More

    ಮಾರಣಾಂತಿಕ ಕರೊನಾಗೆ ಸೆಡ್ಡು ಹೊಡೆದು 103 ವರ್ಷದ ಶತಾಯುಷಿ ಬದುಕುಳಿದಿದ್ದು ಹೇಗೆ?

    ವುಹಾನ್​: ಚೀನಾದ ವುಹಾನ್​ನಲ್ಲಿ ಸ್ಪೋಟಗೊಂಡ ಮಾರಕ ಕರೊನಾ ವೈರಸ್​ ಸದ್ಯ ಚೀನಾದಲ್ಲಿ ತಹಬದಿಗೆ ಬಂದಿದೆ. ಅಚ್ಚರಿಯೆಂದರೆ, ವುಹಾನ್​ನ 103 ವರ್ಷದ ವೃದ್ಧೆಯೊಬ್ಬರು ಕೇವಲ 6 ದಿನದ ಚಿಕಿತ್ಸೆಯಲ್ಲಿ ಕರೊನಾದಿಂದ ಗುಣಮುಖರಾಗಿದ್ದಾರೆ.

    ಶತಾಯುಷಿ ಜಾಂಗ್​ ಗೌಂಗ್​ಫೆನ್​ರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಇಲ್ಲಿಯವರೆಗೆ ಕರೊನಾದಿಂದ ಗುಣಮುಖರಾದ ಅತ್ಯಂತ ಹಿರಿಯ ರೋಗಿ ಎನಿಸಿಕೊಂಡಿದ್ದಾರೆ. ಹಿಂದೆ ಈ ದಾಖಲೆ 101 ವರ್ಷದ ವ್ಯಕ್ತಿಯ ಹೆಸರಿನಲ್ಲಿತ್ತು.

    ಮಾರ್ಚ್​ 1ರಂದು ಕೇಂದ್ರ ಚೀನಾದ ಹುಬೇ ಪ್ರಾಂತ್ಯದ ವುಹಾನ್​ನಲ್ಲಿರುವ ಲಿಯುನ್ ಸ್ವಾಯತ್ತ ಆಸ್ಪತ್ರೆ ಟಾಂಗ್ಜಿ​ ಮೆಡಿಕಲ್​ ಕಾಲೇಜಿನಲ್ಲಿ ಕರೊನಾ ಚಿಕಿತ್ಸೆಗೆಂದು ವೃದ್ಧೆ ದಾಖಲಾಗಿದ್ದರು. ಆರಂಭದಲ್ಲಿಯೇ ಗಂಭೀರವಾದ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕೇವಲ ವೈದ್ಯರೊಂದಿಗೆ ಮಾತ್ರ ಸಂವಹನ ನಡೆಸುತ್ತಿದ್ದರು ಎಂದು ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯ ಜೆಂಗ್​ ಯುಲಾನ್​ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ನರ್ಸ್​ಗಳು ರೋಗಿಗೆ ಸ್ಪೂನ್​ ಮೂಲಕ ಆಹಾರ ನೀಡುತ್ತಿದ್ದರು. ಆಗಾಗ ಡೈಪರ್​ ಅನ್ನು ಬದಲಾಯಿಸುತ್ತಿದ್ದರು. ದಿನದ 24 ಗಂಟೆಯು ಅವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ನ್ಯೂಟ್ರಿಷನ್​ ಥೆರಪಿ ನೀಡಿದ್ದರಿಂದ ಕೇವಲ ಒಂದು ವಾರದೊಳಗೆ ಚೇತರಿಸಿಕೊಂಡರು ಎಂದು ಯುಲಾನ್ ಮಾಹಿತಿ ನೀಡಿದ್ದಾರೆ.

    ಇದಕ್ಕೂ ಮುನ್ನ ಚೇತರಿಸಿಕೊಂಡ ವ್ಯಕ್ತಿ ತನ್ನ 101ನೇ ಬರ್ತ್​ಡೇ ಆಚರಣೆಯ ಬೆನ್ನಲ್ಲೇ ಸೋಂಕಿಗೆ ಒಳಗಾಗಿದ್ದರು. ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಉಳಿದು ಸೂಕ್ತ ಚಿಕಿತ್ಸೆ ಮೂಲಕ ಗುಣಮುಖರಾಗಿದ್ದಾರೆ. ಅವರ ಹೆಸರು ದೈ ಎಂದು ಗುರುತಿಸಲಾಗಿದ್ದು, ಕಳೆದ ವಾರ ವುಹಾನ್​ನ ಥರ್ಡ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. (ಏಜೆನ್ಸೀಸ್​)

    VIDEO| ಕರೊನಾ ವೈರಸ್​ ಕುರಿತು ಫೇಸ್​ಬುಕ್​ನಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಕೆಲಸ ಕಳೆದುಕೊಂಡು ವೈದ್ಯೆ!

    ಕರೊನಾದಿಂದ ತಪ್ಪಿಸಿಕೊಳ್ಳಲು ಬಟ್ಟೆಗಳನ್ನು 2 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ: ಬಿಜೆಪಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts