More

    ವನ್ನಿಕುಲ ಕ್ಷತ್ರಿಯ ಉಪ ಜಾತಿಯನ್ನು ಪ್ರವರ್ಗ-2ಎಗೆ ಸೇರಿಸಿ

    ಹನೂರು: ವನ್ನಿಕುಲ ಕ್ಷತ್ರಿಯ ಸಮುದಾಯದ ಉಪ ಜಾತಿಯನ್ನು ಪ್ರವರ್ಗ-2ಎಗೆ ಸೇರಿಸಲು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ಬುಧವಾರ ಸಮುದಾಯದ ಮುಖಂಡರು ಶಾಸಕ ಎಂ.ಆರ್. ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

    ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಶಾಸಕರನ್ನು ಭೇಟೆಯಾಗಿ ಮನವಿ ಸಲ್ಲಿಸಿದ ಬಳಿಕ ಮುಖಂಡರು ಮಾತನಾಡಿ, ಭಾಷವಾರು ಪ್ರಾಂತ್ಯ ವಿಂಗಡಣೆಯಾದ ಬಳಿಕ 1999ರಲ್ಲಿ ಕೇಂದ್ರ ಸರ್ಕಾರ ಪಡೆಯಾಚಿ, ಪಡೆಯಾಚಿ ಗೌಂಡರ್, ವನ್ನಿಯನ್ ಹಾಗೂ ವನ್ನಿಯ ಗೌಂಡರ್ ಸಮುದಾಯವನ್ನು ವನ್ನಿಕುಲ ಕ್ಷತ್ರಿಯ ಉಪ ಜಾತಿಗಳಾಗಿ ಪತ್ರಾಂಕದಲ್ಲಿ ಪ್ರಕಟಿಸಿದೆ. ಆದರೆ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಪರಿಣಾಮ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಲ್ಲಿ ಸುಮಾರು 85 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯವು ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗಿಲ್ಲ. ಜತೆಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಮುತುರ್ವಜಿ ವಹಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

    ಇದಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಪ್ರತಿಕ್ರಿಯಿಸಿ, ಈ ಸಂಬಂಧ ಸದನದಲ್ಲಿ ಪ್ರಸ್ತಾಪಿಸುವುದರ ಜತೆಗೆ ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

    ವನ್ನಿಕುಲ ಕ್ಷತ್ರಿಯ ಸಂಘದ ಜಿಲ್ಲಾಧ್ಯಕ್ಷ ಮಹಾದೇವ, ಮುಖಂಡರಾದ ಮಹಾಲಿಂಗಂ, ಮಾರಿಮುತ್ತು, ಪುಟ್ಟೇಗೌಂಡರ್, ಪೆರುಮಾಳ್, ಭೀಮರಾಜ್, ಶ್ರೀರಂಗ ಗೌಂಡರ್, ಮಾದೇಶ್, ಪೊನ್ನುಸ್ವಾಮಿ ಗೌಂಡರ್, ಕುಪ್ಪುಸ್ವಾಮಿ ಗೌಂಡರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts