More

    ಶುರುವಾಗಲಿದೆ ಇಪ್ಪತ್ತನೇ ಚಿತ್ರಸಂತೆ; ಭಾರಿ ಜನ ಸಾಗರದ ನಿರೀಕ್ಷೆ…

    ಬೆಂಗಳೂರು: ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಕಲಾ ರಸಿಕರ ಮನಸ್ಸನ್ನು ತೃಪ್ತಿ ಪಡಿಸಲು ಚಿತ್ರ ಸಂತೆಯನ್ನು ಆಯೋಜಿಸಲಾಗುತ್ತದೆ. ಈ ವರ್ಷ 20ನೇ ಚಿತ್ರಸಂತೆ ನಡೆಯಲಿದ್ದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಸುದ್ದಿಗೊಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

    ಈ ಬಾರಿಯ 20ನೇ ಚಿತ್ರಸಂತೆ ವಿಚಾರವಾಗಿ ಸುದ್ದಿಗೊಷ್ಠಿ ನಡೆಸಿದ ಚಿತ್ರಕಲಾ ಪರಿಷತ್ ಅಧ್ಯಕ್ಷರು ಕಾರ್ಯಕ್ರಮದ ರೂಪು ರೇಷೆ ಬಗ್ಗೆ ಮಾಹಿತಿ ನೀಡಿದರು. ‘ಜನವರಿ 8, 2023 ಪ್ರಾರಂಭವಾಗಲಿರುವ ಚಿತ್ರಸಂತೆ ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ನಡೆಯಲಿದೆ. ಈಬಾರಿ ಚಿತ್ರಸಂತೆಯನ್ನು ಭೌತಿಕ ಮತ್ತು ಆನ್ಲೈನ್ ರೂಪದಲ್ಲಿ ಆಯೋಜಿಸಲಾಗುತ್ತಿದೆ’ ಎಂದು ಬಿಎಲ್​ ಶಂಕರ್​ ಹೇಳಿದರು.

    ಇನ್ನಷ್ಟು ಮಾಹಿತಿ ನೀಡಿದ ಚಿತ್ರಕಲಾ ಪರಿಷತ್​ ಅಧ್ಯಕ್ಷರು ‘ಚಿತ್ರಕಲಾ ಸಮ್ಮಾನ್ ಪ್ರಶಸ್ತಿಗೆ ನಾಲ್ವರು ಕಲಾವಿದರನ್ನು ಆಯ್ಕೆಮಾಡಲಾಗುತ್ತದೆ. 18 ರಿಂದ 20 ರಾಜ್ಯಗಳಿಂದ ಕಲಾವಿದರು ಆಗಮಿಸುವ ಸಾಧ್ಯತೆ ಇದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಲಿದ್ದು ಸಿ. ಎನ್. ಅಶ್ವಥ್ ನಾರಾಯಣರಿಂದ ಕಲಾ ಪ್ರದರ್ಶನದ ಉದ್ಘಾಟನೆ ನಡೆಯಲಿದೆ’ ಎಂದರು. ಈ ಬಾರಿ ಆಯ್ದ ಚಿತ್ರಕಲಾವಿದರಿಗೆ ಚಿತ್ಕಲಾ ಪರಿಷತ್​ ಪ್ರಶಸ್ತಿ ನೀಡಲಿದ್ದು ಪ್ರಶಸ್ತಿಗಳ ವಿವರ ಹೀಗಿದೆ: 

    ಈ ಬಾರಿ ಚಿತ್ರಸಂತೆಯಲ್ಲಿ ನೀಡಲಾಗುವ 5 ಪ್ರಶಸ್ತಿಗಳು:

    1.ಪ್ರೊ ಎಂ ಎಸ್ ನಂಜುಂಡರಾವ್ ಪ್ರಶಸ್ತಿ (1 ಲಕ್ಷ )
    2. ಹೆಚ್. ಕೆ. ಕೇಜ್ರಿವಾಲ್ ಪ್ರಶಸ್ತಿ (50 ಸಾವಿರ )
    3. ಎಂ ಆರ್ಯಮೂರ್ತಿ ಪ್ರಶಸ್ತಿ ( 50 ಸಾವಿರ )
    4. ಡಿ. ದೇವರಾಜ ಅರಸು ಪ್ರಶಸ್ತಿ ( 50 ಸಾವಿರ )
    5. ವೈ. ಸುಬ್ರಮಣ್ಯರಾಜು ಪ್ರಶಸ್ತಿ (50 ಸಾವಿರ )

    ಪ್ರತಿದಿನ 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಹಿರಿಯ ಕಲಾವಿದರು, ವಿಶೇಷ ಚೇತನರಿಗೆ ಪರಿಷತ್ತಿನ ಆವರಣದಲ್ಲಿ ಮಳಿಗೆಗೆ ಅವಕಾಶ ನೀಡಲಾಗಿದೆ. ಚಿತ್ರಸಂತೆಯಲ್ಲಿ ಕಲಾ ಪ್ರೇಮಿಗಳಿಗೆ 100 ರೂಪಾಯಿಗಳಿಂದ ಲಕ್ಷದವರೆಗೆ ಕಲಾಕೃತಿಗಳು ದೊರೆಯಲಿವೆ. ಚಿತ್ರಸಂತೆಯಲ್ಲಿ ಭಾಗವಹಿಸುವ 1500ಕ್ಕೂ ಅಧಿಕ ಕಲಾವಿದರಿಗೆ ಊಟ, ತಿಂಡಿ, ನೀರು ಮತ್ತು ಕಲಾಕೃತಿಗಳ ಮಾರಾಟಕ್ಕೆ ಮಳಿಗೆಯನ್ನು ಪರಿಷತ್ತು ಉಚಿತವಾಗಿ ಒದಗಿಸಲಿದೆ.

    ಅಷ್ಟೇ ಅಲ್ಲದೆ ಬೇರೆ ಊರುಗಳಿಂದ ಬರುವ 400ಕ್ಕೂ ಅಧಿಕ ಕಲಾವಿದರಿಗೆ ವಸತಿ ವ್ಯವಸ್ಥೆಯನ್ನು ಪರಿಷತ್ತು ಉಚಿತವಾಗಿ ಕೊಡಲಿದೆ. ಜೊತೆಗೆ ಚಿತ್ರಸಂತೆಯಲ್ಲಿ ವ್ಯಂಗ್ಯ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವಿದೆ. ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಚಿತ್ರಸಂತೆಯಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ನಿಡಲಾಗಿದೆ.

    ಚಿತ್ರಸಂತೆಯ ಪ್ರದರ್ಶನ ಮಳಿಗೆಗಳು ಶಿವಾನಂದ ಸರ್ಕಲ್ ನಿಂದ ವಿಂಡ್ಸರ್ ಮ್ಯಾನರ್ವರೆಗಿನ ಕುಮಾರ ಕೃಪಾ ರಸ್ತೆಯಲ್ಲಿ ಹಾಗೂ ಕ್ರೆಸೆಂಟ್ ರಸ್ತೆಯ ಸ್ವಲ್ಪ ಭಾಗದಲ್ಲಿ ಕಲಾಕೃತಿಗಳ ಪ್ರದರ್ಶನವಿರಲಿದೆ. ಆಗಮಿಸುವ ಕಲಾ ಪ್ರೇಮಿಗಳಿಗೆ ಭಾರತ ಸೇವಾದಳ ಆವರಣ, ಕ್ರೆಸೆಂಟ್ ಮತ್ತು ರೇಸ್ ಕೋರ್ಸ್ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts