More

    6ನೇ ತರಗತಿ ಮಕ್ಕಳಿಗೆ ಕರೀನಾ ಪುತ್ರನ ಬಗ್ಗೆ ಪ್ರಶ್ನೆ; ವೈರಲ್ ಆಯ್ತು ಪ್ರಶ್ನೆ ಪತ್ರಿಕೆ!

    ಮುಂಬೈ: ಮಧ್ಯಪ್ರದೇಶದ ಒಂದು ಖಾಸಗಿ ಶಾಲೆ ತಮ್ಮ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್ ಖಾನ್ ಅವರ ಮೊದಲ ಮಗನ ಪೂರ್ತಿ ಹೆಸರನ್ನು ಪ್ರಸ್ತುತ ವ್ಯವಹಾರಗಳ ಪ್ರಶ್ನೆಯಾಗಿ ಕೇಳಿದ್ದಾರೆ. ಸದ್ಯ, ಈ ವಿಷಯವೂ ಎಲ್ಲರ ಹುಬ್ಬೇರಿಸಿದೆ. 6ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಇಂತಹ ಪ್ರಶ್ನೆ ಕೇಳಿರುವ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಲೆಯ ಮಕ್ಕಳ ಪೋಷಕರು ತಮ್ಮ ರಾಜ್ಯ ಶಿಕ್ಷಣ ಇಲಾಖೆಗೆ ವಿನಂತಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂಜೀವ್ ಭಲೇರಾವ್, ಖಾಂಡ್ವಾ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ), ಶಾಲೆಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರಶ್ನೆ ಪತ್ರಿಕೆ ಈಗ ವೈರಲ್ ಆಗುತ್ತಿದೆ. 

    6ನೇ ತರಗತಿ ಮಕ್ಕಳಿಗೆ ಕರೀನಾ ಪುತ್ರನ ಬಗ್ಗೆ ಪ್ರಶ್ನೆ; ವೈರಲ್ ಆಯ್ತು ಪ್ರಶ್ನೆ ಪತ್ರಿಕೆ! 6ನೇ ತರಗತಿ ಮಕ್ಕಳಿಗೆ ಕರೀನಾ ಪುತ್ರನ ಬಗ್ಗೆ ಪ್ರಶ್ನೆ; ವೈರಲ್ ಆಯ್ತು ಪ್ರಶ್ನೆ ಪತ್ರಿಕೆ!

    ಅಂದಹಾಗೆ, ಕರೀನಾ ಮೊದಲ ಪುತ್ರ ತೈಮೂರ್ ಅಲಿ ಖಾನ್ ಹುಟ್ಟುವ ಮೊದಲಿನಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ. ತಮ್ಮ ತಂದೆ ಮತ್ತು ತಾಯಿಯಷ್ಟು ಫೇಮಸ್ ಆಗಿದ್ದಾನೆ ತೈಮೂರ್. ತುಂಬಾ ಮುದ್ದು ಮುದ್ದಾಗಿ ಕಾಣಸಿಕೊಳ್ಳುವ ಕಾರಣ ತೈಮೂರ್​ಗೆ ಬಹಳಷ್ಟು ಜನ ಅಭಿಮಾನಿಗಳು ಆಗಿದ್ದಾರೆ. ತೈಮೂರ್ ಫೋಟೋಗಳು, ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತವೆ. ಈ ಹಿಂದೆ, ಸೈಫ್ ಮತ್ತು ಕರೀನಾ ಅವರ ಮೊದಲ ಮಗನ ಹೆಸರನ್ನು ತೈಮೂರ್ ಅಲಿ ಖಾನ್ ಎಂದು ಘೋಷಿಸಿದಾಗ ಕೂಡ ವಿವಾದ ಭುಗಿಲೆದ್ದಿತು. ತೈಮೂರ್ ಅಲಿ ಖಾನ್ ಎಂಬ ಹೆಸರು ಅನಾಗರಿಕ ಆಕ್ರಮಣಕಾರ ತೈಮೂರ್ ಅನ್ನು ನೆನಪಿಸುತ್ತದೆ ಎಂದು ನೆಟಿಜನ್‌ಗಳು ಆಗ ಆಕ್ರೋಶ ವ್ಯಕ್ತಪಡಿಸಿದ್ದರು.

    ರಶ್ಮಿಕಾ VS ಪೂಜಾ: ಸಿನಿಮಾ ಆಯ್ತು, ಈಗ ಜಾಹೀರಾತು ವಿಷ್ಯದಲ್ಲೂ ಕಿತ್ತಾಟ

    ನಿನ್ನೆ ‘ಮೀಟ್​ ಮಾಡಣ ಇಲ್ಲ ಡೇಟ್ ಮಾಡಣ’, ಇಂದು ‘ನೋಡುತ.. ಸುಮ್ಮನೇ..’; ಮತ್ತೆ ಟಾಪ್​ಗೆ ಹೋದ ರಚಿತಾ ರಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts