More

  ಕ್ಷತ್ರಿಯರಿಗೆ 2ಎ ಮೀಸಲಾತಿ ನೀಡಿ

  ಕಂಪ್ಲಿ: ಮರಾಠ ಕ್ಷತ್ರೀಯರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಎಂದು ಕರ್ನಾಟಕ ಮರಾಠ ಕ್ಷತ್ರೀಯ ಸಮಾಜದ ತಾಲೂಕು ಅಧ್ಯಕ್ಷ ಆರೇರು ಗಣೇಶ ಮೌರ್ಯ ಹೇಳಿದರು.

  ಇದನ್ನೂ ಓದಿ: ವನ್ನಿಕುಲ ಕ್ಷತ್ರಿಯ ಉಪ ಜಾತಿಯನ್ನು ಪ್ರವರ್ಗ-2ಎಗೆ ಸೇರಿಸಿ

  ಪಟ್ಟಣದ ತಹಸಿಲ್ ಸಭಾಂಗಣದಲ್ಲಿ ಜರುಗಿದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಶಿವಾಜಿ ವೃತ್ತ ಮತ್ತು ಸಮುದಾಯ ಭವನ ನಿರ್ಮಿಸಲು ನಿವೇಶನ ಹಾಗೂ ಅನುದಾನ ಒದಗಿಸಬೇಕು. ಕ್ಷತ್ರೀಯರು ನಾನಾ ರಂಗಗಳಲ್ಲಿ ಹಿಂದುಳಿದಿದ್ದು, 2ಎ ಮೀಸಲಾತಿ ನೀಡಿ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಬಲಪಡಿಸಿ ಅರ್ಹರಿಗೆ ಯೋಜನೆಗಳನ್ನು ತಲುಪಿಸುವಲ್ಲಿ ಸರ್ಕಾರ ಜಾಗೃತಿ ತೋರಬೇಕು ಎಂದು ಒತ್ತಾಯಿಸಿದರು.

  ತಹಸೀಲ್ದಾರ್ ಶಿವರಾಜ, ಡಿಟಿ ಬಿ.ರವೀಂದ್ರಕುಮಾರ್, ಕರ್ನಾಟಕ ಮರಾಠ ಕ್ಷತ್ರೀಯ ಸಮಾಜದ ಪ್ರಮುಖರಾದ ಡಾ.ರಮೇಶ ಶಿಂಧೆ, ಬಾಬುರಾವು ಘೋರ್ಪಡೆ, ಶ್ರೀನಿವಾಸುಲು, ನಾರಾಯಣಸ್ವಾಮಿ, ಮರಾಠಿ ವೆಂಕೋಬಣ್ಣ, ಬಸವರಾಜ, ಜಡೇಶ, ಚನ್ನಬಸಪ್ಪ, ರಾಮರಾವ್ ಇತರರಿದ್ದರು.

  ನಂ.10ಮುದ್ದಾಪುರ ಹಾಗೂ ಕೋಟೆಯ ಐತಿಹಾಸಿಕ ಪಂಪಾಪತಿ ದೇವಸ್ಥಾನದ ಬಳಿ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೈಕ್ ರ‌್ಯಾಲಿ ಮೂಲಕ ತಹಸೀಲ್ದಾರ್ ಕಚೇರಿ ತಲುಪಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts