More

    ಪಕ್ಷಿಗಳ ವಲಸೆಗೆ ಕ್ರಮ ಅಗತ್ಯ

    ಗಂಗಾವತಿ: ಪಕ್ಷಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ವಿಶೇಷ ಯೋಜನೆ ರೂಪಿಸಬೇಕೆಂದು ಚಾರಣ ಬಳಗದ ಸದಸ್ಯ ನಿರುಪಾದಿ ಭೋವಿ ಹೇಳಿದರು.

    ಇದನ್ನೂ ಓದಿ: ಬಿಸಿಲ ತಾಪ: ಪಕ್ಷಿಗಳ ದಾಹ ತೀರಿಸಲು ಪಣ ತೊಟ್ಟ ಚಿಣ್ಣರು!

    ತಾಲೂಕಿನ ಶ್ರೀರಾಮನಗರ ಸಮೀಪದ ಕುಂಟೋಟಿಯ ಅರಣ್ಯಪ್ರದೇಶದಲ್ಲಿ ಗಂಗಾವತಿ ಕಿಷ್ಕಿಂಧಾ ಯುವ ಚಾರಣ ಬಳಗ ಮತ್ತು ಕ್ಲೀನ್ ಆ್ಯಂಡ್ ಗ್ರೀನ್ ೆರ್ಸ್‌ನಿಂದ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರು ಮತ್ತು ಆಹಾರ ವ್ಯವಸ್ಥೆ ಮಾಡಿ ಭಾನುವಾರ ಮಾತನಾಡಿದರು.

    ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅನೇಕ ಪ್ರಭೇದದ ಪ್ರಾಣಿ, ಪಕ್ಷಿಗಳಿದ್ದು, ಪ್ರಮುಖವಾಗಿ ನವಿಲುಗಳ ಸಂತತಿಯಿದೆ. ನೀರು ಮತ್ತು ಆಹಾರದ ಕೊರತೆಯಿಂದ ಪ್ರಾಣಿ, ಪಕ್ಷಿಗಳು ವಲಸೆ ಹೋಗುತ್ತಿವೆ. ಇದನ್ನು ತಡೆಯಲು ಕ್ರಮಕೈಗೊಳ್ಳಬೇಕಿದೆ.

    ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ ಮಾತನಾಡಿ, ಕುಂಟೋಜಿ ಅರಣ್ಯ ಪ್ರದೇಶದಲ್ಲಿ ನೀರಿಗಾಗಿ 100ಕ್ಕೂ ಹೆಚ್ಚು ತೊಟ್ಟಿಗಳನ್ನಿಡಲಾಗಿತ್ತು. ಕೆಲವು ಕಳವಾಗಿದ್ದು, ಇನ್ನೂ ಕೆಲವು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಮರ, ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸದಿದ್ದರೆ ವಾತಾವರಣದ ಮೇಲೆ ಪರಿಣಾಮ ಬೀರಲಿದೆ ಎಂದರು.

    ಹಿರಿಯರು ಮತ್ತು ಮಕ್ಕಳು ಉತ್ಸಾಹದಿಂದ ಪ್ರಮುಖ ಪ್ರದೇಶದಲ್ಲಿ ನೀರಿನ ತೊಟ್ಟಿ ಮತ್ತು ಆಹಾರ ಬಟ್ಟಲುಗಳ ವ್ಯವಸ್ಥೆ ಮಾಡಿದರು.
    ಚಿಕ್ಕರಾಂಪುರ ಭಾಗದಲ್ಲಿ 3000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ ವಿದ್ಯಾರ್ಥಿನಿ ಸಿಂಧು, ಸದಸ್ಯರಾದ ಸೌಮ್ಯಶ್ರೀ, ಸತೀಶ್,

    ರವಿ ನಾಯಕ್, ಹನುಮೇಶ್ ಢಣಾಪುರ, ಸುಮಂಗಲಾ, ಶಿವಕುಮಾರ್, ಸೋಮು ಕುದುರಿಹಾಳ್, ಮಂಜುಳಾ ಶೆಟ್ಟಿ, ಮುತ್ತು ಬಂಗಿ, ಮದ್ದಾನಪ್ಪ, ಸಂತೋಷ್ ಕುಂಬಾರ್, ಚನ್ನಬಸವ ಬಳ್ಳೊಳ್ಳಿ, ಪಂಪಾಪತಿ ಮುದ್ಗಲ್, ಪ್ರಕಾಶ, ರಮೇಶ ಹರನಾಯಕ, ಮಂಜುನಾಥ್ ಇಂಡಿ, ಜಿ.ಆರ್.ಅರ್ಜುನ್ ಇತರರಿದ್ದರು.

    ಬಟ್ಟಲು ಕಟ್ಟು ಅಭಿಯಾನ
    ತಾಲೂಕಿನ ಢಣಾಪುರದಲ್ಲಿ ಪಕ್ಷಿಗಳ ಅನುಕೂಲಕ್ಕಾಗಿ ಮರಗಳಿಗೆ ನೀರಿನ ಬಟ್ಟಲು ಕಟ್ಟುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಿಸಿಲಿನ ತಾಪ ಹೆಚ್ಚುತ್ತಿದ್ದು, ಕೆರೆ, ಗುಂಡಿಗಳಲ್ಲಿ ನೀರು ಬತ್ತಿ ಹೋಗಿವೆ. ಕುಡಿವ ನೀರಿನ ಖಾಲಿ ಬಾಟಲ್ ಸೇರಿ ನಿರುಪಯುಕ್ತ ವಸ್ತುಗಳನ್ನು ಬಟ್ಟಲು ಮಾದರಿಯಾಗಿ ರೂಪಿಸಿ, ದಿನಕ್ಕೊಬ್ಬರಂತೆ ನೀರು ಹಾಕುತ್ತೆವೆ. ಜನ್ಮದಿನ, ಮದುವೆ ಸೇರಿ ಇತರೆ ಕಾರ್ಯಕ್ರಮಗಳಿಗೆ ತೆರಳಿ ನೀರಿನ ಅಗತ್ಯತೆ ಕುರಿತು ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ಅಭಿಯಾನದ ಸಂಚಾಲಕ ಹನುಮೇಶ ಭಾವಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts