More

    ಪ್ರೇಮ ವಿವಾಹ, ಒಳ್ಳೆಯ ಹುದ್ದೆಯಲ್ಲಿದ್ರೂ ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಶರಣಾಗಿದ್ದೇಕೆ: ಇಲ್ಲಿದೆ ಸ್ಫೋಟಕ ಮಾಹಿತಿ!

    ಬೆಂಗಳೂರು: ಸಿಐಡಿ ಮಹಿಳಾ ಅಧಿಕಾರಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಈ ಮುಂಚೆಯೇ ಲಕ್ಷ್ಮೀ ಅವರು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

    ಕೋಲಾರ ಮೂಲದ ಲಕ್ಷ್ಮೀ ಪ್ರೊಬೆಷನರಿ ಅವಧಿ ಮುಗಿಸಿ 2017ರಲ್ಲಿ ಡಿವೈಎಸ್​ಪಿಯಾಗಿ ನೇಮಕವಾಗಿದ್ದರು. ಮೊದಲ ಹುದ್ದೆಯಲ್ಲೇ ಸಿಐಡಿಯಲ್ಲಿ ನೇಮಕವಾದರು. 8 ವರ್ಷಗಳ ಹಿಂದೆ ನವೀನ್​ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಲಕ್ಷ್ಮೀ ಹಾಗೂ ಪತಿಯ ನಡುವೆ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲವಂತೆ. ಕೋಣನಕುಂಟೆಯಲ್ಲಿ ವಾಸವಾಗಿದ್ದ ಅವರು ಅನ್ನಪೂರ್ಣೇಶ್ವರಿ ನಗರದ ಪ್ಲಾಟ್​ಗೆ ಆಗಾಗ ಬರುತ್ತಿದ್ದರು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರದಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದರಂತೆ.

    ಇದನ್ನೂ ಓದಿ: VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!

    ಸದ್ಯ ಪತಿ ನವೀನ್​ ಹೈದರಾಬಾದ್​ನಲ್ಲಿ ವಾಸವಿದ್ದಾರೆ. ಕಳೆದ ಮೂರು ದಿನದ ಹಿಂದೆ ನವೀನ್​ ಪ್ಲಾಟ್​ಗೆ ಬಂದಿದ್ದರು. ಕೆಲಸಕ್ಕೆ ಸೇರುವ ಮೊದಲೇ ಪ್ರೀತಿಸಿ ಮದುವೆಯಾಗಿದ್ದರು. 2012ರಲ್ಲಿ ಮದುವೆಯಾಗಿದ್ದರು. ಬಳಿಕ 2014ನೇ ಕೆಪಿಎಸ್​ಸಿ ಪರೀಕ್ಷೆಯಲ್ಲಿ ಲಕ್ಷ್ಮೀ ಪಾಸ್ ಅಗಿದ್ದರು. ಕೆಎಸ್​ಪಿಎಸ್ ಆಯ್ಕೆ ಮಾಡಿಕೊಂಡು ಡಿಎಸ್​ಪಿ ಆಗಿ ಕರ್ತವ್ಯ ನಿರ್ವಹಿಸುತಿದ್ದರು.

    ಕಳೆದ ಎರಡು ವರ್ಷಗಳಿಂದ ದಾಂಪತ್ಯ ಜೀವನ ಸರಿಯಾಗಿ ಇರಲಿಲ್ಲ. ನವೀನ್​ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ನವೀನ್ ಬೇಕು ಎಂದು ಲಕ್ಷ್ಮೀ ಹಲವು ಬಾರಿ ಪ್ರಯತ್ನ ಪಟ್ಟಿದ್ದರಂತೆ. ಆದ್ರೆ, ನವೀನ್ ಬೆಂಗಳೂರು ಬಿಟ್ಟು ಹೈದ್ರಾಬಾದ್​ಗೆ ತೆರಳಿದ್ದರು.

    ಇದನ್ನೂ ಓದಿ: ವಿರಾಟ ಯಶಸ್ಸಿನ ಹಿಂದಿನ ಹೋರಾಟ; ದೀಪಾ ಹಿರೇಗುತ್ತಿ ಅವರ ಅಂಕಣ

    ಈ ಹಿಂದೆಯು ಲಕ್ಷ್ಮೀ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿ ಅಸ್ಪತ್ರೆಗೆ ದಾಖಲಾಗಿದ್ದರಂತೆ. ಈ ವೇಳೆ ಮುಂದೆ ಮದ್ಯಸೇವನೆ ಮಾಡದಂತೆ ವೈದ್ಯರು ತಿಳಿಸಿದ್ದರು. ಆದರೆ, ಸಂಸಾರದ ವಿಚಾರವಾಗಿ ಲಕ್ಷ್ಮೀ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಒಮ್ಮೆ ಖಿನ್ನತೆಗೆ ಕೌನ್ಸಲಿಂಗ್ ಸಹ ಮಾಡಸಲಾಗಿದೆ. ಆದರೂ ತೀವ್ರವಾಗಿ ನೊಂದಿದ್ದ ಲಕ್ಷ್ಮೀ ಬುಧವಾರ (ಡಿ.16) ರಾತ್ರಿ ಪರಿಚಯಸ್ಥರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸದ್ಯ ಮೃತ ದೇಹವನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದ್ದು, ಹತ್ತು ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರಿಸಲಾಗುತ್ತದೆ. (ಏಜೆನ್ಸೀಸ್​)

    ಊಟಕ್ಕೆಂದು ಪರಿಚಯಸ್ಥರ ಮನೆಗೆ ಹೋದ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಶರಣು..!

    ವಿವಾಹಿತ ಪುತ್ರಿಗೂ ಅನುಕಂಪದ ನೌಕ್ರಿ; ಸರ್ಕಾರಿ ಉದ್ಯೋಗಕ್ಕೆ ಅರ್ಹ ಎಂದು ಹೈಕೋರ್ಟ್ ಮಹತ್ವದ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts