More

    ಚಿತ್ತಾಪುರ; ಕೊರಬಾ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಿ

    ಚಿತ್ತಾಪುರ: ದೇವಾನಂದ ಕೊರಬಾ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು, ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಾಡ್ಜಿಂಗ್ ಕ್ರಾಸ್ ಬಳಿ ಕೋಲಿ ಸಮಾಜದಿಂದ ಸೋಮವಾರ ಸಾಂಕೇತಿಕ ಧರಣಿ ನಡೆಸಲಾಯಿತು.

    ಕೋಲಿ ಸಮಾಜದ ಹಿರಿಯ ಮುಖಂಡ ಮಲ್ಲಿಕಾರ್ಜುನ ಎಮ್ಮೆನೂರ ಮಾತನಾಡಿ, ಪ್ರಕರಣವೊಂದರಲ್ಲಿ ಸಿಲುಕಿಸುವ ದೃಷ್ಟಿಯಿಂದ ಪೊಲೀಸರು ಕೊರಬಾಗೆ ಕಿರುಕುಳ ನೀಡಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೇಸ್ ದಾಖಲಿಸಿದರೂ ಆರೋಪಿಗಳನ್ನು ಅರೆಸ್ಟ್ ಮಾಡುವ ಕೆಲಸವಾಗಿಲ್ಲ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಮೃತನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಒಬ್ಬರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.

    ಕೋಲಿ ಸಮಾಜದ ತಾಲೂಕು ಅಧ್ಯP್ಷÀ ರಾಮಲಿಂಗ ಬಾನರ್, ಯುವ ಘಟಕದ ತಾಲೂಕು ಅಧ್ಯP್ಷÀ ಗುಂಡು ಐನಾಪುರ, ಮುಖಂಡರಾದ ಭೀಮಣ್ಣ ಸಾಲಿ, ಬಸವರಾಜ ಚಿನ್ಮಳ್ಳಿ, ಸುರೇಶ ಬೆನಕನಳ್ಳಿ, ಭೀಮರಾಯ ಹೊತಿನಮಡು, ತಮ್ಮಣ್ಣ ಡಿಗ್ಗಿ ಮಾತನಾಡಿದರು. ಲಾಡ್ಜಿಂಗ್ ಕ್ರಾಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶಿರಸ್ತೇದಾರ ಅಶ್ವಥ್ ಕುಲಕರ್ಣಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಪ್ರಮುಖರಾದ ಹಣಮಂತ ಸಂಕನೂರ, ಕರಣಕುಮಾರ ಅಲ್ಲೂರ್, ದಶರಥ ದೊಡ್ಡಮನಿ, ಅಂಬು ಹೋಳಿಕಟ್ಟಿ, ಮಲ್ಲಿಕಾರ್ಜುನ ವಿಜಾಪುರಕರ್, ಶರಣು ಸಿದ್ರಾಮಗೋಳ, ಮಹೇಶ ಸಾತನೂರ, ಚಂದ್ರು ಕಾಳಗಿ, ಮಹಿಪಾಲ್ ಮೂಲಿಮನಿ, ಲಕ್ಷ್ಮೀಕಾಂತ ಸಾಲಿ, ಮಹಾದೇವ ಮುಗುಟಿ, ಸಾಬಣ್ಣ ಹೋಳಿಕಟ್ಟಿ, ಭೀಮಾಶಂಕರ ಹೋಳಿಕಟ್ಟಿ, ಸೂರ್ಯಕಾಂತ ಕೊಂಕನಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts