗಿದೆ. ಆದ್ದರಿಂದ ಧರ್ಮಪಾಲನೆ ಪ್ರತಿಯೊಬ್ಬ ಮನುಷ್ಯನಾದವನ ಕರ್ತವ್ಯ ಎಂದರು.

    ಮಾಜಿ ಶಾಸಕ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ,

    ಉದ್ಯಮಿ ರಾಜೇಶ ಹಿರೇಮಠ, ಬನ್ನಿ ಮಹಾಂಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಂಬ್ರೂಸ್ ಕೊಡ್ಲಿ, ಲಘು ಮೋಟಾರ ವಾಹನ ಸಂಘದ ಅಧ್ಯಕ್ಷ ಶಿವರಾಜ, ವಳಕೋಟೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಚನ್ನನಗೌಡ ಮೇಟಿ, ತೋಂಟದಾರ್ಯ ಸಿದ್ಧಾಂತಿಮಠ, ಬಸವರಾಜ ಮೈಲಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts