More

    ಸಂಕ್ರಾಂತಿ ದಿನವೂ ತರಗತಿ ನಡೆಸಿದ ಕ್ರೈಸ್ಟ್ ಸ್ಕೂಲ್; ಹಿಂದೂ ಜಾಗರಣಾ ವೇದಿಕೆಯಿಂದ ಆಕ್ರೋಶ

    ಚಾಮರಾಜನಗರ: ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗುವಂಥ ಬೆಳವಣಿಗೆಯೊಂದು ನಡೆದಿದೆ. ಮಕರ ಸಂಕ್ರಮಣದ ದಿನವೂ ತರಗತಿ ನಡೆಸಿದ ಕಾರಣಕ್ಕೆ ಕ್ರೈಸ್ತರ ಆಡಳಿತ ಶಾಲೆಯೊಂದು ಆಕ್ರೋಶವನ್ನು ಎದುರಿಸುವಂತಾಗಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಕ್ರೈಸ್ಟ್ ಸಿಎಂಐ ಪಬ್ಲಿಕ್‌ ಶಾಲೆ ಮಕರ ಸಂಕ್ರಮಣ ದಿನವಾದ ಇಂದು, ಭಾನುವಾರ ರಜಾದಿನವಾಗಿದ್ದರೂ ತರಗತಿಯನ್ನು ನಡೆಸುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಭಾನುವಾರ ಹಾಗೂ ಸಂಕ್ರಾಂತಿ ಹಬ್ಬವಿದ್ದರೂ ತರಗತಿ ನಡೆಸಲಾಗಿದೆ. ಹಿಂದೂ ಮಕ್ಕಳು ಹಬ್ಬ ಆಚರಣೆ ಮಾಡಬಾರದೆಂಬ ದುರುದ್ದೇಶದಿಂದಲೇ ಈ ರಜಾದಿನದಂದು ತರಗತಿ ನಡೆಸಲಾಗಿದೆ ಎಂಬುದಾಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಹಾಗೂ ದಲಿತ ಸಂಘಟನೆಗಳವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಲೆಗೆ ತೆರಳಿ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡ ಹಿಂದೂ ಕಾರ್ಯಕರ್ತರು, ಶಾಲೆಯಲ್ಲಿ ಕೇವಲ ಕ್ರೈಸ್ತ ಧರ್ಮದ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿರುವುದಲ್ಲದೆ, ಕೇವಲ ಕ್ರೈಸ್ತ ಧರ್ಮದ ವಿಚಾರಗಳನ್ನು ಮಕ್ಕಳ ತಲೆಗೆ ತುಂಬುತ್ತಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದಾರೆ.

    ಶಾಲೆಯಲ್ಲಿ ರಾಷ್ಟ್ರ ನಾಯಕರ ಫೋಟೋಗಳನ್ನು ಅಳವಡಿಸದೆ ಕೇವಲ ಏಸುವಿನ ಫೋಟೋ ಅಳವಡಿಸಿರುವುದರ ವಿರುದ್ಧವೂ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಶಾಲೆಯ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿದೆ.

    ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಥರ ಸಾವಿಗೀಡಾದ ಅವಳಿ ಸಹೋದರರು!; 900 ಕಿ.ಮೀ. ದೂರದಲ್ಲಿ ನಡೆಯಿತು ವಿಚಿತ್ರ ಘಟನೆ!

    ಗ್ರಾಹಕರಿಬ್ಬರ ಖಾತೆಯಿಂದಲೇ ಕೋಟಿಗಟ್ಟಲೆ ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡ ಬ್ಯಾಂಕ್ ಅಧಿಕಾರಿ!

    ಮನೆಗೆ ಕರೆ ಮಾಡಿ ಹೇಳಿಯೇ ಆತ್ಮಹತ್ಯೆ ಮಾಡಿಕೊಂಡ ಯುವಕ!; ಶೂಟ್​ ಮಾಡಿಕೊಂಡು ಸಾವು..

    ಬಾಯ್​ಫ್ರೆಂಡ್​ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts