More

    ಸಮರ್ಪಕವಾಗಿ ಮೀಸಲಾತಿ ದಕ್ಕುತ್ತಿಲ್ಲ

    ಹೂವಿನಹಡಗಲಿ: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಅನೇಕ ಬಗೆಯ ಸಂಕೋಲೆಗಳನ್ನು ಎದುರಿಸುತ್ತಿದ್ದಾಳೆ ಎಂದು ಎಂ.ಪಿ.ಪ್ರಕಾಶ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಹೇಳಿದರು.

    ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

    ಚರಿತ್ರೆಯನ್ನು ಗಮನಿಸಿದಾಗ ನಿರಂತರವಾಗಿ ಮಹಿಳೆಯ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹಾಗೂ ಮಾನಸಿಕ ಶೋಷಣೆ ನಡೆಯುತ್ತಿದೆ. ಮಹಿಳೆ ವಿದ್ಯಾವಂತಳಾದಲ್ಲಿ ಇದನ್ನು ತಡೆಯಲು ಸಾಧ್ಯವಾಗಲಿದೆ.

    ರಾಜಕೀಯವಾಗಿ ಶೇ.50 ಮೀಸಲಾತಿ ದೊರಕಿದ್ದರೂ, ಪರೋಕ್ಷವಾಗಿ ಅಧಿಕಾರ ಗಂಡಂದಿರ ಪಾಲಾಗುತ್ತಿದೆ. ಮಹಿಳೆ ಎಂದು ಸ್ವತಂತ್ರವಾಗಿರುತ್ತಾಳೋ ಅಂದು ಸಮಾನತೆ ಸಿಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಜಾತ್ಯತೀತವಾಗಿ ಮಹಿಳೆಯರನ್ನು ಶಕ್ತಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

    ಇದನ್ನು ಓದಿ:ಮುಸ್ಲಿಮರಿಗೆ ನಾನು ಕೊಟ್ಟ ಶೇ.4 ಮೀಸಲಾತಿ ಮತ್ತೆ ಕೊಡಲಿ; ದೇವೇಗೌಡ ಸವಾಲು

    ಜಿಲ್ಲಾ ಯೋಜನಾ ನಿರ್ದೇಶಕ ಗಣೇಶ ಮಾತನಾಡಿ, ತಾಲೂಕಿನ ವಿಕಾಸ ಕೇಂದ್ರಗಳಿಂದ ಮಹಿಳೆಯರಿಗೆ ಆರ್ಥಿಕ ನೆರವು, ಮಾರ್ಗದರ್ಶನ, ತಿಳಿವಳಿಕೆ ನೀಡುವ ಉದ್ದೇಶ ಹೊಂದಿದೆ. ಮಹಿಳೆಯರು ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

    ಪ್ರಜಾಪಿತ ಬ್ರಹ್ಮಕುಮಾರಿ ಭಾರತಿ ಅಕ್ಕ ಹಾಗೂ ಇತರರು ಮಾತನಾಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ಕೋಡಿಹಳ್ಳಿ ಕೊಟ್ರೇಶ, ಯೋಜನಾಧಿಕಾರಿ ತಿಲಕ್‌ರಾಜ್ ಜೈನ್, ಮಿಲನ್ ಸಂಘದ ಅಧ್ಯಕ್ಷ ಸಂತೋಷ ಜೈನ್, ಕಾನಿಪ ತಾಲೂಕು ಅಧ್ಯಕ್ಷ ಎಂ.ನಿಂಗಪ್ಪ, ಪರಶುರಾಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts