More

    ಸಿಎಂ ಬೊಮ್ಮಾಯಿಗೆ ಯಾರಾದರೂ ಗದೆ-ಖಡ್ಗ ಉಡುಗೊರೆಯಾಗಿ ನೀಡಿದರೆ ಅವರೇನು ಮಾಡುತ್ತಾರೆ?

    ವಿಜಯಪುರ: ರಾಜಕೀಯ ನಾಯಕರಿಗೆ ಖಡ್ಗ, ಬೆಳ್ಳಿ ಗದೆ, ಬೆಳ್ಳಿ ಕಿರೀಟ, ಕಡಗ ನೀಡಿ ಗೌರವಾಭಿಮಾನ ಮೆರೆಯುವುದು ಸಾಮಾನ್ಯ ಸಂಗತಿ. ಅದೇ ತೆರನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿಮಾನದಿಂದ ಬೆಳ್ಳಿ ಗದೆ ಕಾಣಿಕೆಯಾಗಿ ನೀಡಿದರೆ ಅವರು ಏನು ಮಾಡುತ್ತಾರೆ ಗೊತ್ತಾ?

    ಶನಿವಾರ ವಿಜಯಪುರ ಜಿಲ್ಲಾ ಪಂಚಾಯಿತಿ ಹತ್ತಿರ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಚಾಲನೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮುಖ್ಯಮಂತ್ರಿ ಅವರಿಗೆ ಬೆಳ್ಳಿ ಗದೆ ಕಾಣಿಕೆಯಾಗಿ ನೀಡಿ ಗೌರವ ಸಮರ್ಪಿಸಿದರು.

    ಇದನ್ನೂ ಓದಿ: ಹೊಸ ವರ್ಷಕ್ಕೆ ಒಂದೇ ವಾರ, ಹೊಸ ಹರ್ಷಕ್ಕೂ ಮೂಗುದಾರ; ಪಬ್, ಬಾರ್​-ರೆಸ್ಟೋರೆಂಟ್​ಗಳಿಗೆ ಪೊಲೀಸರ ಖಡಕ್​ ಎಚ್ಚರಿಕೆ

    ಅದನ್ನು ಪ್ರಿತ್ಯಾದರದಿಂದಲೇ ಸ್ವೀಕರಿಸಿದ ಸಿಎಂ ಬೊಮ್ಮಾಯಿ ಬಳಿಕ ಗದೆಯನ್ನು ಸ್ಥಳೀಯ ಯಾವುದಾದರೂ ಆಂಜನೇಯ ದೇವಸ್ಥಾನಕ್ಕೆ ಸಮರ್ಪಿಸುವಂತೆ ಮನವಿ ಮಾಡಿದರು.
    ಸಾಮಾನ್ಯವಾಗಿ ನಾನು ಬೆಳ್ಳಿ ಗದೆ ನೀಡಿದರೆ ಅದನ್ನು ಆಂಜನೇಯನಿಗೆ, ಖಡ್ಗ ನೀಡಿದರೆ‌ ದೇವಿಗೆ ಸಮರ್ಪಿಸುತ್ತ ಬಂದಿದ್ದೇನೆ. ಅದನ್ನು ಮನೆಗೆ ತೆಗೆದುಕೊಂಡು ಹೋಗಲ್ಲ. ಹೀಗಾಗಿ ಬೆಳ್ಳಿ ಗದೆಯನ್ನು ಆಂಜನೇಯನಿಗೆ ಸಮರ್ಪಿಸಲು ತಿಳಿಸಿದರು. ಸಿಎಂ ಸೂಚನೆ ಚಾಚೂ ತಪ್ಪದೇ ಪಾಲಿಸಿದ ವಿಜುಗೌಡ ಪಾಟೀಲ ಅದನ್ನು ಮದಲಾ ಮಾರುತಿ ದೇವಸ್ಥಾನಕ್ಕೆ ಹಸ್ತಾಂತರಿಸಿದರು.

    ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

    ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts