ತ್ರಿಶೂಲ ಹಿಡಿದು ರಸ್ತೆಗಿಳಿದಿಲ್ಲವೆಂದರೆ ಮುಂದೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ: BJP ಮುಖಂಡ

Case registered against man for India will become Muslim nation in 5 7 years remark
Published on

ನವದೆಹಲಿ: ಬಿಜೆಪಿಯ ನಾಯಕ ಜೈ ಭಗವಾನ್ ಗೋಯಲ್ ಎಂಬುವವರು ಈಶಾನ್ಯ ದೆಹಲಿಯಲ್ಲಿ ಯುನೈಟೆಡ್ ಹಿಂದೂ ಫ್ರಂಟ್ ಆಯೋಜಿಸಿದ ಪಂಚಾಯತ್ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯಯ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ಹೇಳಿಕೆಗಳು ಹೆಚ್ಚಾಗತೊಡಗುತ್ತದೆ. ಕೆಲವೊಮ್ಮೆ ನಾಯಕರು ತಮ್ಮ ಮಿತಿಯನ್ನು ದಾಟಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ನಾವು ತ್ರಿಶೂಲ ಹಿಡಿದು ರಸ್ತೆಗಿಳಿಯದಿದ್ದರೆ ಮುಂದಿನ 5-7 ವರ್ಷಗಳಲ್ಲಿ ಭಾರತವು ಮುಸ್ಲಿಂ ರಾಷ್ಟ್ರವಾಗಲಿದೆ ಎಂದು ಬಿಜೆಪಿ ಮುಖಂಡ ಜೈ ಭಗವಾನ್ ಹೇಳಿಕೆ ನೀಡಿದ್ದು, ಇದೀಗ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯುನೈಟೆಡ್ ಹಿಂದೂ ಫ್ರಂಟ್ ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಮುಖಂಡರು ಭಾಗವಹಿಸಿದ್ದರು. ಮುಸ್ಲಿಂ ರಾಷ್ಟ್ರದ ಹೊರತಾಗಿ ಜೈ ಭಗವಾನ್ ಗೋಯಲ್ ಮುಸ್ಲಿಮರ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ. ಎಲ್ಲ ಮುಸ್ಲಿಮರು ಒಂದೇ ಎಂಬ ಕಾರಣಕ್ಕೆ ಯಾವುದೇ ಮುಸಲ್ಮಾನರೂ ಪಿಎಫ್‌ಐ ವಿರೋಧಿಸಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net