More

    ‘ಲೂಸಿಫರ್​’ ಚಿತ್ರದ ತೆಲುಗು ರೀಮೇಕ್​ಗೆ ನೋ ಎಂದ ಚಿರಂಜೀವಿ

    ಹೈದರಾಬಾದ್​: ‘ಆಚಾರ್ಯ’ ಚಿತ್ರದ ನಂತರ ಮಲಯಾಳಂನ ಹಿಟ್​ ಚಿತ್ರ ‘ಲೂಸಿಫರ್​’ನ ತೆಲುಗು ರೀಮೇಕ್​ನಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು ಟಾಲಿವುಡ್​ನ ಮೆಗಾಸ್ಟಾರ್​ ಚಿರಂಜೀವಿ. ಮೂಲ ಚಿತ್ರದಲ್ಲಿ ಮೋಹನ್​ ಲಾಲ್​ ಮಾಡಿದ ಪಾತ್ರವನ್ನು, ಚಿರಂಜೀವಿ ತೆಲುಗು ರೀಮೇಕ್​ನಲ್ಲಿ ಮಾಡಬೇಕಿತ್ತು. ಆದರೆ, ‘ಲೂಸಿಫರ್​’ ಚಿತ್ರದ ತೆಲುಗು ರೀಮೇಕ್​ಗೆ ಚಿರಂಜೀವಿ ನೋ ಎಂದಿದ್ದಾರಂತೆ.

    ಇದನ್ನೂ ಓದಿ: ರಾವಣ ಆಗ್ತಾರಾ ರಣವೀರ್? … ಸೀತೆಯ ದೃಷ್ಟಿಕೋನದಲ್ಲಿ ಇನ್ನೊಂದು ರಾಮಾಯಣ

    ‘ಲೂಸಿಫರ್​’ ನೋಡಿ ಬಹಳ ಖುಷಿಯಾಗಿದ್ದ ಚಿರಂಜೀವಿ, ಆ ಚಿತ್ರದ ರೀಮೇಕ್​ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಅದರಂತೆ. ಜನವರಿಯಲ್ಲಿ ಚಿತ್ರದ ಮುಹೂರ್ತ ಸಹ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಸಹ ಶುರುವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರೀಕರಣ ನಿಂತಿತ್ತು. ಇದೀಗ ಚಿರಂಜೀವಿ ಅವರು ಮನಸ್ಸು ಬದಲಾಯಿಸಿದ್ದು, ಚಿತ್ರದಲ್ಲಿ ನಟಿಸುವುದಕ್ಕೆ ನೋ ಎಂದಿದ್ದಾರಂತೆ. ಅದರ ಬದಲು ಇನ್ನೊಂದು ಕಥೆ ತನ್ನಿ ಎಂದು ನಿರ್ಮಾಪಕರಿಗೆ ಹೇಳಿದ್ದಾರಂತೆ.

    ಇಷ್ಟಕ್ಕೂ ಅಂಥದ್ದೇನಾಯಿತು ಎಂಬ ಪ್ರಶ್ನೆ ಬರುವುದು ಸಹಜ. ಮೂಲಗಳ ಪ್ರಕಾರ, ಕಥೆಯಲ್ಲಿ ಮಾಡಿಕೊಂಡ ಬದಲಾವಣೆಗಳು ಚಿರಂಜೀವಿಗೆ ಸರಿ ಬರಲಿಲ್ಲವಂತೆ. ಮುಂಚೆ ಈ ಚಿತ್ರವನ್ನು ಸುಜಿತ್​ ನಿರ್ದೇಶಿಸಬೇಕಿತ್ತು. ಆದರೆ, ಅವರು ಕಾರಣಾಂತರಗಳಿಂದ ಚಿತ್ರತಂಡದಿಂದ ಹೊರ ನಡೆದರು. ಆ ನಂತರ ವಿ.ವಿ. ವಿನಾಯಕ್​ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡರು. ಅವರು ಸಹ ಅರ್ಧದಲ್ಲೇ ಬಿಟ್ಟು ಹೋದರು.

    ಇದನ್ನೂ ಓದಿ: ಕನ್ನಡದ ಹಿರಿಯ ನಟ ಕೃಷ್ಣೇಗೌಡ ವಿಧಿವಶ, ತಿಂಗಳ ಹಿಂದೆಯೇ ಕರೊನಾಗೆ ಮಗ ಬಲಿಯಾದರೂ ತಂದೆಗೆ ತಿಳಿಯಲೇ ಇಲ್ಲ

    ಕೊನೆಗೆ ನಿರ್ದೇಶಕ ಮೋಹನ್​ ರಾಜ ನೇತೃತ್ವದಲ್ಲಿ ಚಿತ್ರವೇನೋ ಪ್ರಾರಂಭವಾಯಿತು. ಆದರೆ, ಪದೇಪದೇ ನಿರ್ದೇಶಕರು ಮತ್ತು ಕಥೆ ಬದಲಾವಣೆಯಾಗಿದ್ದು ಚಿರಂಜೀವಿ ಅವರಿಗೆ ಕಿರಿಕಿರಿಯಾಯಿತಂತೆ. ಅದೇ ಕಾರಣಕ್ಕೆ ಅವರು ಈ ಚಿತ್ರವನ್ನೇ ಕೈಬಿಟ್ಟು, ಇನ್ನೊಂದು ಬೇರೆ ಚಿತ್ರ ಮಾಡೋಣ ಎಂದು ನಿರ್ಮಾಪಕರಿಗೆ ಹೇಳಿದ್ದಾರಂತೆ. ಇದಕ್ಕೆ ನಿರ್ಮಾಪಕರು ಸಹ ಓಕೆ ಎಂದಿದ್ದು, ಹೊಸ ಕಥೆಯೊಂದಕ್ಕೆ ಹುಡುಕಾಟ ನಡೆದಿದೆ ಎಂದು ಹೇಳಲಾಗುತ್ತಿದೆ.

    ‘ಗುರುಗಳಿಗೆ ಕಿಚ್ಚನ ನಮನ’ ಸಂಕಷ್ಟದಲ್ಲಿರುವ ಶಿಕ್ಷಕರ ಸಹಾಯಕ್ಕೆ ಮುಂದಾದ ಸುದೀಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts