More

    ತಲೆನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಶಾಕ್​: 17 ವರ್ಷದಿಂದ ಮೆದುಳಿನಲ್ಲೇ ಇತ್ತು!

    ಬೀಜಿಂಗ್​: ಸುಮಾರು 17 ವರ್ಷಗಳಿಂದ ಚೀನಾ ವ್ಯಕ್ತಿಯೊಬ್ಬನ ಮೆದುಳಿನಲ್ಲಿದ್ದ ಐದು ಇಂಚಿನ ಜೀವಂತ ಪರಾವಲಂಬಿ ಹುಳುವನ್ನು ಸರ್ಜರಿ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ. ಕಾಡು ಪ್ರಾಣಿಗಳು ಹಸಿಮಾಂಸವನ್ನು ಸೇವಿಸಿದ್ದರಿಂದ ಪರಾವಲಂಬಿಗಳು ದೇಹ ಸೇರಿರಬಹುದೆಂದು ವೈದ್ಯರು ಹೇಳಿದ್ದಾರೆ.

    ರೋಗಿಯ ಹೆಸರನ್ನು ಚೆನ್​​ (23) ಎಂಬ ಸರ್​ನೇಮ್​ನಿಂದ ಗುರುತಿಸಲಾಗಿದೆ. ಮಂಗಳವಾರ ಪೂರ್ವ ಚೀನಾದ ಜಿಯಾಂಗ್ಸೂ ಪ್ರಾಂತ್ಯದ ಫಸ್ಟ್​ ಅಫಿಲಿಯೆಟೆಡ್​ ಹಾಸ್ಪಿಟಲ್​ ಆಫ್​ ವುಚ್ಯಾಂಗ್​ನಲ್ಲಿ ಚೆನ್​ಗೆ ಸರ್ಜರಿ ನಡೆಸಿ, ಮೆದುಳಿನಿಂದ ಹುಳುವನ್ನು ಹೊರತೆಗೆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಮಗಳು ಬೇರೆ ಜಾತಿಯವನನ್ನು ಮದುವೆ ಆದಳೆಂದು ಅಪ್ಪ-ಅಮ್ಮ ಸಂಪಿಗೆ ಹಾರಿದ್ರು..

    ಚೆನ್​ ಆರು ವರ್ಷದ ಬಾಲಕನಾಗಿದ್ದಾಗಿನಿಂದಲೇ ಕೈ-ಕಾಲುಗಳ ಮರಗಟ್ಟುವಿಕೆ ಆರಂಭವಾಗಿತ್ತಂತೆ. ಅಲ್ಲದೆ, ಕೆಲವೊಮ್ಮೆ ತಲೆನೋವು ಮತ್ತು ವಾಕರಿಕೆ ಕೂಡ ಬರುತ್ತಿತ್ತಂತೆ. ಇದರಿಂದ ಸಾಕಷ್ಟು ಬಳಲಿದ್ದ ಚೆನ್​, ಕೊನೆಗೆ ತನ್ನ ದೇಹದ ಮೇಲಿನ ಅರ್ಧ ಭಾಗ ಸಂವೇದನೆ ಕಳೆದುಕೊಂಡಾಗ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಪರೀಕ್ಷಿಸಿದ ವೈದ್ಯರು ಕಪ್ಪೆ ಅಥವಾ ಹಾವಿನ ಮಾಂಸವನ್ನು ಅರ್ಧ ಬೇಯಿಸಿ ತಿನ್ನುವುದೇ ಸೋಂಕಿಗೆ ಕಾರಣ ಎಂದು ಹೇಳಿದ್ದಾರೆ.

    ಪ್ರಾರಂಭದಲ್ಲಿ ಇದೊಂದು ಅನುವಂಶೀಯ ಸಮಸ್ಯೆ ಇರಬಹುದು ಅಂದುಕೊಂಡು ಚೆನ್​ ಇದನ್ನು ನಿರ್ಲಕ್ಷಿಸಿದ್ದ. ಕೆಲವೊಮ್ಮೆ ಆತನ ಕೈಕಾಲುಗಳನ್ನು ಸಹ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದರ ನಡುವೆ ಆತನ ದೇಹದ ಮೇಲಿನ ಅರ್ಧ ಭಾಗ ಸಂವೇದನೆಯನ್ನು ಕಳೆದುಕೊಂಡಾಗ​ ಕೊನೆಗೆ 2015ರಲ್ಲಿ ವೈದ್ಯಕೀಯ ಚಿಕಿತ್ಸೆಗೆ ನಿರ್ಧಿರಿಸಿದ.

    ಬಳಿಕ ಚೆನ್​ ಅನ್ನು ವೈದ್ಯರ ನಿಗಾದಲ್ಲಿ ಇಡಲಾಗಿತ್ತು. ಚೆನ್​ಗೆ 18 ವರ್ಷ ವಯಸ್ಸಾಗಿದ್ದಾಗ ಮೊದಲ ಸರ್ಜರಿ ನಡೆಯಿತು. ಆದರೆ, ಪರಾವಲಂಬಿ ಹುಳು ಮೆದುಳಿನಲ್ಲಿ ಇದ್ದುದ್ದರಿಂದ ಸೂಕ್ಷ್ಮವಾಗಿ ಆರಪೇಷನ್​ ಮಾಡಬೇಕಾದ್ದರಿಂದ ಅನೇಕ ಪ್ರಕ್ರಿಯೆಗಳ ಬಳಿಕ ಆಗಸ್ಟ್​ 25ರಂದು ಸರ್ಜರಿ ನಡೆಸಿ ಐದು ಇಂಚಿನ ಹುಳುವನ್ನು ಹೊರ ತೆಗೆದಿದ್ದಾರೆ. ಚೆನ್​ ಸಹ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಸರ್ಕಾರ ಸೂಕ್ತ ರಕ್ಷಣೆ ಕೊಟ್ರೆ ಸತ್ಯ ಹೇಳ್ತೇನೆ: ಸ್ಯಾಂಡಲ್​ವುಡ್​ ಕುರಿತು ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ!

    ಚಂದನವನಕ್ಕಿದೆಯಾ ನಶೆಯ ನಂಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts