More

    ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿ ಕಾರು ಗಿಫ್ಟ್​ ಕೊಟ್ಟ ಗರ್ಭಿಣಿ ಪತ್ನಿ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಕೌಲಾಲಂಪುರ: ಮಲೇಷ್ಯಾದ 19 ವರ್ಷದ ಕಾಸ್ಮೆಟಿಕ್​ ಇನ್ಫ್ಲುಯೆನ್ಸರ್ ಒಬ್ಬರು ಮೊದಲ ಮಗುವಿಗೆ ಜನ್ಮ ನೀಡುವ ಮುನ್ನವೇ ತನ್ನ ಪತಿಗೆ 1,60,000 ಪೌಂಡ್​ (1,59,65,031 ರೂಪಾಯಿ) ಬೆಲೆಯ ದುಬಾರಿ ಲ್ಯಾಂಬೋರ್ಗಿನಿ ಹುರಾಕ್ಯಾನ್​ ಇವೊ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಅನೆಸ್​ ಅಯುನಿ ಒಸ್ಮಾನ್​ ಗರ್ಭಿಣಿಯಾಗಿದ್ದು, ಕುಟುಂಬದ ಸಂಪ್ರದಾಯದ ಪ್ರಕಾರ ಆಕೆ ತನ್ನ ತವರು ಕೆಲಂಟಾನ್​ಗೆ ತೆರಳಬೇಕಾಗಿದೆ. ಅಲ್ಲದೆ, ಮಗು ಜನಿಸಿದ ಬಳಿಕ 100 ದಿನಗಳ ಕಾಲ ಒಂದೇ ಕೋಣೆಯಲ್ಲಿ ಇರಬೇಕಾಗುತ್ತದೆ. ಮಗು ಜನನದ ಬಳಿಕ ಎದುರಾಗುವ ಯಾವುದೇ ತೊಡಕುಗಳನ್ನು ತಪ್ಪಿಸಲು ತನ್ನ ಚಲನಾವಲನವನ್ನು ಸೀಮಿತಗೊಳಿಸಿ ಒಸ್ಮಾನ್​ ಒಂದೇ ಕಡೆ ಇರಬೇಕಾಗಿದೆ.

    ಈ ಸಮಯದಲ್ಲಿ ಒಸ್ಮಾನ್​ಗೆ ಪತಿಯೇ ಆಧಾರ.​ ತನ್ನ ಪತಿ ಹಾಗೂ ಉದ್ಯಮಿ ವೆಲ್ಡಾನ್​ ಜುಲ್ಕೆಫ್ಲಿ (20) ಮೇಲೆ ಒಸ್ಮಾನ್​ ಸಂಪೂರ್ಣ ಅವಲಂಬಿತರಾಗಿರುತ್ತಾರೆ. ಪ್ರತಿಯೊಂದು ನೆರವನ್ನು ಪತಿಯೇ ಮಾಡಬೇಕಾಗುತ್ತದೆ. ನ್ಯಾಪ್ಕಿನ್​ ಬದಲಾವಣೆಯಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಮಾಡಬೇಕಾಗಿರುವುದರಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಮಗು ಮತ್ತು ತಾಯಿಯ ಸಂಪೂರ್ಣ ಜವಬ್ದಾರಿ ವೆಲ್ಡಾನ್ ಮೇಲಿರುತ್ತದೆ.

    ಇನ್ನು ವೆಲ್ಡಾನ್​ಗೆ ಸರ್ಪ್ರೈಸ್​ ಆಗಿ ಪತ್ನಿ ಒಸ್ಮಾನ್ ಕಾರು ಉಡುಗೊರೆ ನೀಡುತ್ತಿರುವ ಟಿಕ್​ಟಾಕ್​ ವಿಡಿಯೋ ಸಹ ವೈರಲ್​ ಆಗಿದೆ. ಅನಿರೀಕ್ಷಿತ ಉಡುಗೊರೆಯಿಂದ ಸಂತೋಷಗೊಂಡ ವೆಲ್ಡಾನ್​ ತನ್ನ ಪತ್ನಿಯನ್ನು ತಬ್ಬಿ, ಬೇಬಿ ಬಂಪ್​ಗೆ ಮುತ್ತಿಡುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. ಟಿಕ್​ಟಾಕ್​ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

    ವಿಡಿಯೋ ನೋಡಿದವರು ಸಿಕ್ಕಾಪಟ್ಟೆ ಕಾಮೆಂಟ್​ ಮಾಡುತ್ತಿದ್ದು, ಪತಿಯ ಬದಲು ಪೂರ್ಣ ಸಮಯಕ್ಕೆ ನರ್ಸ್​ ಆಯ್ಕೆ ಮಾಡಿಕೊಂಡಿದ್ದರೆ, ಇದಕ್ಕಿಂತ ಅಗ್ಗವಾಗಿರುತ್ತಿತ್ತು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ವೆಲ್ಡಾನ್​ ತುಂಬಾ ಅದೃಷ್ಟವಂತ ಎಂದು ಇನ್ನೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ.

    ಅಂದಹಾಗೆ ಒಸ್ಮಾನ್​ ಅವರು ಮಾರ್ಚ್​ ತಿಂಗಳ ಅಂತ್ಯಕ್ಕೆ ಮಗುವಿನ ಜನ್ಮ ನೀಡಲಿದ್ದಾರೆ. (ಏಜೆನ್ಸೀಸ್​)

    ತಲೆಮರೆಸಿಕೊಂಡಿದ್ದ ರೌಡಿಶೀಟರ್​ ಡ್ರೋನ್​ ನೆರವಿನಿಂದ ಬಂಧನ: ಪೊಲೀಸ್​ ಕಾರ್ಯಾಚರಣೆಯ ವಿಡಿಯೋ ವೈರಲ್​

    ಫಿಲ್ಮ್ ಸಿಟಿಗೆ ಪುನೀತ್ ರಾಜ್​ಕುಮಾರ್ ಹೆಸರಿಟ್ಟರೆ ಸಂತೋಷ: ನಟ ಶಿವರಾಜ್​ಕುಮಾರ್​

    ಪುನೀತ್​ ಬದುಕು ಆದರ್ಶಪ್ರಾಯ, ಶೀಘ್ರದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ- ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts