More

    ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಸಿನಿಮೋತ್ಸವ ಆಯೋಜನೆ: ನಿರ್ದೇಶಕ ಪಿ.ಶೇಷಾದ್ರಿ ಆಶಯ; ಡಾ. ವೀರೇಂದ್ರ ಹೆಗ್ಗಡೆ ಅವರ ಧರ್ಮದರ್ಶನ ಕೃತಿ ಬಿಡುಗಡೆ

    ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಏರ್ಪಡಿಸುವಂತೆ ಮುಂದಿನ ವರ್ಷದಿಂದ ಚಲನಚಿತ್ರೋತ್ಸವವನ್ನೂ ಆಯೋಜಿಸ ಬೇಕು ಎಂದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಹೇಳಿದರು.

    ಧರ್ಮಸ್ಥಳದಲ್ಲಿ ಬುಧವಾರ ಲಕ್ಷದೀಪೋತ್ಸವ ಪ್ರಯುಕ್ತ ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ನಮ್ಮನ್ನು ಆಕರ್ಷಿಸಿ ಮನಕ್ಕೆ ಆನಂದದ ಅನುಭೂತಿ ನೀಡಿ, ಮೌಲ್ಯವರ್ಧನೆ ಮಾಡಿ, ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ. ಒಳ್ಳೆಯ ಪ್ರೇಕ್ಷಕರಿದ್ದಾಗ ಉತ್ತಮ ಸಿನಿಮಾ ನಿರ್ವಣವಾಗುತ್ತದೆ. ಸಾಹಿತ್ಯದಲ್ಲಿ ಜಾತಿ ಮುಖ್ಯವಲ್ಲ, ನೀತಿ ಮುಖ್ಯ ಎಂದರು.

    ಜಾತಿ-ಮತ, ಭೇದ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಧರ್ಮಸ್ಥಳ ದಲ್ಲಿ ಪ್ರತಿವರ್ಷ ನಡೆಯುವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಅತ್ಯಂತ ಪ್ರಸ್ತುತವಾಗಿದ್ದು ಆರೋಗ್ಯಪೂರ್ಣ ಸಮಾಜ ನಿರ್ವಣಕ್ಕೆ ಪೂರಕ ಎಂದು ವಿಶ್ಲೇಷಿಸಿದರು. ಮೈಸೂರಿನ ವಿದ್ವಾಂಸ ಡಾ.ಎಚ್.ವಿ.ನಾಗರಾಜ್ ರಾವ್ ಮಾತನಾಡಿ, ಮನಸ್ಸು ಅರಳಿಸಿ ಕುತೂಹಲ ಕೆರಳಿಸುವುದೇ ಸಾಹಿತ್ಯದ ಉದ್ದೇಶ. ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಅದನ್ನು ಜೀವನದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದರು.

    ಬೆಂಗಳೂರಿನ ಹಿರಿಯ ಸಮಾಜ ಸೇವಕ ಹಾಗೂ ಉದ್ಯಮಿ ಅನಂತರಾಮಯ್ಯ ವೀರೇಂದ್ರ ಹೆಗ್ಗಡೆ ಅವರನ್ನು ಬಹುಮುಖಿ ಸಮಾಜ ಸೇವೆಗಾಗಿ ಗೌರವಿಸಿ ಅಭಿನಂದಿಸಿದರು. ಬೆಂಗಳೂರಿನ ಸತ್ಯೇಶ್​ಎನ್.ಬೆಳ್ಳೂರ್ ‘ಸಾಹಿತ್ಯದಿಂದ ವ್ಯಕ್ತಿತ್ವ ನಿರ್ವಣ’ ಬಗ್ಗೆ, ಪತ್ರಕರ್ತ ರವೀಂದ್ರ ಭಟ್ಟ ಐನಕೈ ‘ಸಾಹಿತ್ಯ ಮತ್ತು ಮಾಧ್ಯಮ’ ಕುರಿತು ಬಗ್ಗೆ, ತುಮಕೂರಿನ ಲೇಖಕಿ ಡಾ.ಗೀತಾ ವಸಂತ ‘ಸಾಹಿತ್ಯ ಹಾಗೂ ಸಾಮರಸ್ಯ’ ಬಗ್ಗೆ ಉಪನ್ಯಾಸ ನೀಡಿದರು. ‘ವಿಜಯವಾಣಿ’ ಸಂಪಾದಕ ಚನ್ನೇಗೌಡ ಕೆ.ಎನ್, ಸ್ಥಾನೀಯ ಸಂಪಾದಕ ಸುರೇಂದ್ರ ಎಸ್. ವಾಗ್ಳೆ ಉಪಸ್ಥಿತರಿದ್ದರು.

    ಸಾಹಿತ್ಯದ ಅಭಿರುಚಿ ಪರಿಚಯ

    ಸಾಹಿತ್ಯದಲ್ಲಿ ಅಭಿರುಚಿ ಮೂಡಬೇಕಾದರೆ ಜನಸಾಮಾನ್ಯರಿಗೆ ಸಾಹಿತಿಗಳು ಹಾಗೂ ಅವರ ಸಾಹಿತ್ಯದ ಪರಿಚಯ ಮಾಡುವುದು ಮುಖ್ಯವಾಗುತ್ತದೆ. ಆದ್ದರಿಂದಲೇ ನಮ್ಮ ಹಿರಿಯರು ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಂದರ್ಭ ಲಲಿತಕಲಾ ಗೋಷ್ಠಿ, ಸರ್ವಧರ್ಮ, ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮಾಡುವ ಮೂಲಕ ಭಕ್ತಾದಿಗಳಿಗೂ, ಕಲೆ ಹಾಗೂ ಸಾಹಿತ್ಯ ಪ್ರೇಮಿಗಳಿಗೂ ಪೋ›ತ್ಸಾಹ ಹಾಗೂ ಪ್ರೇರಣೆ ನೀಡಿದ್ದಾರೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಯಾವುದಾದರೊಂದು ಭಾಷೆಯು ಸುಸಂಸ್ಕೃತವಾದ ರೂಪ ಪಡೆಯಬೇಕಾದರೆ ಅದಕ್ಕೆ ಸಾವಿರಾರು ವರ್ಷಗಳ ಪರಂಪರೆ ಇರಬೇಕಾಗುತ್ತದೆ. ಆಗ ಮಾತ್ರ ಅವರಲ್ಲಿ ಸರಿಯಾದ ಭಾವನೆಗಳನ್ನು ವ್ಯಕ್ತ ಮಾಡುವ ಶಕ್ತಿಯು ಅಡಕವಾಗುತ್ತದೆ. ಭಾಷೆಯು ನಮ್ಮ ಭಾವನೆಗಳನ್ನು ವ್ಯಕ್ತಗೊಳಿಸುವ ಮುಖ್ಯ ಸಾಧನ. ಭಾಷೆಯು ಪರಿಶುದ್ಧವಾದ ರೂಪವನ್ನು ಪಡೆದ ಮೇಲೆ ಅದರಲ್ಲಿ ವಿಶಿಷ್ಟವಾದ ಕೆಲವು ಭಾವನೆಗಳನ್ನು ವ್ಯಕ್ತಗೊಳಿಸುವ ಶಕ್ತಿಯು ಬರುವುದು ಎಂದರು.

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಕೊನೆಗೂ ಹೆಚ್ಚಾಯ್ತು ಹಾಲು-ಮೊಸರು ದರ; ನಾಳೆಯಿಂದಲೇ ಹೊಸ ಬೆಲೆ ಜಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts