More

    ಭಾರತೀಯ ಕಂಪೆನಿಗಳಿಂದ ಸೀಫುಡ್​ ಆಮದು ನಿಲ್ಲಿಸಿದ ಚೀನಾ! ಕಾರಣ ಏನು ಗೊತ್ತ?

    ನವದೆಹಲಿ/ಬೀಜಿಂಗ್​ : ಆರು ಭಾರತೀಯ ರಫ್ತು ಕಂಪನಿಗಳಿಂದ ಫ್ರೋಜನ್ ಸೀಫುಡ್​ ಉತ್ಪನ್ನಗಳ ಆಮದನ್ನು ಚೀನಾ ಒಂದು ವಾರದ ಮಟ್ಟಿಗೆ ಸ್ಥಗಿತಗೊಳಿಸಿದೆ. ಈ ಉತ್ಪನ್ನಗಳ ಹೊರಗಣ ಪ್ಯಾಕೇಜಿಂಗ್​ನಲ್ಲಿ ಕರೊನಾ ವೈರಸ್​​ನ ಕುರುಹುಗಳು ಪತ್ತೆಯಾಗಿರುವುದಾಗಿ ಚೀನೀ ಕಸ್ಟಮ್ಸ್ ಇಲಾಖೆ ಕಾರಣ ನೀಡಿದೆ.

    ಕಳೆದ ವರ್ಷದ ಆರಂಭದಿಂದಲೂ ಚೀನಾ, ಪ್ರಪಂಚದ ವಿವಿಧೆಡೆಯಿಂದ ಆಮದು ಮಾಡಿದ ಫ್ರೋಜನ್​ ಆಹಾರ ಉತ್ಪನ್ನಗಳನ್ನು ಪರೀಕ್ಷಿಸುವ ಪ್ರತೀತಿ ಹೊಂದಿದೆ. ಉತ್ಪನ್ನಗಳ ಪ್ಯಾಕೇಜಿಂಗ್​ನಲ್ಲಿ ಕರೊನಾ ವೈರಸ್​​ನ ಕುರುಹುಗಳು ಕಂಡರೆ ಸಂಬಂಧಿತ ಕಂಪನಿಗಳಿಂದ ಆಮದನ್ನು ಸ್ಥಗಿತಗೊಳಿಸುತ್ತಾ ಬಂದಿದೆ ಎನ್ನಲಾಗಿದೆ.

    ಇದನ್ನೂ ಓದಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಚೀನಾ ಪ್ರಜೆ ಪತ್ತೆ!

    ಕರೊನಾ ವೈರಸ್​ 2019 ರ ಡಿಸೆಂಬರ್​​ನಲ್ಲಿ ಚೀನಾದ ವುಹಾನ್​ನಲ್ಲಿ ಹುಟ್ಟಿದ್ದರೂ, ಕಠಿಣ ನಿರ್ಬಂಧಗಳ ಮೂಲಕ ಚೀನಾ ಕರೊನಾ ವೈರಸ್​ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಹೊರದೇಶಗಳಿಂದ ಬರುವ ಜನರಿಂದಾಗಿ ಕೆಲವು ಸೋಂಕು ಪ್ರಕರಣಗಳು ಕಂಡುಬರುತ್ತಿವೆ. ದೇಶದಲ್ಲಿ ಜೂನ್​ 9 ರಂದು ಸ್ಥಳೀಯವಾಗಿ ಹರಡಿದ 6 ಕರೊನಾ ಪ್ರಕರಣಗಳು ಮತ್ತು 15 ವಿದೇಶೀಯ ಮೂಲದ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ನ್ಯಾಷನಲ್ ಹೆಲ್ತ್​ ಕಮಿಷನ್​​ ಹೇಳಿದೆ. (ಏಜೆನ್ಸೀಸ್)

    ಮಮತಾ ಬ್ಯಾನರ್ಜಿ ಮದುವೆ, ಸೋಷಿಯಲಿಸಂ ಜೊತೆ! ಜೂನ್ 13 ರಂದು ವಿವಾಹೋತ್ಸವ!

    ದೊಡ್ಡವರ ಜಗಳದಲ್ಲಿ ಕೂಸು ಬಲಿಯಾಯ್ತು… ಸುಳ್ಳು ಕೇಸ್ ಹಾಕಲು ಮೊಮ್ಮಗಳನ್ನು ಕೊಂದ ಕಿರಾತಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts