More

    Karnataka 2nd PUC Results; ಸಮಾನ ಅಂಕ ಗಳಿಸಿದ ಅವಳಿ ವಿದ್ಯಾರ್ಥಿಗಳು

    ಬೆಂಗಳೂರು: ಅವಳಿ ಮಕ್ಕಳಲ್ಲಿ ಒಂದೇ ಸ್ವಭಾವ ,ಒಂದೇ ಜ್ಞಾನ, ಒಂದೇ ಅಭಿರುಚಿ ಹಾಗೂ ಒಂದೇ ಆಸಕ್ತಿಯನ್ನು ಹೊಂದಿರುತ್ತಾರೆ. ಹೀಗೆ ಅವಳಿ ಮಕ್ಕಳ ಕುರಿತು ಅನೇಕ ಕೌತುಕದ ಸಂಗತಿಗಳನ್ನು ಕೇಳಿರುತ್ತೀರಿ. ಆದ್ರೆ ನಾವಿಲ್ಲಿ ನಿಮಗೆ ಹೇಳುವ ಸುದ್ದಿ ಕೇಳಿದ್ರೆ ಆಶ್ಚರ್ಯವಾಗುವುದು ಖಂಡಿತಾ ಹೌದು.

    ಅವಳಿ ಮಕ್ಕಳು ಇತರರಿಗಿಂತ ವಿಭಿನ್ನವಾಗಿದ್ದು, ಕೌತುಕಮಯರಾಗಿರುತ್ತಾರೆ. ಹೆಚ್ಚಿನವರ ಪಾಲಿಗೆ ಈ ಅವಳಿ ಮಕ್ಕಳು ಕುತೂಹಲವನ್ನುoಟು ಮಾಡುವವರು ಹಾಗೂ ನಿಗೂಢಪ್ರಾಯರಾಗಿರುತ್ತಾರೆ. ಅವಳಿ ಮಕ್ಕಳ ಕುರಿತು ಜನರಲ್ಲಿ ಹಲವಾರು ಕಾಲ್ಪನಿಕ ಅನಿಸಿಕೆ, ಅಭಿಪ್ರಾಯಗಳಿರುತ್ತವೆ. ಆದರೆ ಇಲ್ಲಿ ಅವಳಿ ಸಹೋದರ ಮತ್ತು ಸಹೋದರಿಯರು ಇಡೀ ರಾಜ್ಯವೇ ಹಿಂದಿರಗಿ ನೋಡುವಂತೆ ಸಮಾನ ಸಾಧನೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಕರ್ನಾಟಕ ದ್ವಿತೀಯ ಪಿಯುಸಿ 2023 ರ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಫಲಿತಾಂಶ ಪ್ರಕಟಣೆಗಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಟಾಪರ್​ಗಳ ಹೆಸರನ್ನು ಘೋಷಿಸಲಾಗಿತ್ತು. ಬೆಂಗಳೂರಿನ ಜಯನಗರದ ವಿಜಯ ಪಿಯು ಕಾಲೇಜಿನ ಅವಳಿ ಸಹೋದರರು ಹಾಗೂ ಎಸ್ ಡಿಎಂ ಕಾಲೇಜು ಉಜಿರೆಯ ಅವಳಿ ಸಹೋದರಿಯರು ಸಮಾನ ಅಂಕವನ್ನು ಪಡೆದಿದ್ದಾರೆ.

    ಇದನ್ನೂ ಓದಿ: ‘ಬಡವರ ಬಂಧು’ ಜನರಿಗೆ ವರದಾನ; ಜೆಡಿಎಸ್ ಅಭ್ಯರ್ಥಿ ಮಂಜುನಾಥ್

    ಅವಳಿ ಸಹೋದರರ ಸಾಧನೆ:
    ಬೆಂಗಳೂರಿನ ಜಯನಗರದ ವಿಜಯ ಪಿಯು ಕಾಲೇಜಿನ ಸರ್ವೇಶ್ ಎನ್‌ಎನ್ ಮತ್ತು ಸಂತೋಷ್ ಎನ್‌ಎನ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಂದೇ ಅಂಕಗಳನ್ನು ಗಳಿಸಿದ್ದಾರೆ. ವೈಯಕ್ತಿಕ ವಿಷಯಗಳಲ್ಲಿ ಅವರ ಅಂಕಗಳು ವಿಭಿನ್ನವಾಗಿದ್ದರೂ ಇಬ್ಬರೂ 600 ರಲ್ಲಿ 566 ಗಳಿಸಿದ್ದಾರೆ. ಈ ಅವಳಿ ಜೋಡಿ ಮುಂದಿನ ದಿನಗಳಲ್ಲಿ ವಾಣಿಜ್ಯ ವಿಭಾಗದಲ್ಲಿ ಬಿಕಾಂ ಅನ್ನು ಆಯ್ಕೆ ಮಾಡಲು ಯೋಚಿಸಿದ್ದಾರೆ.

    “ಕ್ರಿಕೆಟ್, ಸಂಗೀತ ಮತ್ತು ಚಲನಚಿತ್ರಗಳಲ್ಲಿ ಅವರ ಆಸಕ್ತಿಯನ್ನು ಹೊರತುಪಡಿಸಿದರೆ ಹೆಚ್ಚು ಸಾಮ್ಯತೆ ಇಲ್ಲ. ನಾನು ಬೆಳಿಗ್ಗೆ ಓದುತ್ತೇನೆ, ಅವನು ರಾತ್ರಿ ಓದುತ್ತಾನೆ. ಶಾಲೆಯಲ್ಲಿ ನಾವು ಒಟ್ಟಿಗೆ ಪಾಠ ಕೇಳುತ್ತೇವೆ. ಆದರೆ ನಮ್ಮ ಎಸ್‌ಎಸ್‌ಎಲ್‌ಸಿ ಅಂಕಗಳು ತುಂಬಾ ವಿಭಿನ್ನವಾಗಿವೆ. ಈ ಫಲಿತಾಂಶಗಳಿಂದ ನಮಗೆ ಆಶ್ಚರ್ಯವಾಯಿತು. ನಮ್ಮಲ್ಲಿ ಕೆಲವು ವಿಷಯಗಳು ಸಾಮಾನ್ಯವಾಗಿವೆ ಹೊದಾಣಿಕೆಯಾಗುತ್ತವೆ. ನಾವು ಕೆಲವೊಮ್ಮೆ ಒಟ್ಟಿಗೆ ಅಧ್ಯಯನ ಮಾಡುತ್ತೇವೆ ಮತ್ತು ಅನುಮಾನಗಳನ್ನು ಒಟ್ಟಿಗೆ ಕುಳಿತುಕೊಂಡು ಸ್ಪಷ್ಟಪಡಿಸುತ್ತೇವೆ. ಆದರೆ, ನಾವು ಇದೇ ರೀತಿಯ ಅಂಕಗಳನ್ನು ನಿರೀಕ್ಷಿಸಿರಲಿಲ್ಲ” ಎಂದು ಸರ್ವೇಶ್ ಹೇಳಿದ್ದಾರೆ.

    ಇದನ್ನೂ ಓದಿ: ಮಸ್ಕ್​​ ಭಯ್ಯಾ…ಧನ್ಯವಾದ..ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಮತ್ತೆ ಬಂದಿದೆ: ಅಮಿತಾಭ್​ ಬಚ್ಚನ್

    ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿಯ ನಿವಾಸಿಯಾಗಿರುವ ಉಮೇಶ್ ಗೌಡ ಪಿ ಹೆಚ್ ‌ಮತ್ತು ಗೀತಾ ದಂಪತಿಗಳ ಅವಳಿ ಮಕ್ಕಳಾದ ಸ್ಪಂದನಾ ಮತ್ತು ಸ್ಪರ್ಷಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ವಾಣಿಜ್ಯ ವಿಭಾಗದಲ್ಲಿ ) ಇಬ್ಬರೂ 600 ರಲ್ಲಿ 594 ಸಮಾನ (ಶೇಕಡಾ 99%)ಅಂಕ ಪಡೆದಿದ್ದಾರೆ.

    ಈ ಅವಳಿ ಸಹೋದರಿಯರು ಎಸ್ ಡಿಎಂ ಕಾಲೇಜು ಉಜಿರೆಯ ವಿದ್ಯಾರ್ಥಿಗಳಾಗಿದ್ದಾರೆ. ಈ ಅವಳಿ ಸಹೋದರಿಯರು ಸಮಾನ (ಶೇಕಡಾ 99%)ಅಂಕ ಪಡೆದು ವಿಶೇಷ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ.

    ವರುಣದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದ್ದೆ: ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts