More

    ಭೂತಾನ್​​ ಅಭಯಾರಣ್ಯವನ್ನೂ ತನ್ನದೆಂದು ಗಡಿ ತಂಟೆ ಶುರು ಮಾಡಿದ ಚೀನಾ

    ನವದೆಹಲಿ: ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿ ಹಿಂಸಾತ್ಮಕ ಘರ್ಷಣೆ ನಡೆಸಿದ ಚೀನಾ ಈಗ ಭೂತಾನ್​ ಜತೆಗೂ ಗಡಿ ತಂಟೆ ಶುರು ಮಾಡಿದೆ.

    ಚೀನಾದ ಈ ತಂಟೆಗೆ ಭೂತಾನ್​ ಭಾರಿ ಪ್ರತಿರೋಧ ತೋರಿದೆ. ಭೂತಾನ್​ನ ತ್ರಾಶಿಗಾಂಗ್​ ಜಿಲ್ಲೆಯಲ್ಲಿರುವ ವನ್ಯಜೀವಿ ಅಭಯಾರಣ್ಯಕ್ಕೆ ಗ್ಲೋಬಲ್​ ಎನ್ವಿರಾನ್​ಮೆಂಟ್​ ಪ್ಯಾಸಿಲಿಟಿಯಿಂದ ನೀಡಲಾಗುತ್ತಿದ್ದ ಅನುದಾನ ತಡೆಗೆ ಚೀನಾದ ಪ್ರತಿನಿಧಿಯ ಯತ್ನವನ್ನು ಭೂತಾನ್​ ವಿರೋಧಿಸಿದೆ.

    ಇದನ್ನೂ ಓದಿ; ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು; ಪಾಕ್​ ಆಕ್ರಮಿತ ನೆಲದಲ್ಲಿ ಮೊಳಗಿದೆ ಬಂಡಾಯದ ಕಹಳೆ

    ಜಿಇಎಫ್​ ಅನುದಾನ ಪಡೆಯುತ್ತಿರುವ ಅಭಯಾರಣ್ಯ ಚೀನಾ ಹಾಗೂ ಭೂತಾನ್​ ಗಡಿಯಲ್ಲಿದೆ ಹಾಗೂ ಅದು ವಿವಾದದಲ್ಲಿದೆ. ಚೀನಾ-ಭೂತಾನ್​ ನಡುವಿನ ಪ್ರಸ್ತಾಪಿತ ಮಾತುಕತೆಯಲ್ಲಿಯೂ ಇದರ ಬಗ್ಗೆ ಚರ್ಚೆಯಾಗಲಿದೆ ಎಂದು ಜಿಇಎಫ್​ ಜತೆಗಿನ ವರ್ಚುವಲ್​ ಮೀಟಿಂಗ್​ನಲ್ಲಿ ಚೀನಾ ಪ್ರತಿನಿಧಿ ಹೇಳಿದ್ದಾರೆ.

    ಹೀಗಾಗಿ ಅಭಯಾರಣ್ಯದ ಹೆಸರಿನಲ್ಲಿ ಭೂತಾನ್​ಗೆ ಅನುದಾನ ನೀಡುವುದನ್ನು ಚೀನಾ ವಿರೋಧಿಸಿದೆ. 1984ರಿಂದಲೂ ಚೀನಾ ಜತೆಗಿನ ಗಡಿ ವಿವಾದವನ್ನು ಬಗೆ ಹರಿಸಿಕೊಳ್ಳಲು ಭೂತಾನ್​ ಮಾತುಕತೆ ನಡೆಸುತ್ತಲೇ ಇದೆ.

    ಇದನ್ನೂ ಓದಿ; ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ 

    ಒಟ್ಟಾರೆ 764 ಕಿಮೀ ಗಡಿ ವಿವಾದದಲ್ಲಿದೆ. ಆದರೆ, ಈವರೆಗೆ ಚೀನಾ ಸಕ್ಟೆಂಗ್​ ಅಭಯಾರಣ್ಯದ ಮೇಲೆ ಅಥವಾ ಉತ್ತರ ಭೂತಾನ್​ನ ಇತರ ಪ್ರದೇಶಗಳ ತನ್ನ ಹಕ್ಕನ್ನು ಮಂಡಿಸಿರಲಿಲ್ಲ.

    ಸಕ್ಟೆಂಗ್​ ಅಭಯಾರಣ್ಯ ಭೂತಾನ್​ನ ಅವಿಭಾಜ್ಯ ಹಾಗೂ ಸಾರ್ವಭೌಮ ಪ್ರದೇಶವಾಗಿದೆ ಎಂದು ಭೂತಾನ್​ ಜಿಇಎಫ್​ ಸಭೆಯಲ್ಲಿ ವಾದ ಮಂಡಿಸಿದೆ. ಚೀನಾ ಇದನ್ನು ವಿವಾದಿತ ಪ್ರದೇಶ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದೆ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts