More

    ಆಂಧ್ರಪ್ರದೇಶ: ಪವನ್ ಕಲ್ಯಾಣ್​​ ಬೆಂಬಲಕ್ಕೆ ನಿಂತ ಮೆಗಾಸ್ಟಾರ್​! ಜನಸೇನಾ ಪರ ಪ್ರಚಾರಕ್ಕೆ ಬರ್ತಾರ ಚಿರಂಜೀವಿ?

    ವಿಜಯವಾಡ: ಮೆಗಾಸ್ಟಾರ್ ಚಿರಂಜೀವಿ ತನ್ನ ಸಹೋದರ ಜನಸೇನಾ ಸಂಸ್ಥಾಪಕ ಪವನ್​ ಕಲ್ಯಾಣ್​ಗೆ ಬರೋಬ್ಬರಿ ಐದು ಕೋಟಿ ದೇಣಿಗೆ ನೀಡಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರುವಂತೆ ಆರ್ಶೀವಾದ ಮಾಡಿದ್ದಾರೆ. ಕಲ್ಯಾಣ್, ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಿಠಾಪುರಂನಿಂದ ಸ್ಪರ್ಧಿಸಲಿದ್ದಾರೆ.

    ಇದನ್ನೂ ಓದಿ:  ಗೋಮಾಂಸ ಬೆರೆತ ಸಮೋಸಾ ಮಾರಾಟ: ಆರು ಮಂದಿ ವಶಕ್ಕೆ

    ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಮತ್ತು ಕೇಂದ್ರದಲ್ಲಿ ಬಿಜೆಪಿಯೊಂದಿಗೆ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಪವನ್ ಕಲ್ಯಾಣ್ ಅವರು ರಾಜ್ಯದಿಂದ ಸ್ಪರ್ಧಿಸಲು ಬಯಸುವುದಾಗಿ ಘೋಷಿಸಿದ್ದರು.
    2019ರ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ್ ಗಾಜುವಾಕ ಮತ್ತು ಭೀಮಾವರಂ ಎಂಬ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದು, ವೈಎಸ್‌ಆರ್‌ಸಿ ಅಭ್ಯರ್ಥಿಗಳ ವಿರುದ್ಧ ಪರಾಭವಗೊಂಡಿದ್ದರು.

    ಆಂಧ್ರಪ್ರದೇಶ: ಪವನ್ ಕಲ್ಯಾಣ್​​ ಬೆಂಬಲಕ್ಕೆ ನಿಂತ ಮೆಗಾಸ್ಟಾರ್​! ಜನಸೇನಾ ಪರ ಪ್ರಚಾರಕ್ಕೆ ಬರ್ತಾರ ಚಿರಂಜೀವಿ?

    ವಿಶ್ವಂಭರ ಸಿನಿಮಾದ ಶೂಟಿಂಗ್ ಸ್ಥಳದಲ್ಲಿ ತನ್ನ ಸಹೋದರ ಪವನ್ ಕಲ್ಯಾಣ್​ಗೆ ಐದು ಕೋಟಿ ರೂಪಾಯಿ ಚೆಕ್ ನೀಡಿದರು.  ಕಲ್ಯಾಣ್ ಜೊತೆಗೆ ಮತ್ತೊಬ್ಬ ಮೆಗಾ ಬ್ರದರ್ ನಾಗಬಾಬು ಕೂಡ ಮುಚ್ಚಿಂತಲ್ ಲೊಕೇಶನ್ ಗೆ ತೆರಳಿದ್ದರು. ಈ ವೇಳೆ ಮೂವರು ಸಹೋದರರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ರಾಜಕಾರಣದಿಂದ ದೂರ ಉಳಿದಿರುವ ಚಿರಂಜೀವಿ ತನ್ನ ಸಹೋದರ ಕಲ್ಯಾಣ್​ ಪರ ಪ್ರಚಾರಕ್ಕೆ ಬರ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಕುರಿತು ಚಿರು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಆದರೆ ಮೆಗಾ ಕುಟುಂಬದ ಅಭಿಮಾನಿಗಳು ಚುನಾವಣಾ ಪ್ರಚಾರಕ್ಕೆ ಬರಲಿ ಎಂದು ಆಶಿಸುತ್ತಿದ್ದಾರೆ.

    ಚಿರಂಜೀವಿಗೆ ಇಬ್ಬರು ಸಹೋದರರು, ಇಬ್ಬರು ತಂಗಿಯರು. ತನ್ನ ಜೊತೆ ಸಹೋದರನನ್ನು ಪ್ರಯೋಜಕರನ್ನಾಗಿ ಮಾಡುವ ಕನಸು ಕಟ್ಟಿಕೊಂಡಿದ್ದ ಚಿರು ಅವರೇ ಆಸೆಯಂತೆ ಪವನ್ ಕಲ್ಯಾಣ್​ ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿ ಅಪಾರ ಜನಬೆಂಬಲವನ್ನು ಸಂಪಾದಿಸಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದ ಪವನ್ ಕಲ್ಯಾಣ್ ಈ ಬಾರಿ ಪಿಠಾಪುರಂ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

    ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಕೃಷಿಯಲ್ಲಿ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಹಿಡುವಳಿ ರೈತರಿಗಾಗಿ ರೈತ ಭರವಸೆ ಅಭಿಯಾನ ನಡೆಸಿದ್ದರು. ಆ ಸಂದರ್ಭದಲ್ಲಿ ನೂರಾರು ರೈತರಿಗೆ ಸ್ವಂತ ನಿಧಿಯಿಂದ ಆರ್ಥಿಕ ನೆರವು ನೀಡಿದ್ದರು. ಈ ವೇಳೆ ಪವನ್ ಕಲ್ಯಾಣ್ ತಾಯಿ ಕೂಟ ಆರ್ಥಿಕ ಸಹಾಯ ಮಾಡಿದ್ದರು.

    ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದದಲ್ಲಿ, ಆಂಧ್ರಪ್ರದೇಶದಲ್ಲಿ ಬಿಜೆಪಿ 6 ಲೋಕಸಭಾ ಸ್ಥಾನಗಳು ಮತ್ತು 10 ವಿಧಾನಸಭಾ ಸ್ಥಾನಗಳನ್ನು ಪಡೆಯುತ್ತದೆ. ಟಿಡಿಪಿ 17 ಲೋಕಸಭಾ ಸೀಟು ಮತ್ತು 144 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.ಪವನ್ ಕಲ್ಯಾಣ್ ಅವರ ಪಕ್ಷವು ಎರಡು ಲೋಕಸಭೆ ಮತ್ತು 21 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ. ಆಂಧ್ರಪ್ರದೇಶವು 25 ಲೋಕಸಭೆ ಮತ್ತು 175 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ.

    ಬಿಜೆಪಿ ಸುಳ್ಳು ರಾಮಯ್ಯ ಟೀಕೆಗೆ ಸಿದ್ದರಾಮಯ್ಯ ಕೊಟ್ಟ ರಿಯಾಕ್ಷನ್ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts