More

    ಕೈದಿಗಳಿಗೆ ಸಿಗದ ಟೆಲಿ ಸಂಭಾಷಣೆ ಸವಲತ್ತು

    ಚಿತ್ರದುರ್ಗ: ಕರೊನಾ ಲಾಕ್‌ಡೌನ್‌ನಿಂದಾಗಿ ಕೈದಿಗಳು, ಬಂಧಿತ ಆರೋಪಿತರ ಭೇಟಿಯನ್ನು ಕಾರಾಗೃಹ ಇಲಾಖೆ ನಿಷೇಧಿಸಿದೆ.

    ಲಾಕ್‌ಡೌನ್ ಮೊದಲೇ ಜೈಲುಗಳಿಗೆ ಬರುತ್ತಿದ್ದ ವಿಸಿಟರ್ಸ್‌ಗೆ ನಿರ್ಬಂಧ ಹೇರಲಾಗಿತ್ತು. ಇಂಥ ಸನ್ನಿವೇಶದಲ್ಲಿ ಮನೆಯವರೊಂದಿಗೆ ಮಾತನಾಡೋಣವೆಂದರೆ ಮಂಜೂರಾಗಿರುವ ಫೋನ್ ಸೌಲಭ್ಯಕ್ಕೂ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿನ್ನೂ ಚಾಲನೆ ಸಿಕ್ಕಿಲ್ಲ.

    ಕಾರಾಗೃಹ ನಿವಾಸಿಗಳಿಗೆಂದೇ ರಾಜ್ಯದ ಹಲವು ಜಿಲ್ಲಾ ಕಾರಾಗೃಹಗಳಿಗೆ ಕನಿಷ್ಠ ಎರಡು ದೂರವಾಣಿ ಬೂತ್‌ಗಳ ಸ್ಥಾಪನೆಗೆ ಇಲಾಖೆ 2020ರ ಜೂನ್‌ನಲ್ಲಿ ಮಂಜೂರಾತಿ ಕೊಟ್ಟಿತ್ತು. ಈ ಟೆಲಿಪೋನ್ ಬೂತ್ ಸ್ಥಾಪನೆ ಹೊಣೆ ಹೊತ್ತಿರುವ ಸಂಸ್ಥೆ, ರಾಜ್ಯದ ಕಾರಾಗೃಹಗಳಲ್ಲಿ ಇನ್ನು ಕಾಮಗಾರಿ ಪೂರ್ಣಗೊಳಿಸಿಲ್ಲ.

    ಅಪರಾಧಿಗಳಿಗೆ ಜೈಲು ವಾಸ ಅನುಭವಿಸಲೇ ಬೇಕು ಎಂಬುದು ಗೊತ್ತಿರುತ್ತದೆ. ಆದರೆ, ನಾನಾ ಕಾರಣ, ದುಷ್ಕೃತ್ಯಗಳಿಂದಾಗಿ ಹಠಾತ್ತನೇ ಜೈಲು ಸೇರುವ ವಿಚಾರಣಾಧೀನ ಕೈದಿಗಳಿಗೆ ಮನೆಯವರು, ವಕೀಲರನ್ನು ಸಂಪರ್ಕಿಸಲು ಅನುಕೂಲವಾಗಲಿ ಎಂದು ಹಾಗೂ ಅಕ್ರಮ ಮೊಬೈಲ್ ಬಳಕೆಗೆ ಕಡಿವಾಣ ಬೀಳಲಿ ಎಂದು ಈ ಸವಲತ್ತು ಒದಗಿಸಲಾಗಿತ್ತು. ಆದರೆ, ಜಿಲ್ಲಾ ಕಾರಾಗೃಹದಲ್ಲಿ ಈ ಸೌಲಭ್ಯ ಸದ್ಯಕ್ಕೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.

    ಹೇಗೆ ಕಾರ್ಯನಿರ್ವಹಣೆ: ಕೈದಿಗಳು ಕೊಡುವ ಎರಡು ದೂರವಾಣಿ ಸಂಖ್ಯೆಗಳಿಗೆ ನಿರ್ದಿಷ್ಟ ಸಮಯದಲ್ಲಿ ಫೋನ್ ಮಾಡಲು ಅವಕಾಶವಿರುತ್ತದೆ. ಈ ಕರೆಗಳು ರೆಕಾರ್ಡ್ ಆಗುತ್ತವೆ. ಸದ್ಯದ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಫೋನ್ ಸೌಲಭ್ಯ ಇದ್ದಿದ್ದರೆ ಕಾರಾಗೃಹ ವಾಸಿಗಳಿಗೆ ಅನುಕೂಲವಾಗುತ್ತಿತ್ತು. ಅನೇಕ ದಿನಗಳಿಂದ ಚಿತ್ರದುರ್ಗ ಜೈಲಿನ ಸ್ಥಿರ ದೂರವಾಣಿ ಕೆಟ್ಟಿದೆ.

    ಮಧ್ಯಂತರ ಜಾಮೀನು: ಗಂಭಿರವಲ್ಲದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಕೈದಿಗಳ ಪೈಕಿ ಆರು ಮಂದಿಗೆ ಮಧ್ಯಂತರ ಜಾಮೀನು ಭಾಗ್ಯ ಸಿಕ್ಕಿದೆ. ಕರೊನಾ ಹಿನ್ನೆಲೆಯಲ್ಲಿ ಬುಧವಾರ ಆರು ಮಂದಿ ನ್ಯಾಯಾಲಯ ನಿರ್ದೇಶನದಂತೆ ಬಿಡುಗಡೆ ಆಗಿದ್ದು, ಕಲಾಪ ಆರಂಭದ ಬಳಿಕ ಇವರು ನ್ಯಾಯಾಲಯಗಳಿಗೆ ಮತ್ತೆ ಹಾಜರಾಗಬೇಕಿದೆ. ಸದ್ಯಕ್ಕೆ ಜೈಲಿನಲ್ಲೀಗ 10 ಮಹಿಳೆಯರ ಸಹಿತ 139 ಕೈದಿಗಳು ಉಳಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts