More

    ವಿಶ್ವ ಹೂಡಿಕೆದಾರರ ಸೆಳೆಯಲಿದೆ ಬೆಂಗಳೂರಿನ ಚಿಂಗಾರಿ; ಸಂಗೀತ ಸಂಯೋಜಕರಿಗೂ ಆದಾಯ

    ಬೆಂಗಳೂರು: ಚೀನಿ ಆ್ಯಪ್​ಗಳು ಬ್ಯಾನ್ ಆದ ದಿನದಿಂದಲೂ ಭಾರತದ ಆ್ಯಪ್​ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಅದರಲ್ಲೂ ರಾಜಧಾನಿಯ ಸ್ಟಾರ್ಟಪ್​ಗಳಿಗಂತೂ ಇನ್ನಿಲ್ಲದ ಡಿಮ್ಯಾಂಡ್​ ಹುಟ್ಟಿಕೊಂಡಿದೆ.

    ಚೀನಾದ ಟಿಕ್​ಟಾಕ್​ಗೆ ಭಾರತದ ಉತ್ತರವಾಗಿರುವ ಚಿಂಗಾರಿ ಭಾರಿ ಜನಪ್ರಿಯಗೊಂಡಿದೆ. ಪ್ರತಿದಿನ 50 ಲಕ್ಷ ಜನರು ಇದರ ಸಕ್ರಿಯ ಬಳಕೆದಾರರಾಗಿದ್ದಾರೆ ಎಂದು ಕಂಪನಿ ಹೇಳಿದೆ.

    ಇದನ್ನೂ ಓದಿ; ಒಂದೂವರೆ ದಿನದಲ್ಲಿ ಒಂದೂವರೆ ಕೋಟಿ ಜನರು ಫಿದಾ ಆದ್ರು; ಜಗದಗಲ ಬೆಳಗಿದ ಬೆಂಗಳೂರಿನ ಕೀರ್ತಿ 

    ಇದರ ವಿಶೇಷತೆಗಳನ್ನು ಇನ್ನಷ್ಟು ಹೆಚ್ಚಿಸಿ, ಹೊಸ ಫೀಚರ್​ಗಳನ್ನು ಪರಿಚಯಿಸಲು ಕಂಪನಿ ಮುಂದಾಗಿದೆ. ಕೆಲ ದಿನಗಳಲ್ಲಿಯೇ ಇದನ್ನು ಬಿಡುಗಡೆ ಮಾಡಿ ಅಪ್​ಡೇಟ್​ ನೀಡಲಿದೆ.

    ಹೆಚ್ಚುತ್ತಿರುವ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಳ್ಳಲು ಕಂಪನಿ ನಿರ್ಧರಿಸಿದೆ. ಬೆಂಗಳೂರು ಮೂಲದ ಈ ಕಂಪನಿ ಸಹ ಸಂಸ್ಥಾಪಕ ಸುಮಿತ್​ ಘೋಷ್​ ಜಾಗತಿಕ ಬಂಡವಾಳ ಹೂಡಿಕೆದಾರರಿಂದ ಹಣ ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೂಡಿಕೆದಾರರು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಈ ತಿಂಗಳ ಕೊನೆಯಲ್ಲಿ ಅಧಿಕೃತ ಘೊಷಣೆ ಮಾಡುವ ನಿರೀಕ್ಷೆ ಇದೆ.

    ಇದನ್ನೂ ಓದಿ; ಎಂಸಿಎ ಇನ್ನು ಎರಡು ವರ್ಷದ ಕೋರ್ಸ್​; ಎಇಸಿಟಿಇ ಆದೇಶ; ಹೇಗಿರಲಿದೆ ಪಠ್ಯಕ್ರಮ?

    ಈ ಹಿಂದಿನ ಯೋಜನೆಯಂತೆ ಐದಾರು ತಿಂಗಳ ನೀಲಿನಕ್ಷೆ ಹೊಂದಲಾಗಿತ್ತು. ಈಗ ಅದನ್ನು ಮೂರು ತಿಂಗಳಿಗೆ ಇಳಿಸಲಾಗಿದೆ. ಭವಿಷ್ಯದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಹೊಸ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಘೋಷ್​ ಹೇಳಿದ್ದಾರೆ.

    ಚಿಂಗಾರಿಯಲ್ಲೂ ವಿಡಿಯೋ ವೀಕ್ಷಣೆ ಆಧಾರದಲ್ಲಿ ಹಣ ಗಳಿಸಬಹುದು. ಜತೆಗೆ ಸಂಗೀತ ಸಂಯೋಜಕರೂ ಕೂಡ ಹಣ ಸಂಪಾದಿಸಲು ಅವಕಾಶ ಕಲ್ಪಿಸಲಿದೆ. ಆ್ಯಪ್​ನಲ್ಲಿ ಹೊಸ ಇಂಟರ್​ಫೇಸ್​, ಲೈವ್​ ಸ್ಟ್ರೀಮಿಂಗ್​ಗೂ ಸೌಲಭ್ಯ ಕಲ್ಪಿಸಲಾಗುವುದು ಎಂದು ಕಂಪನಿ ತಿಳಿಸಿದೆ.

    ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts