More

    ‘ಗುರುಗಳಿಗೆ ಕಿಚ್ಚನ ನಮನ’ ಸಂಕಷ್ಟದಲ್ಲಿರುವ ಶಿಕ್ಷಕರ ಸಹಾಯಕ್ಕೆ ಮುಂದಾದ ಸುದೀಪ್​

    ಬೆಂಗಳೂರು: ಕರೊನಾದಿಂದಾಗಿ ಪೂರ್ತಿ ಸಮಾಜವೇ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಅನೇಕರು ಸಹಾಯಹಸ್ತವನ್ನೂ ಚಾಚಿದ್ದಾರೆ. ಅದೇ ರೀತಿ ಸ್ಯಾಂಡಲ್​ವುಡ್​ ಸ್ಟಾರ್​ ಕಿಚ್ಚ ಸುದೀಪ್​ ಕೂಡ ಅನೇಕರ ಸಹಾಯಕ್ಕೆ ಮುಂದಾಗಿದ್ದು, ಇದೀಗ ಪಾಠ ಕಲಿಸುವ ಶಿಕ್ಷಕರ ಕಷ್ಟಕ್ಕೂ ಸ್ಪಂದಿಸಲಾರಂಭಿಸಿದ್ದಾರೆ.

    “ನೀವು ರೂಪಿಸಿದ ಈ ವ್ಯಕ್ತಿತ್ವ.. ನೀವು ಕಲಿಸಿದ ವಿದ್ಯೆ.. ನೀವು ಕಲಿಸಿದ ಮಾತುಗಳು.. ಎಲ್ಲವನ್ನು ಗೌರವ ಮತ್ತು ಪ್ರೀತಿಯಿಂದ ನಿಮಗೆ ಹಿಂದಿರುಗಿಸುವ ಸಮಯ.. ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಕರೋನಾ ಸಂಕಷ್ಟದ ಕಾಲದಲ್ಲಿ ನಿಮ್ಮ ಜತೆ ನಾವಿದ್ದೇವೆ ಅನ್ನುವ ಸಮಯ.” ಎಂದು ಸುದೀಪ್​ ಅವರ ಕಿಚ್ಚ ಸುದೀಪ ಚಾರಿಟೇಬಲ್​ ಸೊಸೈಟಿ ಗುರುಗಳಿಗೆ ಕಿಚ್ಚನ ನಮನ ಅಭಿಯಾನ ಆರಂಭಿಸಿದೆ.

    'ಗುರುಗಳಿಗೆ ಕಿಚ್ಚನ ನಮನ' ಸಂಕಷ್ಟದಲ್ಲಿರುವ ಶಿಕ್ಷಕರ ಸಹಾಯಕ್ಕೆ ಮುಂದಾದ ಸುದೀಪ್​
    ಈ ಅಭಿಯಾನದಲ್ಲಿ ಕರ್ನಾಟಕದ ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲಾಗುವುದು. ಮೊದಲನೇ ಹಂತದಲ್ಲಿ 50 ಶಿಕ್ಷಕರಿಗೆ ತಲಾ 2000 ರೂಪಾಯಿ ಧನ ಸಹಾಯ ಮಾಡುವುದಾಗಿ ತಿಳಿಸಲಾಗಿದೆ.

    ನೀವು ಖಾಸಗಿ ಶಾಲೆಯ ಶಿಕ್ಷಕರಾಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದರೆ, 6360334455 ಈ ಸಂಖ್ಯೆಗೆ ಕರೆ ಮಾಡಿ, ನಾವು ನಿಮಗೆ ಸಹಾಯ ಮಾಡಲು ಸಿದ್ಧವಿದ್ದೇವೆ ಎಂದಿದೆ ಕಿಚ್ಚನ ತಂಡ. ಈ ತಂಡದಿಂದ ಈ ಹಿಂದೆ ಅನೇಕ ಹಿರಿಯ ಕಲಾವಿದರಿಗೂ ಸಹಾಯ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts