More

    ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್​ ಕಂಪನಿ ತಯಾರಿಸಿದೆ ಲಸಿಕೆ…!

    ವಾಷಿಂಗ್ಟನ್​: ಕರೊನಾ ದೀರ್ಘಕಾಲ ನಮ್ಮನ್ನು ಕಾಡಲಿದೆ. ಅದರೊಂದಿಗೆ ಬದುಕಲು ಕಲಿಯಿರಿ ಎಂಬ ಮಾತನ್ನು ತಜ್ಞರೇ ಹೇಳುತ್ತಿದ್ದಾರೆ. ಅದರಂತೆ ಲಾಕ್​​ಡೌನ್​ ಸಡಿಲಗೊಳಿಸಿ ಸಾಮಾನ್ಯ ಜನಜೀವನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

    ಇನ್ನೊಂದೆಡೆ ಕರೊನಾಗೆ ಲಸಿಕೆ ಕಂಡು ಹಿಡಿಯುವಲ್ಲಿ ಪೈಪೋಟಿಯೂ ನಡೆದಿದೆ. ತಂಬಾಕಿನಲ್ಲೂ ಕರೊನಾ ಗುಣಪಡಿಸುವ ಶಕ್ತಿ ಇದೆ ಎಂದು ಈ ಹಿಂದೆಯೇ ವಾದಿಸಲಾಗಿತ್ತು. ಇದೀಗ ತಂಬಾಕಿನಲ್ಲಿರುವ ಪ್ರೋಟೀನ್​ ಗುಣಗಳನ್ನು ಬಳಸಿ ಲಸಿಕೆ ಸಜ್ಜುಗೊಳಿಸಲಾಗಿದೆ. ವಿಶೇಷವೆಂದರೆ ಪ್ರಸಿದ್ಧ ಸಿಗರೇಟ್​ ತಯಾರಿಕೆ ಕಂಪನಿಯೇ ಇದರ ನಿರ್ಮಾತೃ.

    ಇದನ್ನೂ ಓದಿ; ಎರಡು ದಶಕಗಳಷ್ಟು ಹಿಂದಿನಂತಿದ್ದ ದೆಹಲಿ ಮತ್ತೆ ಮೊದಲಿನಂತಾಯ್ತು…! 

    ಬ್ರಿಟಿಷ್​ ಅಮೆರಿಕನ್​ ಟೊಬ್ಯಾಕೋ (ಬಿಎಟಿ) ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಸಿಗರೇಟ್​ ತಯಾರಿಕಾ ಕಂಪನಿಯಾಗಿದೆ. ಕಳೆದ ಏಪ್ರಿಲ್​ನಲ್ಲಿ ತಂಬಾಕಿನ ಎಲೆಗಳಲ್ಲಿರುವ ಪ್ರೋಟೀನ್​ನಲ್ಲಿ ಕರೊನಾ ಗುಣಪಡಿಸುವ ಶಕ್ತಿ ಇದೆ ಎಂದು ಬಿಎಟಿ ಘೋಷಿಸಿತ್ತು. ಇದೀಗ ಲಸಿಕೆಯನ್ನು ಸಿದ್ಧಗೊಳಿಸಿರುವುದಾಗಿ ಹೇಳಿದೆ. ಇದರ ಕ್ಲಿನಿಕಲ್​ ಟ್ರಯಲ್​ ಅಥವಾ ಮಾನವರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಸಿಗರೇಟ್​​ ಕಂಪನಿ ಪ್ರಸ್ತಾವನೆ ಸಲ್ಲಿಸಿರುವುದನ್ನು ಇಲಾಖೆ ಕೂಡ ಖಚಿತಪಡಿಸಿದೆ.

    ಸರ್ಕಾರಿ ಸಂಸ್ಥೆಗಳು ಹಾಗೂ ಔಷಧ ತಯಾರಿಕಾ ಕಂಪನಿಗಳು ಸಹಕಾರ ನೀಡಿದಲ್ಲಿ ಪ್ರತಿವಾರ ಲಸಿಕೆಯ 10-30 ಲಕ್ಷ ಡೋಸ್​ಗಳನ್ನು ತಯಾರಿಸಿ ನೀಡುವುದಾಗಿ ಕಂಪನಿ ತಿಳಿಸಿದೆ.

    ಇದನ್ನೂ ಓದಿ; ನಂಜನಗೂಡಿನಲ್ಲಿ ತಯಾರಾಗಲಿದೆ ಕರೊನಾಗೆ ಔಷಧ…! 

    ಲಸಿಕೆಯು ಕ್ಲಿನಿಕಲ್​ ಟ್ರಯಲ್​ಗೂ ಮೊದಲಿನ ಹಂತದ ಪರೀಕ್ಷೆಗಳಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ನೀಡಿದೆ ಎಂದು ಕಂಪನಿ ಹೇಳಿಕೊಂಡಿದೆ. ವಿಶ್ವಾದ್ಯಂತ ಹಲವು ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ತೊಡಗಿದ್ದು, ಕ್ಲಿನಿಕಲ್​ ಟ್ರಯಲ್ಸ್​ನಲ್ಲಿ ತೊಡಗಿಕೊಂಡಿವೆ. ಇದೀಗ ಮತ್ತೊಂದು ಕಂಪನಿ ಇದಕ್ಕೆ ಸೇರಿಕೊಂಡಂತಾಗಿದೆ. ಹಾಗಂತಾ ಸಿಗರೇಟ್​ ಸೇದುವವರು ಇದರಿಂದ ಸಂತೋಷ ಪಡಬೇಕಿಲ್ಲ. ಏಕೆಂದರೆ ಸಿಗರೇಟ್​ಗೂ ಲಸಿಕೆಗೂ ಸಂಬಂಧವಿಲ್ಲ.

    ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts