More

    ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಮನೆಗೆ ಕಳಿಸುವುದು ಗ್ಯಾರಂಟಿ: ಸಿಎಂ ಬೊಮ್ಮಾಯಿ ವಾಗ್ದಾಳಿ

    ಬೆಂಗಳೂರು: ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅನ್ಯಾಯ, ಅಧರ್ಮ, ಈ ಪಕ್ಷವನ್ನು ಶಾಶ್ವತವಾಗಿ ಅಳಿಸಿ ಹಾಕಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದರು.

    ಇಂದು ಯಲಹಂಕದಲ್ಲಿ ಜಯವಾಹಿನಿ ಚುನಾವಣಾ ಯಾತ್ರೆ ಆರಂಭಿಸಿದ ಸಿಎಂ ಬೊಮ್ಮಾಯಿ ಎಸ್​. ಆರ್​. ವಿಶ್ವನಾಥ್​ ಪರ ಭರ್ಜರಿ ಪ್ರಚಾರ ನಡೆಸಿದರು.

    ಇದನ್ನೂ ಓದಿ: ಸುಲಭವಾಗಿ ಗೆಲ್ಲುವ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಿಕ್ಕಟ್ಟು: ಈ ಎರಡು ಕ್ಷೇತ್ರಗಳಲ್ಲಿ ಈಗ ತ್ರಿಕೋನ ಕದನ

    ಬೆಂಗಳೂರಿನ ಮುತ್ತು

    ಬರುವ ದಿನಗಳಲ್ಲಿ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗುವ ಕ್ಷೇತ್ರ ಯಲಹಂಕ. ಎಸ್​.ಆರ್​. ವಿಶ್ವನಾಥ್​ ಅವರು ಉತ್ತಮ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ಪ್ರವಾಹ ಬರಲಿ ಏನೇ ಬರಲಿ ಹಗಲು-ರಾತ್ರಿ‌ಯೆನ್ನದೇ ಪರಿಹಾರ‌ ಕೊಟ್ಟಿದ್ದಾರೆ. ಬಿಡಿಎ ಅಧ್ಯಕ್ಷರಾಗಿ‌ ಹೊಸ‌ ಲೇಔಟ್‌ ನಿರ್ಮಿಸಿದ್ದಾರೆ. ವಿಶ್ವನಾಥ್ ಅವರು ನಮ್ಮ ಬೆಂಗಳೂರಿನ ಮುತ್ತು. ಅಸಾಧ್ಯ‌ ಎನ್ನುವ ಪದವೇ ಅವರ ಡಿಕ್ಷನರಿಯಲ್ಲಿ ಇಲ್ಲ. ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡಿಕೊಂಡಿದ್ದಾರೆ ಎಂದು ಹೊಗಳಿದರು.

    ತಂದೆ ನೆನಪಾಗುತ್ತಾರೆ

    ವಿಶ್ವನಾಥ್​ ನನ್ನ ನೆಚ್ಚಿನ ‌ಸ್ನೇಹಿತ, ಬಲಭೀಮ ಸ್ನೇಹಿತ. ಎಸ್.ಆರ್‌. ವಿಶ್ವನಾಥ್ ನನಗೆ ಮತ್ತಷ್ಟು ‌ಹತ್ತಿರ ಆಗಿದ್ದಕ್ಕೆ ಮತ್ತೊಂದು ಕಾರಣ ಇದೆ. ನಮ್ಮ ತಂದೆಯ‌ ಹೆಸರು ಎಸ್. ಆರ್. ಬೊಮ್ಮಾಯಿ. ನನಗೆ ತಂದೆ‌ ನೆನಪಾದಗಲೆಲ್ಲ ಎಸ್. ಆರ್​. ವಿಶ್ವನಾಥ್​ಗೆ ಫೋನ್ ಮಾಡುತ್ತೇನೆ. ಎಸ್.ಆರ್‌. ವಿಶ್ವನಾಥ್ ಎದುರು ಬಂದಾಗಲೆಲ್ಲ ನನಗೆ ನಮ್ಮ ತಂದೆ ನೆನಪಾಗುತ್ತಾರೆ ಎಂದರು.

    ಭ್ರಷ್ಟಾಚಾರದ ಅವಿಭಾಜ್ಯ ಅಂಗ

    ಒಂದು ಲಕ್ಷ ಮತಗಳ ಅಂತರದಿಂದ ವಿಶ್ವನಾಥ್ ಗೆಲ್ಲಿಸುವಂತೆ ಸಿಎಂ‌ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಕರೆ ನೀಡಿದರು. ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕಾಂಗ್ರೆಸ್ ಭ್ರಷ್ಟಾಚಾರದ ಅವಿಭಾಜ್ಯ ಅಂಗ. ಜಾತಿ ಒಡೆಯುವ ಮತ್ತು ಧರ್ಮ ಒಡೆಯುವ ಕೆಲಸ‌ ಮಾಡುತ್ತಿದೆ. ಕಾಂಗ್ರೆಸ್​ನ ಗ್ಯಾರೆಂಟಿ ಕಾರ್ಡ್ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದನ್ನು ತೆಗೆದುಕೊಂಡು ಹೋಗಿ ಉಪ್ಪಿನ ಕಾಯಿ‌ ಹಾಕಬೇಕಷ್ಟೇ ಎಂದು ಕುಟುಕಿದರು.

    ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಿರಿ. ಈ ಅನಿಷ್ಟ ಕಾಂಗ್ರೆಸ್ ತೊಲಗಿಸಬೇಕು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅನ್ಯಾಯ ಹಾಗೂ ಅಧರ್ಮ. ಈ ಪಕ್ಷವನ್ನು ಶಾಶ್ವತವಾಗಿ ಅಳಿಸಿ ಹಾಕಬೇಕು ಎಂದು ಗುಡುಗಿದರು.

    ಇದನ್ನೂ ಓದಿ: ಬಸವಣ್ಣರ ಚಿಂತನೆಗಳು ಮಾನವೀಯ ಸೇವೆ ಮಾಡಲು ಸ್ಫೂರ್ತಿ ನೀಡುತ್ತವೆ: ಪ್ರಧಾನಿ ಮೋದಿ

    ಮನೆಗೆ ಕಳಿಸುವುದು ಗ್ಯಾರಂಟಿ

    ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ‌. ರಿಡ್ಯೂ ಹಗರಣ, ಪ್ರಶ್ನೆ ಪತ್ರಿಕೆ ಹಗರಣ ,ಎಸ್ಸಿ-ಎಸ್ಟಿ ಮಕ್ಕಳ ಹಾಸಿಗೆಯಲ್ಲೂ ಹಗರಣ ಸೇರಿದಂತೆ ಸಾಕಷ್ಟು ಹಗರಣ ಮಾಡಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಬೆಂಗಳೂರನ್ನು ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಮನೆಗೆ ಕಳಿಸುವುದು ಗ್ಯಾರಂಟಿ ಎಂದರು. (ದಿಗ್ವಿಜಯ ನ್ಯೂಸ್​)

    ‘ಜಯವಾಹಿನಿ’ ಏರಿ ರೋಡ್​ ಶೋ ಆರಂಭಿಸಿದ ಸಿಎಂ ಬೊಮ್ಮಾಯಿ; ಇಂದಿನಿಂದ ಬಿಜೆಪಿ ರಥಯಾತ್ರೆ

    ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕೆ ಧುಮುಕಿದ ಪತ್ನಿ ಚನ್ನಮ್ಮ, ಪುತ್ರ ಭರತ್​

    ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts