More

    ಸ್ನೇಹಿತನ ಮನೆಯಲ್ಲೇ ಸಿಐಡಿ ಡಿವೈಎಸ್​ಪಿ ನೇಣಿಗೆ ಶರಣಾಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದೇನು?

    ಬೆಂಗಳೂರು: ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದ್ದು, ಸದ್ಯದ ಮಾಹಿತಿ ಪ್ರಕಾರ ಲಕ್ಷ್ಮೀ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಬುಧವಾರ ರಾತ್ರಿ ಆತ್ಮಹತ್ಯೆಗು ಮುನ್ನ ಏನೇನು ನಡೆಯಿತು ಎಂಬುದರ ಡಿಟೇಲ್ಸ್​ ಇಲ್ಲಿದೆ.

    ಮೊದಲನೇಯದಾಗಿ ಬುಧವಾರ ರಾತ್ರಿ 10 ಗಂಟೆಗೆ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್​ನ ಪರಿಚಯಸ್ಥರ ಮನೆಯಲ್ಲಿ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿತು. 2012ರಲ್ಲೇ ನವೀನ್​ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ ಲಕ್ಷ್ಮೀ ಅವರಿಗೆ ದಿನ ಕಳೆದಂತೆ ಗಂಡನ ಜತೆ ವೈಮಸ್ಸು ಶುರುವಾಗಿತ್ತು. ಇದರಿಂದಾಗಿಯೇ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಆ್ಯಪ್​ ಮೂಲಕ ಇನ್​ಸ್ಟಂಟ್ ಲೋನ್ ಪಡೆದ ಯುವಕರ ಮಾನ ಜಾಲತಾಣದಲ್ಲಿ ಹರಾಜು: ಆತ್ಮಹತ್ಯೆಗೂ ಯತ್ನ

    ಇನ್ನು ಲಕ್ಷ್ಮೀ ಅವರಿಗೆ 8 ವರ್ಷಗಳಿಂದ ಮಕ್ಕಳಿಲ್ಲದೆ ಖಿನ್ನತೆಗೆ ಒಳಗಾಗಿದ್ದರಂತೆ. ಈ ಹಿನ್ನೆಲೆಯಲ್ಲಿ ಎರಡು ಬಾರಿ ಆತ್ಮಹತ್ಯಗೆ ಯತ್ನಿಸಿದ್ದರಂತೆ. ಈ ಹಿಂದೆ ಆಸ್ಪತ್ರೆಯಿಂದ ಗುಣಮುಖವಾಗಿ ವಾಪಸ್ಸಾಗಿದ್ದರಂತೆ. ನಿನ್ನೆಯೂ ಕೂಡ ಇದೇ ರೀತಿ ಖಿನ್ನತೆಗೆ ಒಳಗಾಗಿದ್ದ ಲಕ್ಷ್ಮಿ ಬಿಬಿಎಂಪಿ ಎ1 ಕಾಂಟ್ರಾಕ್ಟರ್ ಆಗಿರುವ ಸ್ನೇಹಿತ ಮನೋಹರ್ ಮನೆಗೆ ಬಂದಿದ್ದರು.

    ಮನೋಹರ್ ಮನೆಯಲ್ಲಿ ಲಕ್ಷ್ಮಿ ಸೇರಿ ಐವರು ಪಾರ್ಟಿ ಮಾಡಿದ್ದರು. ಬಳಿಕ 10ಗಂಟೆಗೆ ರೂಂಗೆ ತೆರಳಿದ ಲಕ್ಷ್ಮಿ ಕೆಲವೇ ಕ್ಷಣಗಳಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ಸಂಬಂಧ ಮನೋಹರ್ ಮತ್ತೆ ಸ್ನೇಹಿತರನ್ನು ಸಹ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

    ಈ ಹಿಂದೆ ಹಲವು ಬಾರಿ ಮನೋಹರ್​ ಮತ್ತು ಸ್ನೇಹಿತರು ಪಾರ್ಟಿ ಮಾಡಿದ್ದರು. ಸ್ನೇಹಿತರ ಪಾರ್ಟಿ ಹಿನ್ನೆಲೆ ಅಕ್ಕಪಕ್ಕದವರಿಗೆ ತೊಂದರೆಯಾಗಿದ್ದ ಕಾರಣ ಪ್ಲಾಟ್​ನ ಮಾಲೀಕ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡಿದ್ದರಂತೆ. ಆದರೆ, ಎರಡು ತಿಂಗಳಿನಿಂದ ಖಾಲಿ ಮಾಡದೇ ಮನೋಹರ್​ ಸತಾಯಿಸುತ್ತಿದ್ದ.

    ಇದನ್ನೂ ಓದಿ: VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!

    ಮನೋಹರ್​​ ಕೇವಲ ಪಾರ್ಟಿಗಾಗಿಯೇ ಪ್ಲಾಟ್​ ಬಾಡಿಗೆ ಪಡೆದಿದ್ದ. ಈ ಹಿನ್ನೆಲೆ ಹಲವು ಬಾರಿ ಮಾಲೀಕರಿಗೆ ಅಕ್ಕಪಕ್ಕದ ಮನೆಯವರು ದೂರು ನೀಡಿದ್ದರು. ಇಷ್ಟದ್ರೂ ಕೂಡಾ ಯಾವುದಕ್ಕೂ ಕೇರ್ ಮಾಡದೇ ಪಾರ್ಟಿ ಮಾಡುತ್ತಿದ್ದರು.

    ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಲಕ್ಷ್ಮಿ, ಕಳೆದ ಹಲವಾರು ತಿಂಗಳುಗಳಿಂದ ಕಚೇರಿಗೂ ಸರಿಯಾಗಿ ಹೋಗುತ್ತಿರಲಿಲ್ಲ. ಕಾಲಿಗೆ ಏಟು ಮಾಡ್ಕೊಂಡು 4 ತಿಂಗಳು ರಜೆ ಹಾಕಿದ್ದರು. ಕೆಲ ದಿನಗಳ ಹಿಂದೊಮ್ಮೆ ಕಚೇರಿಗೆ ಬಂದು ಹೋಗಿದ್ದರು.

    ಸದ್ಯ ಧರ್ಮೇಂದ್ರ, ಪ್ರಜ್ವಲ್ ಹಾಗೂ ಮನೋಹರ್​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!

    ಪ್ರೇಮ ವಿವಾಹ, ಒಳ್ಳೆಯ ಹುದ್ದೆಯಲ್ಲಿದ್ರೂ ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಶರಣಾಗಿದ್ದೇಕೆ: ಇಲ್ಲಿದೆ ಸ್ಫೋಟಕ ಮಾಹಿತಿ!

    ಊಟಕ್ಕೆಂದು ಪರಿಚಯಸ್ಥರ ಮನೆಗೆ ಹೋದ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಶರಣು..!

    ಅಂಕಲ್​-ಅಪ್ರಾಪ್ತೆಯ ಲವ್ವಿಡವ್ವಿ ಸೂಸೈಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಬಾಲಕಿ ಬಲಿಪಶುವಾದಳಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts