More

    ಸಂಸದರಿಂದ ಮೇ 3ವರೆಗೆ ಅನ್ನದಾಸೋಹ

    ಚಿತ್ರದುರ್ಗ: ಲಾಕ್‌ಡೌನ್ ಸಂದರ್ಭದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕೆ ಸಂಸದ ಎ.ನಾರಾಯಣಸ್ವಾಮಿ ವೈಯುಕ್ತಿಕವಾಗಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

    ನಗರದ ಹಳೆ ಮಾಧ್ಯಮಿಕ ಶಾಲಾ ಆವರಣ ಗುರುಭವನದ ಬಳಿ ಸೋಮವಾರ ಅನ್ನದಾಸೋಹಕ್ಕೆ ಚಾಲನೆ ನೀಡಿದ ಅವರು, ಮೇ 3ವರೆಗೆ ಈ ಸೇವೆ ನಡೆಯಲಿದೆ. ರೇಷನ್ ಪಡೆದಿರುವವರು, ಜನಧನ ಹಾಗೂ ಕಾರ್ಮಿಕ ಇಲಾಖೆಯಿಂದ ಸಹಾಯಧನ ಪಡೆದವರು ಈ ಸೌಲಭ್ಯ ಪಡೆಯದೇ ಹಸಿದವರಿಗೆ ಇದರ ಪ್ರಯೋಜನ ದೊರೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಎಸ್ಪಿ ಜಿ.ರಾಧಿಕಾ, ಜಿಪಂ ಸಿಇಒ ಎಸ್.ಹೊನ್ನಾಂಬ, ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಮುಖಂಡರಾದ ನಂದಿ ನಾಗರಾಜ್, ಟಿ.ಬದ್ರಿನಾಥ್, ನಗರ ಠಾಣೆ ಪಿಐ ನಯೀಂ ಅಹಮದ್, ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು, ಸಂಸದ ಕಚೇರಿಯ ನಂದೀಶ್, ಮೋಹನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts