More

    ಗೋಮಾಂಸ ಬೆರೆತ ಸಮೋಸಾ ಮಾರಾಟ: ಆರು ಮಂದಿ ವಶಕ್ಕೆ

    ವಡೋದರಾ: ಗ್ರಾಹಕರಿಗೆ ಗೊತ್ತಾಗದ ರೀತಿಯಲ್ಲಿ ಸಮೋಸಾ ಒಳಗೆ ಗೋಮಾಂಸ ಬೆರೆಸಿ ಮಾರಾಟ ಮಾಡಿದ ಪ್ರಕರಣದಲ್ಲಿ ಆರು ಮಂದಿಯನ್ನು ಗುಜರಾತ್‌ನ ವಡೋದರಾದಲ್ಲಿ ಬಂಧಿಸಲಾಗಿದೆ.

    ಇದನ್ನೂ ಓದಿ: ಹಿಂದೂ ವಿವಾಹಕ್ಕೆ ಕನ್ಯಾದಾನ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್‌ ತೀರ್ಪು

    ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಶನಿವಾರ (ಏಪ್ರಿಲ್​ 6) ವಡೋದರಾ ಚಿಪ್ಪಾಡ್​ ಪ್ರದೇಶದಲ್ಲಿ ಫೇಮಸ್​ ಸಮೋಸ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಗೋಮಾಂಸ ಸೇರಿಸಿದ್ದ ಸಮೋಸಾಗಳು ಪತ್ತೆಯಾಗಿದೆ. ಗೋಮಾಂಸ ತುಂಬಿದ್ದ ನೂರಾರು ಕಿಲೋಗ್ರಾಂ ಸಮೋಸಾಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಮಳಿಗೆ ಮಾಲೀಕರೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ವಶಕ್ಕೆ: ದನದ ಮಾಂಸ ತುಂಬಿದ್ದ ನೂರಾರು ಸಮೋಸಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಳಿಕ, ಸಮೋಸಾ ಒಳಗೆ ಗೋಮಾಂಸ ಸೇರ್ಪಡೆಯಾಗಿರುವುದು ದೃಢಪಟ್ಟಿದೆ. ಇದರಿಂದ ಶನಿವಾರ ವಶಕ್ಕೆ ಪಡೆದಿದ್ದ 6 ಅರೋಪಿಗಳನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ. ಬಂಧಿತರ ಪೈಕಿ ಯೂಸೂಫ್ ಶೇಖ್, ನಯೀಮ್ ಶೇಖ್ ಈ ಮಳಿಗೆಯ ಮಾಲೀಕರು. ಇವರಲ್ಲದೆ ನಾಲ್ವರು ಕಾರ್ಮಿಕರೂ ಇದ್ದಾರೆ. ಇವರನ್ನು ಹನೀಫ್ ಭತಿಯಾರಾ, ದಿಲ್ವರ್ ಪಠಾಣ್, ಮೊಯಿನ್ ಹಬ್ದಲ್ ಹಾಗೂ ಮೊಬಿನ್ ಶೇಖ್ ಎಂದು ಗುರುತಿಸಲಾಗಿದೆ.

    ಘಟನೆಯ ಸಂಪೂರ್ಣ ವಿವರ: ವರದಿಯ ಪ್ರಕಾರ, ನಗರದಾದ್ಯಂತ ಅನೇಕರು ಈ ಸಮೋಸಗಳನ್ನು ಗೋಮಾಂಸ ಎಂದು ತಿಳಿಯದೆ ಸಮೋಸ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ ಮಾಲೀಕರು ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಹಸಿ ಸಮೋಸಾಗಳನ್ನು ತಯಾರಿಸಿ ನಗರದಾದ್ಯಂತ ಇರುವ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಜೊತೆಗೆ ಅವುಗಳನ್ನು ತಮ್ಮ ಅಂಗಡಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದರು ಡಿಸಿಪಿ ಪನ್ನಾ ಮೊಮಾಯಾ ತಿಳಿಸಿದ್ದಾರೆ.

    ಆರೋಪಿಗಳು ಐದು ಅಂತಸ್ತಿನ ಕಟ್ಟಡದಲ್ಲಿ ಸಮೋಸ ತಯಾರಿ ಮಾಡುತ್ತಿದ್ದರು. ಹಾಗೂ ಒಂದು ಕೊಠಡಿಯನ್ನು ಗೋಮಾಂಸ ಹಾಗೂ ಇತರೆ ಮಾಂಸವನ್ನು ಸಂಗ್ರಹಿಸಲು ಡೀಪ್ ಫ್ರೀಜರ್ ಆಗಿ ಪರಿವರ್ತಿಸಿದ್ದರು ಎನ್ನಲಾಗಿದೆ. ಬಂಧಿತರಲ್ಲಿ ಓರ್ವ ಯೂಸುಫ್ ಶೇಖ್ ವಿಚಾರಣೆಯ ವೇಳೆ, ತನ್ನ ತಂದೆ ಸಮೋಸಾ ಮಾರಾಟ ಮಾಡುತ್ತಿದ್ದರು ಮತ್ತು ಇದೀಗ ತಾನೂ ಈ ವ್ಯವಹಾರಕ್ಕೆ ಸೇರಿಕೊಂಡೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸಮೋಸಾ ತಯಾರಿಕೆಗೆ ಈ ಆರೋಪಿಗಳು ಅನುಮತಿ ಪಡೆದಿರಲಿಲ್ಲ ಎನ್ನುವ ಮಾಹಿತಿಯೂ ತನಿಖೆ ವೇಳೆ ಬಹಿರಂಗಗೊಂಡಿದೆ.

    ಕುರಿ ಅಥವಾ ಮೇಕೆಯ ಮಾಂಸ ಬಳಸಲಾಗುತ್ತದೆ. ಆದರೆ ಅವುಗಳು ಈಗ ದುಬಾರಿ. ಹೀಗಾಗಿ ಹಸು, ಎಮ್ಮೆಗಳ ಮಾಂಸವನ್ನು ಬೆರೆಸಿ ಆರೋಪಿಗಳು ಅದರಲ್ಲಿ ಸಮೋಸಾ ತಯಾರಿ ಮಾಡುತ್ತಿದ್ದವು ಇದರಿಂದ ಹೆಚ್ಚು ಲಾಭ ಗಳಿಸಿದ್ದೇನೆ ಎಂದು ಯೂಸುಫ್ ಶೇಖ್ ಪೊಲೀಸರಿಗೆ ತಿಳಿಸಿದ್ದಾರೆ.
    ಆರೋಪಿಗಳು ಗೋಮಾಂಸ ಮಿಶ್ರಿತ ಸಮೋಸಾಗಳನ್ನು ಎಷ್ಟು ಸಮಯದಿಂದ ಮಾರಾಟ ಮಾಡುತ್ತಿದ್ದರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಮೊಮಾಯಾ ಹೇಳಿದ್ದಾರೆ.

    ಮಮತಾ ಬ್ಯಾನರ್ಜಿ ಕೋಟೆಯಲ್ಲಿ ಅರಳುತ್ತಾ ಕಮಲ?: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಲೆಕ್ಕಾಚಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts