More

    ದೇಶಾದ್ಯಂತ ಆಗಸ್ಟ್​​ನಲ್ಲಿ ಸಿನಿಮಾ ಥಿಯೇಟರ್​ ತೆರೆಯಲು ಸಿದ್ಧತೆ; ಮಾಲೀಕರೇ ಒಪ್ಪುತ್ತಿಲ್ಲ…!

    ನವದೆಹಲಿ: ಕೊವಿಡ್​-19 ಸೋಂಕಿನಿಂದಾಗ ಸಿನಿಮಾ ಥಿಯೇಟರ್​ಗಳೆಲ್ಲ ಮಾರ್ಚ್​ನಿಂದಲೇ ಬಂದ್​ ಆಗಿವೆ. ಈಗೀಗ ಪ್ರವಾಸಿ ತಾಣಗಳನ್ನೆಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೆರೆಯಲಾಗಿದ್ದರೂ ಸಿನಿಮಾ ಹಾಲ್​ಗಳು ಪ್ರಾರಂಭವಾಗಿಲ್ಲ. ಇದರಿಂದಾಗಿ ಸಿನಿ ಪ್ರಿಯರು ತುಸು ಬೇಸರದಲ್ಲೇ ಕಾಲ ಕಳೆಯುತ್ತಿದ್ದಾರೆ.

    ಇದೀಗ ಒಂದು ಗುಡ್​ನ್ಯೂಸ್​ ಹೊರಬಿದ್ದಿದೆ. ಆಗಸ್ಟ್​ನಿಂದ ಸಿನಿಮಾ ಹಾಲ್​ಗಳನ್ನೂ ತೆರೆಯಲು ಕೇಂದ್ರದಿಂದ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್​ನಿಂದ ಸಿನಿಮಾ ಥಿಯೇಟರ್​​​​ಗಳನ್ನು ಪ್ರಾರಂಭ ಮಾಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗೃಹ ಇಲಾಖೆಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.

    ಆಗಸ್ಟ್​ ಮೊದಲ ವಾರ ಅಥವಾ ಕೊನೆಯವ ವಾರ ಆಗಬಹುದು. ಒಟ್ಟಿನಲ್ಲಿ ಆಗಸ್ಟ್​ ತಿಂಗಳಲ್ಲೇ ದೇಶಾದ್ಯಂತ ಸಿನಿಮಾ ಥಿಯೇಟರ್​ ಪ್ರಾರಂಭ ಮಾಡಲು ಗೃಹ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಇಲಾಖೆಯ ಕಾರ್ಯದರ್ಶಿ ಅಮಿತ್​ ಖರೆ, ಉದ್ಯಮಕ್ಕೆ ಸಂಬಂಧಪಟ್ಟ ಸಂವಾದವೊಂದರಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಯ್​ಫ್ರೆಂಡ್​ ಇದ್ದರೂ ಒಮ್ಮೆಯೂ ಸೆಕ್ಸ್ ಮಾಡಿರಲಿಲ್ಲ…ಆದ್ರೂ ಗರ್ಭಿಣಿಯಾದೆ: ಯುಎಸ್​ ಮಹಿಳೆಯ ವಿಭಿನ್ನ ಕತೆ

    ಹಾಲ್​​ನಲ್ಲಿ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು. ಮೊದಲ ಸಾಲಿನಲ್ಲಿ ಒಂದಕ್ಕೊಂದು ಅಂತರ ಇರುವಂತೆ ಸೀಟ್​ಗಳನ್ನು ಹಾಕಲಾಗುವುದು. ಹಾಗೇ ಎರಡನೇ ಸಾಲನ್ನು ಖಾಲಿ ಬಿಡಲಾಗುವುದು. ಸಾಮಾಜಿಕ ಅಂತರ ನಿಯಮಗಳ ಪಾಲನೆ ಕ್ರಮದೊಂದಿಗೆ ಸಿನಿಮಾ ಹಾಲ್​ಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.

    ಆದರೆ ಸಂವಾದದಲ್ಲಿ ಪಾಲ್ಗೊಂಡಿದ್ದ ಸಿನಿಮಾ ಥಿಯೇಟರ್​ಗಳ ಮಾಲೀಕರು ಈ ಸೂತ್ರದೊಂದಿಗೆ ಸಿನಿಮಾ ಹಾಲ್​ ಓಪನ್​ ಮಾಡುವುದು ಸರಿಯಾದ ಕ್ರಮವಲ್ಲ. ಶೇ.25ರಷ್ಟು ತುಂಬಿರುವ ಆಡಿಟೋರಿಯಂ ಇಟ್ಟುಕೊಂಡು ಸಿನಿಮಾ ಪ್ರದರ್ಶನ ನೀಡುವುದು ಮೂರ್ಖತನ. ಇದರಿಂದ ಲಾಭವೇನೂ ಇಲ್ಲ. ಅದರ ಬದಲಿಗೆ ಹಾಗೇ ಬಂದ್​ ಇಡುವುದೇ ಉತ್ತಮ ಎಂದಿದ್ದಾರೆ. (ಏಜೆನ್ಸೀಸ್​)

    ‘ಮನೆ ಎದುರು ಮೂತ್ರವಿಸರ್ಜನೆ ಮಾಡಿದ್ದಾರೆ’- ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ದೂರು ನೀಡಿದ ಹಿರಿಯ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts