More

    ‘ಕೆಜಿಎಫ್​’ಗೆ ಫೈಟ್​ ಮಾಡಿಸಲು ಬಂದರು ಅನ್ಬರಿವ್​

    ಹೈದರಾಬಾದ್: ಯಶ್​ ಅಭಿನಯದ ‘ಕೆಜಿಎಫ್​ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಇಂದಿನಿಂದ ಕ್ಲೈಮ್ಯಾಕ್ಸ್​ ಫೈಟ್​ನ ಚಿತ್ರೀಕರಣ ಪ್ರಾರಂಭವಾಗಿದೆ. ಈ ಫೈಟ್​ನಲ್ಲಿ ಯಶ್​, ಸಂಜಯ್​ ದತ್​ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ನಾಲ್ಕು ಚಿತ್ರೋತ್ಸವಗಳಿಗೆ ‘ಜೀವ್ನಾನೇ ನಾಟ್ಕ ಸಾಮಿ’ ಆಯ್ಕೆ

    ‘ಕೆಜಿಎಫ್​ 2’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿರುವುದು ಅನ್ಬರಿವ್​ ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಅನ್ಬುಮಣಿ ಮತ್ತು ಅರಿವುಮಣಿ ಎಂಬ ಸಹೋದರರು. ‘ಕೆಜಿಎಫ್​ 1’ ಚಿತ್ರಕ್ಕೂ ಅನ್ಬರಿವ್​ ಸಾಹಸ ಸಂಯೋಜನೆ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಅವರು ಅತ್ಯುತ್ತಮ ಸಾಹಸನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈಗ ಎರಡನೆಯ ಭಾಗದ ಕ್ಲೈಮ್ಯಾಕ್ಸ್​ ಫೈಟ್​ ಮಾಡಿಸುವುದಕ್ಕೆ ಅನ್ಬರಿವ್​ ಬಂದಿದ್ದಾರೆ.

    ‘ಕೆಜಿಎಫ್​ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಈ ತಿಂಗಳ ಕೊನೆಗೆ ಮುಕ್ತಾಯವಾಗುವ ನಿರೀಕ್ಷೆ ಇದ್ದು, ಯಶ್​ ಹುಟ್ಟುಹಬ್ಬದಂದು (ಜನವರಿ 8), ಚಿತ್ರದ ಮೊದಲ ಟೀಸರ್​ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ರಶ್ಮಿಕಾ ಬಿಟ್ಟ ಪಾತ್ರ ರಾಶಿಗೆ ಹೋಯಿತಾ?

    ಚಿತ್ರದಲ್ಲಿ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​, ಹರೀಶ್​ ರಾಯ್​ ಮುಂತಾದವರು ನಟಿಸಿದ್ದು, ಪ್ರಶಾಂತ್​ ನೀಲ್​ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಇನ್ನು ಹೊಂಬಾಳೆ ಫಿಲಂಸ್​ ಸಂಸ್ಥೆಯಡಿಯಲ್ಲಿ ವಿಜಯ್​ಕುಮಾರ್​ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ.

    ಪ್ರಶಸ್ತಿ ಗಳಿಸುವುದು ಈ ಚಿತ್ರದ ಉದ್ದೇಶ ಅಲ್ಲ: ಶಕೀಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts