More

    ನೆರೆ ಮನೆಯ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆ!

    ಬೀಜಿಂಗ್: ನೆರೆಹೊರೆಯ ಮನೆಯವರು ಎಂದರೆ ಜಗಳಗಳು ಸರ್ವೆಸಾಮಾನ್ಯವಾಗಿದೆ. ಇಂದು ಕಿತ್ತಾಡಿ ನಾಳೆ ಒಂದಾಗುವವರಿದ್ದಾರೆ. ಆದರೆ ಇಲ್ಲೊಬ್ಬ ಮಾಡಿದ ಕೆಲವನ್ನು ಕೇಳಿದ್ರೆ ಶಾಖ್​ ಆಗುವುದು ಖಂಡಿತಾ ಹೌದು. ತನ್ನ ನೆರೆ ಮನೆಯಾತನ ವಿರುದ್ಧ ಸೇಡು ತೀರಿಸಿಕೊಳ್ಳಲು 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಿದ ಘಟನೆ ಚೀನಾದಲ್ಲಿ ನಡೆದಿದೆ.

    ಗು ಎಂಬಾತ ಆರೋಪಿ. ಈತನಿಗೆ ಸೇರಿದ್ದ ಮರಗಳನ್ನು ನೆರೆಮನೆಯ ಝಾಂಗ್ ಅನುಮತಿಯಿಲ್ಲದೇ ಕತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಗು, ತನ್ನ ನೆರೆಮನೆಯ ಝಾಂಗ್‍ನ ಕೋಳಿ ಫಾರ್ಮ್‍ಗೆ ನುಗ್ಗಿ ಕೋಳಿಗಳ ಸಾವಿಗೆ ಕಾರಣನಾಗಿದ್ದಾನೆ.

    ಇದನ್ನೂ ಓದಿ: VIDEO | ಮದುವೆ ಮಂಟಪದಲ್ಲಿ ಕುಳಿತು ಗುಂಡು ಹಾರಿಸಿದ ವಧು! ಮುಂದೆನಾಯ್ತು..?

    ಕೋಳಿ ಫಾರ್ಮ್‍ನಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಭಯಭೀತಗೊಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿದ್ದ 460 ಕೋಳಿಗಳು ಹೆದರಿ ಮೃತಪಟ್ಟಿದೆ. ಘಟನೆಯ ನಂತರ ಗುನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ 35,734 ರೂ. ದಂಡವಾಗಿ ಪಾವತಿಸಲು ಸೂಚಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಗೂ, ಝಾಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದಾನೆ. ಅದರಂತೆ ಆತ 2ನೇ ಬಾರಿಗೆ ಕೋಳಿ ಫಾರ್ಮ್‍ಗೆ ಹೋಗಿ ಅಲ್ಲಿದ್ದ 640 ಕೋಳಿಗಳನ್ನು ಕೊಂದಿದ್ದಾನೆ. ಒಟ್ಟಾರೆಯಾಗಿ 1,100 ಕೋಳಿಗಳು ಮೃತಪಟ್ಟಿದ್ದು, ಅವೆಲ್ಲವೂ ಸುಮಾರು 1,64,855 ರೂ. ಮೌಲ್ಯದ್ದಾಗಿವೆ.

    ಇದನ್ನೂ ಓದಿ: ತ್ರಿಶೂಲ ಹಿಡಿದು ರಸ್ತೆಗಿಳಿದಿಲ್ಲವೆಂದರೆ ಮುಂದೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ: BJP ಮುಖಂಡ
    ಈ ಘಟನೆಗೆ ಸಂಬಂಧಿಸಿ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ಕೌಂಟಿಯ ನ್ಯಾಯಾಲಯವು “ಗೂ” ಉದ್ದೇಶಪೂರ್ವಕವಾಗಿ ಆಸ್ತಿ ನಷ್ಟವನ್ನು ಉಂಟುಮಾಡಿದ್ದಾನೆಂದು ತೀರ್ಪು ನೀಡಿದೆ. ನ್ಯಾಯಾಲಯವು ಆತನಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಈ ಸುದ್ದಿ ಸೋಶಿಯಲ್​ ಮೀಡಿಯಾ ತುಂಬಾ ಸುದ್ದಿಯಾಗಿದೆ.

    ಪಾನಿಪುರಿಗಾಗಿ ಬಸ್​​ ನಿಲ್ಲಿಸಿ ಕೆಲಸ ಕಳೆದುಕೊಂಡ ಬಸ್ ಚಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts