More

    ಕರೊನಾ ಲಸಿಕೆಯ ಎರಡನೇ ಡೋಸ್​ ಪಡೆದ ಪ್ರಧಾನಿ ಮೋದಿ: ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಲು ಕರೆ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಏಮ್ಸ್​ನಲ್ಲಿ ಗುರುವಾರ ಬೆಳಗ್ಗೆ ಕರೊನಾ ಲಸಿಕೆಯ ಎರಡನೇ ಡೋಸ್​ ಪಡೆದರು. ಮಾರ್ಚ್​ 1ರಂದು ಮೊದಲ ಡೋಸ್​ ಪಡೆದಿದ್ದ ಮೋದಿ ಅವರು 1 ತಿಂಗಳ ಬಳಿಕ ಎರಡನೇ ಡೋಸ್​ ಪಡೆದುಕೊಂಡಿದ್ದಾರೆ.

    ಲಸಿಕೆ ಪಡೆದ ಬೆನ್ನಲ್ಲೇ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಇಂದು ಏಮ್ಸ್​ನಲ್ಲಿ ಕರೊನಾ ಲಸಿಕೆಯ ಎರಡನೇ ಡೋಸ್​ ಪಡೆಯಲಾಯಿತು. ವೈರಸ್ ಅನ್ನು ಸೋಲಿಸಲು ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ಲಸಿಕೆಯು ಒಂದಾಗಿದೆ. ಲಸಿಕೆ ಪಡೆಯಲು ನೀವು ಅರ್ಹರಾಗಿದ್ದರೆ, ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಿ. http://CoWin.gov.in ವೆಬ್​ಸೈಟ್​ನಲ್ಲಿ ನೋಂದಾಯಿಸಿಕೊಳ್ಳಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.

    ಪುದುಚೇರಿಯ ಪಿ. ನಿವೇದ ಮತ್ತು ಪಂಜಾಬ್​ನ ನಿಶಾ ಶರ್ಮಾ ಎಂಬ ಇಬ್ಬರು ನರ್ಸ್​ಗಳು ಪ್ರಧಾನಿ ಮೋದಿ ಅವರಿಗೆ ಕರೊನಾ ಲಸಿಕೆಯನ್ನು ಹಾಕಿದರು.

    ಇದನ್ನೂ ಓದಿರಿ: ಪ್ರೀತಿಸಿ ಮದ್ವೆಯಾದ 5 ತಿಂಗಳಿಗೆ ಮೂರು ತಿಂಗಳ ಗರ್ಭಿಣಿ ದುರಂತ ಸಾವು: ಪ್ರೇಮ ವಿವಾಹವೇ ಮುಳುವಾಯ್ತಾ?

    ಪ್ರಧಾನಿಗೆ ಲಸಿಕೆ ನೀಡಿದ ಅನುಭವ ಹಂಚಿಕೊಂಡ ನಿಶಾ ಶರ್ಮಾ, ನಾನಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಗೆ ಕೋವಾಕ್ಸಿನ್ ಎರಡನೇ ಡೋಸ್​ ನೀಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದರು. ನಾನು ಅವರನ್ನು ಭೇಟಿಯಾಗಿದ್ದು ಮತ್ತು ಅವರಿಗೆ ಲಸಿಕೆ ಹಾಕಿದ್ದು ನನಗೆ ಸ್ಮರಣೀಯ ಕ್ಷಣವಾಗಿದೆ ಎಂದಿದ್ದಾರೆ.

    ಮಾರ್ಚ್​ 1ರಂದು ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಏಮ್ಸ್​ನಲ್ಲಿ ನನ್ನ ಮೊದಲ ಕರೊನಾ ಲಸಿಕೆ ಡೋಸ್​ ಪಡೆಯಲಾಯಿತು. ಕೋವಿಡ್​-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಎಲ್ಲ ಅರ್ಹರು ಕರೊನಾ ಲಸಿಕೆ ಪಡೆಯಬೇಕೆಂದು ನಾನು ಮನವಿ ಮಾಡುತ್ತೇನೆ. ಒಟ್ಟಾಗಿ ನಾವು ಭಾರತವನ್ನು ಕೋವಿಡ್​ ಮುಕ್ತವಾಗಿಸೋಣ ಎಂಬ ಸಂದೇಶ ರವಾನಿಸಿದ್ದರು.

    ಲಸಿಕೆ ಪಡೆಯಲು ಬಯಸುವವರು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ನೋಂದಣಿ ಪ್ರಕ್ರಿಯೆಗೆ ವೆಬ್​ಸೈಟ್ cowin.gov.in ನೋಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

    ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದು ದೇಶದ ಜನತೆಗೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    ಚಾಣಕ್ಯನ ಈ ನೀತಿಯನ್ನು ಅನುಸರಿಸಿದರೆ ನಿಮಗೆಂದೂ ಸೋಲಿನ ಅನುಭವ ಆಗುವುದೇ ಇಲ್ಲ!

    ಮೇಕ್ ಇನ್ ಇಂಡಿಯಾ ಯೋಜನೆ: ಉತ್ತಮ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts