More

    ನಿತ್ಯಾನಂದನ ಅಹ್ಮದಾಬಾದ್​ ಆಶ್ರಮದಿಂದ ನಾಪತ್ತೆಯಾದ ಯುವತಿಯರು ಕೈಲಾಸದಲ್ಲಿ; ಗುರುವಿನೊಟ್ಟಿಗೆ ಸಂಗೀತಾಭ್ಯಾಸ

    ಅಹ್ಮದಾಬಾದ್​: ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಭಾರತದಿಂದ ಕಳೆದವರ್ಷವೇ ಪರಾರಿಯಾಗಿದ್ದಾನೆ. ವರದಿಗಳ ಪ್ರಕಾರ ಆತ ಕೆರಿಬಿಯನ್​ ಸಮುದ್ರದ ಬಳಿ ‘ಕೈಲಾಸ’ವನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾದವನಾದ ನಿತ್ಯಾನಂದನ ಬಂಧನಕ್ಕೆ ಅಹ್ಮದಾಬಾದ್​ ಪೊಲೀಸರೂ ಪ್ರಯತ್ನ ಮಾಡುತ್ತಿದ್ದಾರೆ.

    ಹಾಗೇ ಈ ವರ್ಷದ ಜನವರಿಯಲ್ಲಿ ನಿತ್ಯಾನಂದನ ಗುಜರಾತ್​​ನಲ್ಲಿರುವ ಆಶ್ರಮದಿಂದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದರು. ಅವರಿಬ್ಬರೂ ಆಶ್ರಮದಿಂದ ಹೋಗಿದ್ದೆಲ್ಲಿಗೆ ಎಂಬುದೇ ಗೊತ್ತಾಗಿರಲಿಲ್ಲ. ಆದರೆ ಇದೀಗ ಮೂಲಗಳ ಪ್ರಕಾರ ಯುವತಿಯರಿಬ್ಬರೂ ನಿತ್ಯಾನಂದನ ಕೈಲಾಸ ಸೇರಿಕೊಂಡು, ಅಲ್ಲಿ ಚಟ್ನಿ ಸಂಗೀತ (Chutney Music)ವನ್ನು ಅಭ್ಯಾಸ ಮಾಡುತ್ತಿದ್ದಾರಂತೆ.

    Chutney Music ಎಂಬುದು ಇಂಡೋ-ಕೆರಿಬಿಯನ್​ ಪ್ರಕಾರದ ಒಂದು ಸಂಗೀತ. ದಕ್ಷಿಣ ಕೆರೆಬಿಯನ್​ನಲ್ಲಿ ಚಾಲ್ತಿಯಲ್ಲಿದ್ದು, ಟ್ರೆನಿಡಾಡ್​, ಗಯಾನಾ ಸೇರಿ ಹಲವು ಕಡೆ ಜನಪ್ರಿಯ ಸಂಗೀತವಾಗಿದೆ. ಭೋಜಪುರಿ ಮತ್ತು ಕೆರಿಬಿಯನ್​ ಶೈಲಿಯ ರಾಗಗಳ ಸಂಯೋಜನೆಯಿಂದ ಹೊರಹೊಮ್ಮಿದ ಚಟ್ನಿ ಸಂಗೀತ ಮೊದಲು ಬೆಳಕಿಗೆ ಬಂದಿದ್ದು 20ನೇ ಶತಮಾನದಲ್ಲಿ. ಇದನ್ನೂ ಓದಿದೇಶದೊಳಗಿನ ಉಗ್ರರು ಇವರು..ಅಪ್ಪ-ಅಮ್ಮನ ಎದುರೇ ಪೊಲೀಸ್​ ಪೇದೆಯನ್ನು ಬರ್ಬರವಾಗಿ ಕೊಂದರು…

    ಇದೀಗ ನಿತ್ಯಾನಂದನ ಗುಜರಾತ್​ನ ಆಶ್ರಮದಿಂದ ಪರಾರಿಯಾದ ಯುವತಿಯರು ಆತನ ಕೆರಿಬಿಯನ್​ ಕೈಲಾಸ ಸೇರಿಕೊಂಡು ಇದೇ ಚಟ್ನಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆಂದು ಅಹ್ಮದ್​ಬಾದ್ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಮಾಧ್ಯಮವೊಂದು ವರದಿ ಮಾಡಿದೆ.

    ಯುವತಿಯರಿಬ್ಬರೂ ಅಕ್ಕ-ತಂಗಿ. 2015ರಿಂದ ಅಹ್ಮದಾಬಾದ್​ನಲ್ಲಿರುವ ನಿತ್ಯಾನಂದನ ಆಶ್ರಮದಲ್ಲಿ ವಾಸವಾಗಿದ್ದರು. ಅವನೊಟ್ಟಿಗೆ ಅನೇಕ ದೇಶಗಳಿಗೂ ಹೋಗಿ ಬಂದಿದ್ದರು.  ಕೆರಿಬಿಯನ್​ಲ್ಲಿರುವ ಕೈಲಾಸ ಎಂಬಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮದಲ್ಲಿ ಈ ಇಬ್ಬರೂ ಯುವತಿಯರು ನೃತ್ಯ ಪ್ರದರ್ಶನ ಮಾಡುತ್ತಿದ್ದುದು ಗೊತ್ತಾಗಿದೆ ಎಂದು ಪೊಲೀಸ್​ ಅಧಿಕಾರಿಯೋರ್ವರೇ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ನಿತ್ಯಾನಂದನ ಬಂಧನಕ್ಕೆ ಇಂಟರ್​ಪೋಲ್​ ಇನ್ನೂ ರೆಡ್​ ಕಾರ್ನರ್​ ನೋಟಿಸ್ ಕೊಟ್ಟಿಲ್ಲ. ಇದೀಗ ಆ ಇಬ್ಬರು ಹುಡುಗಿಯರನ್ನೂ ಕರೆತರಲು ಕೆಲವು ನಿಯಮಗಳು ಅಡ್ಡಿಯಾಗುತ್ತವೆ ಎಂದಿದ್ದಾರೆ.
    ನಿತ್ಯಾನಂದನ ಆಶ್ರಮದಲ್ಲಿದ್ದ ತನ್ನ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ದೂರು ದಾಖಲಿಸಿದ್ದರು. (ಎಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts