More

    ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಗಿಫ್ಟ್​ಗೆ ಭಾವುಕರಾಗಿದ್ರು ಮೇಘನಾ: ಚಿರು ಬಯಸಿದ್ದು ಯಾವ ಮಗು?

    ಬೆಂಗಳೂರು: ಚಿರಂಜೀವಿ ಸರ್ಜಾರ ಅಕಾಲಿಕ ನಿಧನದಿಂದಾಗಿ ಕುಟುಂಬ ಹಾಗೂ ಅಭಿಮಾನಿಗಳು ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಇಡೀ ಚಿತ್ರರಂಗವೇ ಚಿರು ಸಾವಿಗೆ ಕಂಬನಿ ಮಿಡಿದಿದ್ದು, ಈ ಕ್ಷಣಕ್ಕೂ ಚಿರು ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ. ನಟನಾಗಿ ವೃತ್ತಿ ಜೀವನ ಆರಂಭಿಸಿದ್ದ ಚಿರು, ಬಹುಕಾಲದ ಗೆಳತಿ ನಟಿ ಮೇಘನಾರನ್ನು ಮದುವೆಯಾಗಿ ಸುಂದರ ಸಾಂಸಾರಿಕ ಜೀವನ ಸಾಗಿಸುತ್ತಿದ್ದರು. ಇನ್ನು ಕೆಲವೇ ತಿಂಗಳುಗಳಲ್ಲಿ ಅಪ್ಪನಾಗಿ ಜೀವನದ ಮತ್ತೊಂದು ಮಜಲು ಆರಂಭಿಸಬೇಕಿದ್ದ ಚಿರು ಬಾಳಿನಲ್ಲಿ ವಿಧಿ ಕ್ರೌರ್ಯವನ್ನೇ ಮೆರೆದುಬಿಟ್ಟಿದೆ.

    ಮೇಘನಾ-ಚಿರು ಬಹುದಿನಗಳಿಂದ ಸಿನಿಮಾ ಕ್ಷೇತ್ರದಲ್ಲಿದ್ದವರು. ಸುಮಾರು 10 ವರ್ಷಗಳ ಪರಿಚಯದಲ್ಲಿ ಪ್ರೇಮಾಂಕುರವಾಗಿ 2018ರಲ್ಲಿ ಕುಟುಂಬದ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಪ್ತಪದಿಯನ್ನು ತುಳಿದಿದ್ದರು. ಕಳೆದ ಮೇ ತಿಂಗಳಿನಲ್ಲಿ ಚಿರು-ಮೇಘನಾ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ನೇರವೇರಿಸಿಕೊಂಡಿದ್ದರು. ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ

    ಇದರ ನಡುವೆ ಮೇಘನಾ ಗರ್ಭಿಣಿ ಎಂಬ ಸುದ್ದಿ ಚಿರು ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಪತ್ನಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಅಪ್ಪನಾಗುವ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದ ಚಿರು, ಮೇಘನಾಗೆ ಗೊಂಬೆಯೊಂದನ್ನು ಉಡುಗೊರೆಯನ್ನಾಗಿ ನೀಡಿದ್ದರಂತೆ. ಪತಿ ಕೊಟ್ಟ ಉಡುಗೊರೆ ನೋಡಿ ಮೇಘನಾ ಸಹ ಭಾವುಕರಾಗಿದ್ದರು. ದುಃಖಕರ ಸಂಗತಿಯೆಂದರೆ ಇದೇ ಕೊನೆಯ ಉಡುಗೊರೆಯಾಗುತ್ತದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ. ಇದೆಂತಹ ದುರ್ವಿಧಿ ಅಲ್ಲವೇ?

    ಮಗು ವಿಚಾರದಲ್ಲೂ ಕನಸು ಕಟ್ಟಿಕೊಂಡಿದ್ದ ಚಿರು ತನಗೆ ಹೆಣ್ಣು ಮಗು ಬೇಕೆಂಬ ಆಸೆಯನ್ನು ಹೊಂದಿದ್ದರು. ಪತ್ನಿ ಗರ್ಭಿಣಿ ಎನ್ನುವ ವಿಚಾರ ಕುಟುಂಬಕ್ಕಷ್ಟೇ ಗೊತ್ತಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆಯೂ ಈ ವಿಚಾರ ಹಂಚಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಅಷ್ಟರಲ್ಲೇ ನಡೆಯಿತು ಯಾರು ಊಹಿಸದ ಘಟನೆ. ಚಿರು ನೆನಪುಗಳನ್ನು ಬಿಟ್ಟು ಹೊರಟೇ ಹೋದರು.

    ಚಿರುವನ್ನು ತುಂಬಾ ಪ್ರೀತಿಸುತ್ತಿದ್ದ ಮೇಘನಾ, ಪತಿ ಅಗಲಿಕೆಯಿಂದ ಕಣ್ಣೀರಲ್ಲೇ ಕೈತೊಳೆದಿದ್ದಾರೆ. ಮೇಘನಾರನ್ನು ನೋಡಿದ ಎಷ್ಟೋ ಮಂದಿ ದೇವರಿಗೆ ಹಿಡಿಶಾಪ ಹಾಕಿರುವುದೇ ಹೆಚ್ಚು. (ಏಜೆನ್ಸೀಸ್​)

    ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts