More

    ಬೆನ್ನುಹುರಿ ದೇಹದ ಪ್ರಮುಖ ಅಂಗ

    ಶಿರಾಳಕೊಪ್ಪ: ಬೆನ್ನುಹುರಿ ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ಬೆನ್ನಿನ ಮಧ್ಯಭಾಗದಲ್ಲಿ ಮಿದುಳಿನಿಂದ ಗುದದ್ವಾರದವರೆಗೆ 33 ಹುರಿಗಳ ಜೋಡಣೆಯೊಂದಿಗೆ ಬೆಸೆದಿದೆ ಎಂದು ಸಾರ್ವಜನಿಕ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹಲಿಂಗ ಕೊಳ್ಳೆ ಹೇಳಿದರು.
    ಪಟ್ಟಣದ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಗುರುವಾರ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಶಿಕಾರಿಪುರ, ಸಮುದಾಯ ಆಸ್ಪತ್ರೆ ಶಿರಾಳಕೊಪ್ಪ, ಎಚ್.ಸಿ.ಎಲ್.ಫೌಂಡೇಷನ್ ಮತ್ತು ದಿ.ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ರಾಣೇಬೆನ್ನೂರು ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೆನ್ನುಹುರಿ ಸಮಸ್ಯೆ ಇರುವ ವ್ಯಕ್ತಿಗಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ, ವ್ಯಾಯಾಮ ಸೇರಿ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಬೆನ್ನುಹುರಿ ಮಧ್ಯ ಭಾಗದಲ್ಲಿ ಹಗ್ಗದ ರೀತಿಯಲ್ಲಿ ಅನೇಕ ನರಗಳಿದ್ದು ದೇಹದ ಇತರ ಎಲ್ಲ ಭಾಗಗಳಿಗೆ ಹರಡಿದೆ. ಇವು ದೇಹದ ಎಲ್ಲ ಭಾಗದಿಂದ ಸಂದೇಶಗಳನ್ನು ತೆಗೆದುಕೊಂಡು ಮೆದುಳಿಗೆ ತಲುಪಿಸಿ ಪುನಃ ಮೆದುಳಿನಿಂದ ಕಾರ್ಯರೂಪಕ್ಕೆ ತರುವಂತೆ ಮಾಡುತ್ತವೆ. ಅಪಘಾತವಾದಾಗ ಬೆನ್ನುಹುರಿ ನರಗಳಿಗೂ ಹಾನಿಯಾದರೆ ಮೆದುಳಿನ ಸಂಪಕರ್ ತಪ್ಪುತ್ತದೆ. ದೇಹದ ಕೆಳಭಾಗದ ಎಲ್ಲ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಇದಕ್ಕೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಇದೆ ಎಂದು ಹೇಳಿದರು.
    ಡಾ. ಸಂತೋಷಕುಮಾರ್ ಮಾತನಾಡಿ, ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಪಾಲಿಸಿ ಸಾಮಾನ್ಯರಂತೆ ಆತ್ಮವಿಶ್ವಾಸದಿಂದ ಜೀವನ ಸಾಗಿಸಲು ಇದು ಸಹಾಯಕ ಎಂದರು. ಡಾ. ಸೌಮ್ಯಾ ಮಾತನಾಡಿ, ಅಪಘಾತಕ್ಕೊಳಗಾದ ವ್ಯಕ್ತಿಗಳು ಎದೆಗುಂದದೆ ಆತ್ಮಸ್ಥೈರ್ಯದಿಂದ ಜೀವನ ಸಾಗಿಸಬೇಕು ಎಂದರು. ಕಾರ್ಯಾಗಾರದಲ್ಲಿ 16 ಜನ ಭಾಗವಹಿಸಿದ್ದರು. ಸಂಸ್ಥೆಯ ಸಂಯೋಜಕ ನಿಂಗಪ್ಪ ಕೆ. ದೊಡ್ಮನಿ, ಧನ್ಯಶ್ರೀ, ಗೀತಾ, ಪುಷ್ಪಾವತಿ, ಪ್ರಶಾಂತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts