More

    ಮಲೇಷ್ಯಾ, ಪಾಕ್​ಗೂ ತಟ್ಟಿತು ತಬ್ಲಿಘಿ ಶಾಕ್!: ಸಭೆಯಿಂದಲೇ ಏಷ್ಯಾದಲ್ಲಿ ಕ್ಲಸ್ಟರ್ ಹೆಚ್ಚಳ

    ನವದೆಹಲಿ: ಭಾರತದಂತೆ ಏಷ್ಯಾ ರಾಷ್ಟ್ರಗಳಾದ ಮಲೇಷ್ಯಾ ಹಾಗೂ ಪಾಕಿಸ್ತಾನದಲ್ಲೂ ಕರೊನಾ ಪೀಡಿತರ ಸಂಖ್ಯೆ ಹೆಚ್ಚಾಗುವುದಕ್ಕೆ ತಬ್ಲಿಘಿ ಜಮಾತ್ ವತಿಯಿಂದ ನಡೆದ ಧಾರ್ವಿುಕ ಸಮಾವೇಶಗಳೇ ಕಾರಣ ಎಂಬುದು ಅಲ್ಲಿನ ಸರ್ಕಾರಿ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ.

    ತಬ್ಲಿಘಿ ಸಭೆಯಿಂದಾಗಿಯೇ ಕರೊನಾ ವೈರಸ್ ಪೀಡಿತರಿರುವ ಗುಂಪು(ಕ್ಲಸ್ಟರ್)ಗಳು ಹೆಚ್ಚಾಗಿರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್​ನ ರಾಯ್ವಿಂಡ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 70 ಸಾವಿರ ಜನರು ಭಾಗವಹಿಸಿದ್ದರು. ಒಟ್ಟಾರೆ ದೇಶದ ಕರೊನಾ ಪೀಡಿತರ ಪೈಕಿ ಕಾಲು ಭಾಗ ದಷ್ಟು ಜನರು ತಬ್ಲಿಘಿಗಳೇ ಆಗಿದ್ದಾರೆ. ಧಾರ್ವಿುಕ ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 2258 ಜನರಿಗೆ ಸೋಂಕು ತಗುಲಿರು ವುದು ದೃಢಪಟ್ಟಿರುವುದಾಗಿ ಹೇಳಲಾಗಿದೆ. ಒಟ್ಟಾರೆ ಪಾಕಿಸ್ತಾನದಲ್ಲಿ 8418 ಸೋಂಕು ಪ್ರಕರಣ ದೃಢಪಟ್ಟರೆ, 176 ಜನರು ಮೃತಪಟ್ಟಿದ್ದಾರೆ.

    ಮಲೇಷ್ಯಾದ ಕೌಲಾಲಂಪುರದಲ್ಲಿ ಫೆ.27ರಿಂದ ಮಾ.1ರವರೆಗೆ ನಡೆದ ತಬ್ಲಿಘಿ ಕಾರ್ಯಕ್ರಮದಲ್ಲಿ 16 ಸಾವಿರ ಮಂದಿ ಪಾಲ್ಗೊಂಡಿದ್ದರು. ಈ ರಾಷ್ಟ್ರದ 5482 ಪ್ರಕರಣಗಳ ಪೈಕಿ 1946 ಪ್ರಕರಣಗಳು ಈ ಸಭೆಯ ನಂಟು ಹೊಂದಿವೆ. ತಬ್ಲಿಘಿ ಜಮಾತ್ 150 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. ಅದಕ್ಕೆ ಅಧಿಕೃತ ಸದಸ್ಯತ್ವ ಇಲ್ಲವಾದ್ದರಿಂದ ಈ ಧಾರ್ವಿುಕ ಚಳವಳಿ 1.2 ಕೋಟಿಯಿಂದ 8 ಕೋಟಿಯಷ್ಟು ಬೆಂಬಲಿಗರನ್ನು ಹೊಂದಿರಬಹುದೆಂದು ಅಂದಾಜು ಮಾಡಲಾಗಿದೆ. ಹೆಚ್ಚೆಚ್ಚು ಮುಸ್ಲಿಮರನ್ನು ಸಂರ್ಪಸಿ ದೈನಂದಿನ ಜೀವನದಲ್ಲಿ ಇಸ್ಲಾಂ ರೀತಿ ರಿವಾಜುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬೋಧಿಸುವುದು ಸಂಘಟನೆಯ ಉದ್ದೇಶ.

    ಧರ್ಮಸೂಕ್ಷ್ಮತೆ ಸವಾಲು: ಸಾಂಕ್ರಾಮಿಕ ರೋಗದಂಥ ಬಿಕ್ಕಟ್ಟಿನ ಸಮಯದಲ್ಲಿ ಧಾರ್ವಿುಕ ಸೂಕ್ಷ್ಮತೆಯನ್ನು ನಿಭಾಯಿಸುವುದು ಸರ್ಕಾರಗಳಿಗೆ ದೊಡ್ಡ ಸವಾಲಾಗಿರುತ್ತದೆ ಎಂದು ಲಂಡನ್​ನ ಎಸ್​ಒಎಎಸ್ ವಿಶ್ವವಿದ್ಯಾಲಯದ ಪಾಕಿಸ್ತಾನ ಅಧ್ಯಯನ ಕೇಂದ್ರದ ಸದಸ್ಯ ಬುರ್ಜೆನ್ ವಾಘ್ಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಪ್ರಾರ್ಥನೆಯ ಧಾರ್ವಿುಕ ಮೂಲಭೂತ ಹಕ್ಕುಗಳನ್ನು ತಾವು ಪ್ರತಿಪಾದಿಸುತ್ತಿರುವುದಾಗಿ ಹೇಳಿ ಇಂಥವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ ಎಂದವರು ಹೇಳಿದ್ದಾರೆ.

    41 ವಿದೇಶಿಗರ ಕ್ವಾರಂಟೈನ್ ಪೂರ್ಣ

    ಬೆಂಗಳೂರು: ವಿದೇಶದಿಂದ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧೆಡೆ ಧಾರ್ವಿುಕ ಪ್ರಚಾರದಲ್ಲಿ ತೊಡಗಿದ್ದ 41 ವಿದೇಶಿ ಪ್ರಜೆಗಳಿಗೆ ವೈದ್ಯಕೀಯ ತಪಾಸಣೆಯಲ್ಲಿ ಕರೊನಾ ಸೋಂಕು ವರದಿ ನೆಗೆಟಿವ್ ಬಂದಿರುವುದು ನಿಟ್ಟುಸಿರು ಬಿಡುವಂತಾಗಿದೆ.

    ಬೆಂಗಳೂರಿನ ಪಾದರಾಯನಪುರದ ಇ-ಸುಬಾನಿಯಾ ಮತ್ತು ಶಿವಾಜಿನಗರದ ಸುಲ್ತಾನ್ ಶಾ ಮಸೀದಿ ಸೇರಿ ರಾಜ್ಯದ ಹಲೆವೆಡೆ ಧಾರ್ವಿುಕ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲ ಟ್ರಸ್ಟ್​ಗಳು ವಿದೇಶಗಳಿಂದ ಧರ್ಮಪ್ರಚಾರಕ್ಕೆ ಕರೆಸಿಕೊಂಡಿರುವುದು ಪೊಲೀಸರ ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ.

    ಏರ್​ಪೋರ್ಟ್ ಅಧಿಕಾರಿಗಳು ನೀಡಿದ ಟ್ರಾವೆಲ್ ಹಿಸ್ಟರಿ ಮಾಹಿತಿ ಆಧರಿಸಿ ಫ್ರಾನ್ಸ್, ಇಂಡೋನೇಷ್ಯಾ, ಕೀನ್ಯಾ, ಖರ್ಗೀಸ್ಥಾನ್, ಕಜಕಿಸ್ತಾನ್ ದೇಶಗಳಿಂದ ಫೆಬ್ರವರಿ ಕೊನೆಯ ವಾರ ಹಾಗೂ ಮಾರ್ಚ್​ನ ಮೊದಲ ವಾರದಲ್ಲಿ ಭಾರತಕ್ಕೆ ಬಂದು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು. ಬೆಂಗಳೂರು ನಗರ ಪೊಲೀಸರು ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಂಡ ಮಾ. 6ರಂದು 41 ಮಂದಿಯನ್ನು ಪತ್ತೆಹಚ್ಚಿ ಸಾರಾಯಿಪಾಳ್ಯದ ಹಜ್​ಭವನದಲ್ಲಿ 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು.

    ಈಗ ಹೋಂ ಕ್ವಾರಂಟೈನ್ ಅವಧಿಯೂ ಮುಗಿದಿದ್ದು ಕರೊನಾ ಸೋಂಕು ಕಾಣಿಸಿಕೊಂಡಿಲ್ಲ. ವಿಮಾನ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ನಿಗಾದಲ್ಲಿ ಇರಿಸಿಕೊಳ್ಳಲಾಗಿದೆ. ಆರಂಭದಲ್ಲಿ ದೆಹಲಿ ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ, ತನಿಖೆಯಲ್ಲಿ ಅವರು ದೆಹಲಿಗೆ ಹೋಗಿಲ್ಲ ಎಂಬ ಮಾಹಿತಿ ಗೊತ್ತಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ವಿದೇಶಿಗರ ಕಾಯ್ದೆಯಡಿ ಕೇಸ್

    ಜಗಜೀವನ್​ರಾಮ್ ನಗರ ಮತ್ತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ 41 ಮಂದಿ ವಿರುದ್ಧ ಪ್ರತ್ಯೇಕವಾಗಿ ವಿದೇಶಿಗರ ಕಾಯ್ದೆಯಡಿ 23 ಎಫ್​ಐಆರ್​ಗಳನ್ನು ದಾಖಲಿಸಲಾಗಿದೆ. ಇವರೆಲ್ಲ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿಲ್ಲ. ಧಾರ್ವಿುಕ ಪ್ರಚಾರದಲ್ಲಿ ಪಾಲ್ಗೊಂಡ ಮಾತ್ರಕ್ಕೆ ಏಕಾಏಕಿಯಾಗಿ ಬಂಧಿಸಲು ಆಗುವುದಿಲ್ಲ. ಈ ಕುರಿತ ಮಾಹಿತಿಯನ್ನು ವಿದೇಶಾಂಗ ಸಚಿವಾಲಯ ಆಯಾ ದೇಶದ ರಾಯಭಾರಿ ಕಚೇರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ತದನಂತರವೇ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತದಲ್ಲಿ ಶೇ.35 ನಂಟು

    ಭಾರತದಲ್ಲಿನ ಒಟ್ಟು ಕರೊನಾ ಪ್ರಕರಣಗಳ ಪೈಕಿ ಶೇ.35 ಪ್ರಕರಣಗಳಿಗೆ ತಬ್ಲಿಘಿ ನಂಟಿರುವುದು ದೃಢಪಟ್ಟಿದೆ. ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ ಹೆಚ್ಚಿನ ಪ್ರಕರಣಗಳಿಗೆ ತಬ್ಲಿಘಿಗಳ ನಂಟಿದೆ.

    ಧಾರ್ವಿುಕ ಪಂಗಡಗಳ ಪಾಲು

    ಜಗತ್ತಿನ ನಾನಾ ಭಾಗಗಳಲ್ಲಿ ಕರೊನಾ ವೈರಸ್ ಹಾಟ್​ಸ್ಪಾಟ್​ಗೆ ವಿವಿಧ ಧಾರ್ವಿುಕ ಪಂಗಡಗಳೇ ಕಾರಣವಾಗಿರುವ ಅಂಶ ಬೆಳಕಿಗೆ ಬಂದಿದೆ. ದಕ್ಷಿಣ ಕೊರಿಯಾದಲ್ಲಿ ಫೆಬ್ರವರಿಯಲ್ಲಿ ಹಠಾತ್ತನೆ ಕರೊನಾ ಪ್ರಕರಣ ಹೆಚ್ಚಲು ಕ್ರೈಸ್ತ ಧರ್ವಿುಯ ಪಂಗಡವೊಂದರ ಚಟುವಟಿಕೆ ಕಾರಣವಾಯಿತು ಎನ್ನಲಾಗಿದೆ. ಈ ಪಂಗಡದ ಚಟುವಟಿಕೆಗಳನ್ನು ನಂತರ ಸಿಂಗಾಪುರ ನಿಷೇಧಿಸಿದೆ. ನ್ಯೂಯಾರ್ಕ್ ಹಾಗೂ ಇಸ್ರೇಲ್​ನಲ್ಲಿ ಅತಿ ಧಾರ್ವಿುಕವಾದಿ ಯೆಹೂದಿ ಸಮುದಾಯಗಳಲ್ಲಿ ಕರೊನಾ ವೈರಸ್ ಅಧಿಕವಾಗಿ ವ್ಯಾಪಿಸಿರುವುದು ಕಂಡುಬಂದಿದೆ. ಕೆಲವು ಯಹೂದಿ ಧಾರ್ವಿುಕ ನಾಯಕರ ಕರೆಯ ಮೇರೆಗೆ ಆ ಧರ್ಮದ ಜನರು ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿದ್ದು ಇದಕ್ಕೆ ಕಾರಣ. ಈ ರೀತಿಯ ನಿಯಮಗಳು ತಮ್ಮ ಧರ್ಮದ ನಂಬಿಕೆಗಳಿಗೆ ವಿರುದ್ಧವಾದುದು ಎನ್ನುವುದು ಅವರ ಅಭಿಪ್ರಾಯ. ಭಾರತದಲ್ಲಿ, ಯುರೋಪ್​ನಿಂದ ಮರಳಿದ ಸಿಖ್ ಅರ್ಚಕನೊಬ್ಬ ಸ್ವಯಂ ಕ್ವಾರಂಟೈನ್​ಗೆ ನಿರಾಕರಿಸಿದ್ದರಿಂದ 30,000ಕ್ಕೂ ಹೆಚ್ಚು ಜನರನ್ನು ಕಟ್ಟುನಿಟ್ಟಿನ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಆ ಅರ್ಚಕ ಹಲವು ಗ್ರಾಮಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನಂತರ ಕೊವಿಡ್-19 ರೋಗದಿಂದ ಮೃತಪಟ್ಟ.

    ಅಕ್ರಮ ಮದ್ಯ ಸಾಗಣೆ ಆರೋಪ; ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯಗೆ ನೋಟಿಸ್​ ರವಾನಿಸಿದ ಬಿ.ವಿ. ಶ್ರೀನಿವಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts