More

    ‘ಗಡಿ ನಿಯಮಗಳನ್ನು ಚೀನಾ ಗೌರವಿಸುತ್ತಿಲ್ಲ…ಎಂಥದ್ದೇ ಸಂದರ್ಭ ಬಂದರೂ ಎದುರಿಸಲು ಸಿದ್ಧ’ -ರಕ್ಷಣಾ ಸಚಿವ

    ನವದೆಹಲಿ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಇಂದು ಸಂಸತ್ತಿನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಮಾತನಾಡಿದರು.

    ಈಗಿನವರೆಗೂ ಭಾರತ ಮತ್ತು ಚೀನಾದ ನಡುವಿನ ಗಡಿ ಸಂಘರ್ಷ ಹಾಗೇ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗಲಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದು ರಾಜನಾಥ್​ ಸಿಂಗ್​ ವಿವರಿಸಿದರು.
    ಗಡಿಯಲ್ಲಿನ ಸಾಂಪ್ರದಾಯಿಕ ಜೋಡಣೆಗಳನ್ನು ಚೀನಾ ಮಾನ್ಯ ಮಾಡುತ್ತಿಲ್ಲ. ಅಲ್ಲಿನ ನಿಯಮಗಳನ್ನು ಗೌರವಿಸುತ್ತಿಲ್ಲ ಎಂದೂ ಹೇಳಿದರು.

    ಹಾಗೇ ಪೂರ್ವ ಲಡಾಖ್​​ನಲ್ಲಿ ಚೀನಾದ ಅತಿಕ್ರಮಣ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಆದರೆ ಚೀನಾ ಸೈನಿಕರು ಹಿಂಸಾತ್ಮಕ ನಡೆಯ ಮೂಲಕ ಈ ಹಿಂದಿನ ಎಲ್ಲ ಒಪ್ಪಂದಗಳನ್ನೂ ಉಲ್ಲಂಘಿಸಿದ್ದಾರೆ. ನಮ್ಮ ಭೂಪ್ರದೇಶಗಳ ರಕ್ಷಣೆ ಮಾಡಲು ಭಾರತೀಯ ಸೈನಿಕರು ಸಮರ್ಥವಾಗಿ ನಿಯೋಜಿಸಲ್ಪಟ್ಟಿದ್ದಾರೆ ಎಂದು ತಿಳಿಸಿದರು. ಅದ್ಯಾವುದೇ ಸಂದರ್ಭ ಬಂದರೂ ಅದನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ ಎಂಬ ಭರವಸೆಯನ್ನು ನಾನು ಈ ಕ್ಷಣದಲ್ಲಿ ನೀಡಬಲ್ಲೆ ಎಂದು ರಾಜನಾಥ್ ಸಿಂಗ್​ ಹೇಳಿದರು.

    ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಗಡಿಗಳನ್ನು ಕಾಯುತ್ತಿರುವ ಸಶಸ್ತ್ರಪಡೆಯೊಂದಿಗೆ ನಾವೆಲ್ಲರೂ ನಿಲ್ಲಬೇಕು ಎಂಬ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಸದನವನ್ನು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಭಾರತ-ಚೀನಾ ಗಡಿ ಸಂಘರ್ಷ ಶುರುವಾದ ನಂತರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹೇಳಿಕೆ ನೀಡುತ್ತಿದ್ದಾರೆ. (ಏಜೆನ್ಸೀಸ್​)

    ಅಭಿಮಾನಿಗಳ ಹಾರೈಕೆಗೆ ಸಿಕ್ಕಿತು ಫಲ: ಎಸ್​ಪಿಬಿ ಚೇತರಿಕೆ- ಮಗನಿಂದ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts