More

    ಹಿಂದೂ ವಿವಾಹಕ್ಕೆ ಕನ್ಯಾದಾನ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್‌ ತೀರ್ಪು

    ಗುಜರಾತ್​​: ಹಿಂದೂ ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಲು ಸಪ್ತಪದಿಯಿದ್ದರೆ ಸಾಕು ಹಿಂದೂ ವಿವಾಹ ಕಾಯ್ದೆಯಡಿ ವಿವಾಹವನ್ನು “ಕನ್ಯಾದಾನ” ಮಾಡುವ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ ಲಕ್ನೋ ಪೀಠ ಹೇಳಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ದೂರು! ಕಾರಣ ಹೀಗಿದೆ?

    ಅಶುತೋಷ್ ಯಾದವ್ ಎಂಬ ವ್ಯಕ್ತಿ ಸಲ್ಲಿಸಿದ್ದ ಕ್ರಿಮಿನಲ್​ ಪರಿಷ್ಕರಣೆ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರ ಪೀಠವು ಹೇಳಿದೆ. ಹಿಂದೂ ವಿವಾಹದ ಶಾಸ್ತ್ರಗಳಲ್ಲಿ ‘ಕನ್ಯಾದಾನ’ ವಿಧಿವಾಧಾನವನ್ನು ಮಾಡುವ ಅಗತ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

    ಕನ್ಯಾದಾನವು ಹಿಂದೂ ವಿವಾಹಗಳಲ್ಲಿ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದರಲ್ಲಿ ತಂದೆ ತನ್ನ ಮಗಳನ್ನು ವರನಿಗೆ ಧಾರೆ(ದಾನ) ಎರೆದು ಕೊಡುತ್ತಾನೆ. ಸಮಾಜದಲ್ಲಿ ಅನೇಕ ಮಹಿಳೆಯರು ಅಂತಹ ಆಚರಣೆಯ ಪ್ರಾಬಲ್ಯವನ್ನು ಪ್ರಶ್ನಿಸಿದ್ದಾರೆ, ಅದು ಸರಳವಾದ ಪುರುಷ ಪ್ರಧಾನವಾಗಿ ಕಾಣುತ್ತದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

    ಕಾಯಿದೆಯ ಸೆಕ್ಷನ್ 7 ಹಿಂದೂ ವಿವಾಹದ ಅತ್ಯಗತ್ಯ ಸಮಾರಂಭವಾಗಿ “ಸಪ್ತಪದಿ” (ಪವಿತ್ರ ಬೆಂಕಿಯ ಮೊದಲು ವರ ಮತ್ತು ವಧು ಜಂಟಿಯಾಗಿ ಏಳು ಹೆಜ್ಜೆಗಳನ್ನು ತೆಗೆದುಕೊಳ್ಳುವುದು) ಮಾತ್ರ ಒದಗಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

    ಕನ್ಯಾದಾನ ನಡೆಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಈ ಪ್ರಕರಣದ ನ್ಯಾಯಯುತ ನಿರ್ಧಾರಕ್ಕೆ ಅನಿವಅರ್ಯವಿಲ್ಲ. ಆದ್ದರಿಂದ ಈ ವಿಷಯವನ್ನು ಸಾಬೀತುಪಡಿಸಲು ಸೆಕ್ಷನ್ 311 ಸಿಆರ್​​ಪಿಸಿ ಅಡಿಯಲ್ಲಿ ಪರಿಷ್ಕರಣೆದಾರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ. ಸಾಕ್ಷಿಗಳನ್ನು ಕರೆಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts