More

  ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕೆ ಧುಮುಕಿದ ಪತ್ನಿ ಚನ್ನಮ್ಮ, ಪುತ್ರ ಭರತ್​

  ಹಾವೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಅಭ್ಯರ್ಥಿಗಳ ಪರ ಕುಟುಂಬಸ್ಥರು ಕೂಡ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪತ್ನಿ ಚನ್ನಮ್ಮ ಹಾಗೂ ಪುತ್ರ ಭರತ್​ ಬೊಮ್ಮಾಯಿ ಪ್ರಚಾರ ಶುರು ಮಾಡಿದ್ದಾರೆ.

  ಬಸವರಾಜ ಬೊಮ್ಮಾಯಿ ಅವರು ಕಣಕ್ಕಿಳಿದಿರುವ ಶಿಗ್ಗಾಂವಿ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ತೆರಳಿ ಪತಿಯ ಪರ ಚನ್ನಮ್ಮ ಮತಯಾಚನೆ ಮಾಡಿದರು. ಶಿಗ್ಗಾಂವಿ ಕ್ಷೇತ್ರದ ತಚಿಕ್ಕನೆಲ್ಲೂರು, ಹನುಮರಹಳ್ಳಿ, ಚಾಕಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.

  ಇದನ್ನೂ ಓದಿ: ನಾನು ಅವರ ಉತ್ತರಾಧಿಕಾರಿ ಹೇಗೆ ಆದೆ ಅನ್ನೋದೆ ಗೊತ್ತಿಲ್ಲ: ಶಿವಕುಮಾರ ಶ್ರೀಗಳನ್ನು ನೆನೆದು ಕಂಬನಿ ಮಿಡಿದ ಸಿದ್ಧಲಿಂಗ ಸ್ವಾಮೀಜಿ…

  ಪುತ್ರನಿಂದಲೂ ಪ್ರಚಾರ

  ಇನ್ನೊಂದು ಕಡೆ ಸಿಎಂ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕೂಡ ಮನೆ ಮನೆಗೆ ಭೇಟಿ ನೀಡಿ ತಂದೆಯ ಪರ ಪ್ರಚಾರ ಮಾಡುತ್ತಿದ್ದಾರೆ. ಬೊಮ್ಮಾಯಿ‌ ಅವರ ಅಭಿವೃದ್ಧಿ ಕೆಲಸಗಳನ್ನ ಮನೆ ಮನೆಗೆ ತಲುಪಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಶಿಗ್ಗಾಂವಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಪತ್ನಿ ಮತ್ತು ಪುತ್ರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

  ಜಯವಾಹಿನಿ ಏರಿದ ಬೊಮ್ಮಾಯಿ

  ಇತ್ತ ಸಿಎಂ ಬೊಮ್ಮಾಯಿ ಅವರು ಇಂದಿನಿಂದ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಜಯವಾಹಿನಿ ವಾಹನದ ಮೂಲಕ ಇಂದು ಇಡೀ ದಿನ ರೋಡ್ ಶೋ ನಡೆಸಲಿದ್ದಾರೆ. ಈಗಾಗಲೇ ಯಲಹಂಕದಿಂದ ರೋಡ್​ ಶೋ ಆರಂಭವಾಗಿದೆ. ಯಲಹಂಕದಲ್ಲಿ ರೋಡ್ ಶೋ ಮುಗಿಸಿಕೊಂಡು ದೊಡ್ಡಬಳ್ಳಾಪುರಕ್ಕೆ 11.20ಕ್ಕೆ ಆಗಮಿಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

  ಇದನ್ನೂ ಓದಿ: ಸುಲಭವಾಗಿ ಗೆಲ್ಲುವ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಿಕ್ಕಟ್ಟು: ಈ ಎರಡು ಕ್ಷೇತ್ರಗಳಲ್ಲಿ ಈಗ ತ್ರಿಕೋನ ಕದನ

  Karnataka 2nd PUC Results; ಸಮಾನ ಅಂಕ ಗಳಿಸಿದ ಅವಳಿ ವಿದ್ಯಾರ್ಥಿಗಳು

  ‘ಶಿಕಾರಿ’ಗೆ ಇಳಿದಿರುವ ವಿಜಯೇಂದ್ರ ವಿರುದ್ಧ ಒಂದಾದ ಎದುರಾಳಿಗಳು..!

  ರಮ್ಯಾ ಅವರನ್ನು ಪಕ್ಷಕ್ಕೆ ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ; ಕಾಂಗ್ರೆಸ್​ ನಾಯಕಿಗೆ ಟಾಂಗ್ ಕೊಟ್ಟ ಆರ್​​.ಅಶೋಕ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts