More

    ಎಸ್ಸಿ ಒಳ ಮೀಸಲಾತಿಗೆ ಅಸ್ತು ಎಂದ ರಾಜ್ಯ ಸರ್ಕಾರ: ಒಕ್ಕಲಿಗರು, ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ

    ಬೆಂಗಳೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಅಸ್ತು ಎಂದಿರುವ ರಾಜ್ಯ ಸರ್ಕಾರ ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿದೆ.

    ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ವರ್ಗಗಳ ಮೀಸಲಾತಿ ಸುಧಾರಣೆ ಹಾಗೂ ಹೆಚ್ಚಳ ಬಗ್ಗೆ ವಿವರಣೆ ನೀಡಿದರು.

    ಮೀಸಲಾತಿ ಕುರಿತು ಕೆಲವು‌ ಶಿಫಾರಸುಗಳು ಜಾರಿಯಾಗಿವೆ. ಆದರೆ, ಕೆಲವನ್ನು ಒಪ್ಪಿಕೊಂಡಿಲ್ಲ. ಅದು ಎಸ್​ಸಿ,‌ ಎಸ್​ಟಿ‌ ಇರಬಹುದು ಅಥವಾ ಬೇರೆಯಾಗಿರಬಹುದು. ಜನರ ಆಕಾಂಕ್ಷೆಗಳು‌ ಜಾಸ್ತಿ ಆಗಿವೆ. ನಮಗೂ ಮೀಸಲಾತಿ ಸಿಗಬೇಕು ಮತ್ತು ಶಿಕ್ಷಣ, ಉದ್ಯೋಗ ಸಿಗಬೇಕು ಎಂಬ ನಿರೀಕ್ಷೆ ಇದೆ. ಬಹಳಷ್ಟು ಬೇಡಿಕೆಗಳನ್ನು ಇಟ್ಟು ಹೋರಾಟಗಳು ನಡೆದಿವೆ. ಆದರೆ, ಎಲ್ಲ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸುವ ಕೆಲಸ ಆಗಿಲ್ಲ. ಮೀಸಲಾತಿ ಎಂಬುದು ಜೇನುಗೂಡಿಗೆ ಕಲ್ಲು ಎಸೆದಂತೆ. ಆದರೂ ನ್ಯಾಯ ಕೊಡಬೇಕು ಎಂಬ ದೃಷ್ಟಿಯಿಂದ ಕೆಲವು ನಿರ್ಣಯಗಳನ್ನು ಮಾಡಿದ್ದೇವೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈ ಕುರಿತು ಸರ್ಕಾರಿ ಆಜ್ಞೆ ಮಾಡಿದ್ದೇವೆ. ಅನುಷ್ಠಾನಕ್ಕೆ ಹೋಗಿದೆ. 9 ಸೆಡ್ಯೂಲ್​ಗೆ ಕಳುಹಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ 2 ಬೆಕ್ಕುಗಳನ್ನು ಪತ್ತೆಹಚ್ಚಬಲ್ಲರು!

    ಎಸ್ಸಿಯಲ್ಲಿ 101 ಒಳಪಂಗಡ ಇವೆ. ನಮ್ಮನ್ನು ಎಸ್ಸಿ ಪಟ್ಟಿಯಿಂದ ತೆಗೆಯುತ್ತಾರೆ ಎಂಬ ಆತಂಕ ಬಂಜಾತ, ಬೊವಿ, ಕೊರಚ ಸಮುದಾಯಗಳಿಗೆ ಇತ್ತು. ಇವು ಅಧಿಕೃತ ಪರಿಶಿಷ್ಠ ಜನಾಂಗಗಳು. ಹೀಗಾಗಿ ಅವರನ್ನು ಎಸ್ಸಿಯಿಂದ ತೆಗೆಯುವುದಿಲ್ಲ. ಅವರಿಗೆ ಒಳಮೀಸಲಾತಿ ಒದಗಿಸಲು ಕಮಿಷನ್ ಮಾಡಲಾಗಿದೆ. ಮಾಧುಸ್ವಾಮಿ ನೇತೃತ್ವದಲ್ಲಿ ಕ್ಯಾಬಿನೆಟ್ ಉಪ ಸಮಿತಿ ಮಾಡಲಾಗಿದೆ. ಎಸ್ಸಿ ಮೀಸಲಾತಿಯಲ್ಲಿ ಅವರಿಗೆ ನ್ಯಾಯ ಸಿಗಬೇಕು. ಹೀಗಾಗಿ 341 (2) ಅನ್ವಯ ನಾಲ್ಕು ಗುಂಪುಗಳಾಗಿ ಮಾಡಿ ಶಿಫಾರಸು ಮಾಡಿದ್ದಾರೆ. ಎಸ್ಸಿ ಎಡಗೈಗೆ 6%, ಬಲಗೈ 5.5%, ಅನ್ ಟಚಬಲ್ 4.5% ಹಾಗೂ ಇತರರಿಗೆ 1% ಮೀಸಲಾತಿ ಹೆಚ್ಳಕ್ಕೆ ಶಿಫಾರಸು ಮಾಡಿದ್ದು, ಒಳ ಮೀಸಲಾತಿಗೆ ಸರ್ಕಾರ ಅಸ್ತು ಎಂದಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ಹಿಂದುಳಿದ ವರ್ಗಗಳಲ್ಲಿ ಪ್ರವರ್ಗ-1 ರಲ್ಲಿ 4% ಇದೆ. ಪ್ರವರ್ಗ-2ಎ ನಲ್ಲಿ 15% ಮೀಸಲಾತಿ ಇದೆ. ರಿಲಿಜಿಯಸ್ ಮೈನಾರಿಟಿಯಲ್ಲಿ 4% ಮೀಸಲಾತಿ ಇದೆ. ಒಕ್ಕಲಿಗರಿಗೆ 4% ಮೀಸಲಾತಿ ಇದೆ. ಲಿಂಗಾಯತರಿಗೆ 5% ಮೀಸಲಾತಿ ಇದೆ. ಹಿಂದುಳಿದ ವರ್ಗಗಳ ಪಟ್ಟಿ ಪ್ರತಿ 10 ವರ್ಷಕ್ಕೆ ಒಮ್ಮೆ ಪರಾಮರ್ಶೆ ಆಗಬೇಕು. ಈಗಿನ ಜಯಪ್ರಕಾಶ್ ಹೆಗ್ಡೆ ಒಬಿಸಿ ಕಮೀಷನ್ ಪರಾಮರ್ಶಿಸಿದೆ. ರಾಜ್ಯವನ್ನು ಸುತ್ತಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಕರ್ನಾಟಕದಲ್ಲಿ ಮೂರು ಕೆಟಗರಿ ಇದೆ. ಈ ಮೂರು ಕೆಟಗರಿ ಅವಶ್ಯಕತೆ ಇಲ್ಲ ಎಂದಿದೆ. ಎರಡೇ ಕ್ಯಾಟಗರಿ ಮಾಡೋಕೆ ಶಿಫಾರಸು ಕೊಟ್ಟಿದೆ. 3-ಎ, 3-ಬಿ ಇತ್ತು ಇದಕ್ಕೆ 2-ಸಿ, 2-ಡಿ ಮಾಡಿದ್ದೇವೆ. ಬೆಳಗಾವಿ ಸದನದಲ್ಲಿ ನಾವು ಮಾಡಿದ್ದೇವೆ. ರಿಲಿಜಿಯಸ್ ಮೈನಾರಿಟಿಗೆ ತೊಂದರೆ ಆಗದಂತೆ ನಾವು ಮೀಸಲಾತಿ ಪರಿಷ್ಕರಿಸಿದ್ದೇವೆ. ಕೆಲವರನ್ನು ಆರ್ಥಿಕ ಹಿಂದುಳಿದ ವರ್ಗಕ್ಕೆ ಹಾಕಿದ್ದೇವೆ. ಅಲ್ಲಿನ ಮೀಸಲಾತಿಯನ್ನು 2-ಸಿ, 2-ಡಿಗೆ ಹಂಚಿದ್ದೇವೆ. ಪಿಂಜಾರ, ದರೋಜಿ ಸಮುದಾಯ 2ಎ ನಲ್ಲಿ ಇದ್ದಾರೆ. ಅವುಗಳಿಗೆ ನಾವು ತೊಂದರೆ ಮಾಡ್ತಿಲ್ಲ. 2-ಬಿ ಯಲ್ಲಿದ್ದವರನ್ನು ನಾವು ಆರ್ಥಿಕ ಹಿಂದುಳಿದ ವರ್ಗಕ್ಕೆ ಹಾಕಿದ್ದೇವೆ. 2-ಸಿಯಲ್ಲಿ ಒಕ್ಕಲಿಗರಿಗೆ 4ರ ಜೊತೆಗೆ 2% ಸೇರಿಸಲಾಗಿದ್ದು, 6%ಗೆ ಏರಿಕೆಯಾಗಿದೆ. ಅದೇ ರೀತಿ ಲಿಂಗಾಯತರಿಗೆ 2-ಡಿಯಲ್ಲಿ 5% ಗೆ 2% ಸೇರಿಸಲಾಗಿದ್ದು, 7%ಗೆ ಮೀಸಲಾತಿ ಏರಿಕೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಇದ್ದ 4% ಮೀಸಲಾತಿಯನ್ನು ರದ್ದು ಮಾಡಿ, ಆರ್ಥಿಕ ಹಿಂದುಳಿದು ಕೋಟಾದ ಅಡಿಯಲ್ಲಿ ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ.

    ಇದನ್ನೂ ಓದಿ: ಸಿಎಂ ವಿರುದ್ಧ ಗೆಲ್ಲುವ ಕುದುರೆಗಾಗಿ ಕೈ ಹುಡುಕಾಟ; ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆ

    ಇದೇ ವೇಳೆ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಪಂಚಮಸಾಲಿ ಅವರು 2-ಎ ಸ್ಟೇಟಸ್ ಕೇಳ್ತಿದ್ದರು. ಆದರೆ, ನಾವು 2-ಎ ಸ್ಟೇಟಸ್​ ಮುಟ್ಟುವುದಿಲ್ಲ. ಏಕೆಂದರೆ, ಅಲ್ಲಿ ಬಹಳ ಸಮುದಾಯಗಳು ಇವೆ. ಹೀಗಾಗಿ 2 ಕೆಟಗೆರಿಗೆ ಹಾಕಿದ್ದೇವೆ. 2-ಸಿ ಮತ್ತು 2-ಡಿ ಮಾಡಿದ್ದೇವೆ. 2-ಸಿಯಲ್ಲಿ 4 ರಿಂದ 6%ಕ್ಕೆ ಮತ್ತು 2-ಡಿ ಯಲ್ಲಿ 5 ರಿಂದ 7% ಹೆಚ್ಚಳ ಮಾಡಿದ್ದೇವೆ ಎಂದು ಹೇಳಿದರು.

    ರಾಜ್ಯದಲ್ಲಿ ಮೂರು ದಿನ ಮಳೆ: ಹಲವು ಜಿಲ್ಲೆಗಳಲ್ಲಿ ಸೆಖೆ ಅನುಭವ

    ‘ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts