More

    ಲಡಾಖ್​ನಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದಕ್ಕೆ ಚೀನಾ ಭಾರಿ ಬೆಲೆ ತೆರಬೇಕಾಗುತ್ತೆ

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ಚೀನಾ ತೋರುತ್ತಿರುವ ಆಕ್ರಮಣಕಾರಿ ಮನೋಭಾವ ಹಾಗೂ ಭಾರತೀಯ ಯೋಧರ ಹತ್ಯೆಯ ಪ್ರಮಾದಕ್ಕೆ ಹಲವು ದಶಕಗಳವರೆಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ವ್ಯೂಹಾತ್ಮಕ ವ್ಯವಹಾರಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಇಡೀ ವಿಶ್ವವೇ ಕೋವಿಡ್​-19ನಂಥ ಮಾರಕ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಇಂಥ ಸಮಯವನ್ನು ಬಳಸಿಕೊಂಡು ಚೀನಾ ಭಾರತದ ವಿರುದ್ಧ ಆಕ್ರಮಣಕಾರಿ ಮನೋಭಾವ ತೋರುತ್ತಿದೆ. ಇದರಿಂದ ಚೀನಾದ ನಿಜ ಬಣ್ಣ ಜಾಗತಿಕವಾಗಿ ಬಯಲಾಗಿದೆ. ಕಳೆದ ಕೆಲವು ತಿಂಗಳಿಂದ ಲಡಾಖ್​ನಲ್ಲಿ ತೋರುತ್ತಿರುವ ಇಂಥ ದುಸ್ಸಾಹಸದಿಂದಾಗಿ ಆರ್ಥಿಕವಾಗಿ ಅದಕ್ಕೆ ತುಂಬಾ ನಷ್ಟವಾಗಲಿದೆ ಎಂದು ಹೇಳಿದ್ದಾರೆ.

    ಅಮೆರಿಕದೊಂದಿಗಿನ ಚೀನಾದ ತೆರಿಗೆ ಘರ್ಷಣೆ, ವ್ಯಾಪಾರ-ವಹಿವಾಟು ಸಂಬಂಧಿತ ಆಸ್ಟ್ರೇಲಿಯಾದೊಂದಿಗಿನ ಜಟಾಪಟಿ ಹಾಗೂ ಹಾಂಕಾಂಗ್​ನಲ್ಲಿ ಕ್ಷಣಕ್ಷಣಕ್ಕೂ ವಿಷಮಿಸುತ್ತಿರುವ ಪರಿಸ್ಥಿತಿಯಿಂದಾಗಿ ಅದು ಜಾಗತಿಕವಾಗಿ ಏಕಾಂಗಿಯಾಗುವ ಅಪಾಯಕ್ಕೂ ಒಳಗಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಗ್ರಾಹಕರು ಮಾಸ್ಕ್​ ಧರಿಸದಿದ್ದರೂ ಅಂಗಡಿ ಮಾಲೀಕರಿಗೆ ದಂಡ, ನಗರದಲ್ಲಿ ಪೊಲೀಸರ ದಾಳಿ

    ಈ ಎಲ್ಲ ತಪ್ಪುಗಳಿಗಾಗಿ ಚೀನಾ ಭಾರಿ ಬೆಲೆ ತೆರಬೇಕಾಗುತ್ತದೆ. ಅದರ ಪಾಲಿಗೆ ಇದು ತುಂಬಾ ದುಬಾರಿಯಾಗಿ ಪರಿಣಮಿಸಲಿದೆ. ಗಲ್ವಾನ್​ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಕ್ಕಾಗಿ ಅದು ಹಲವು ದಶಕಗಳವರೆಗೂ ಬೆಲೆ ತೆರಬೇಕಾಗುತ್ತದೆ. ಈ ಪಾಪ ಕೃತ್ಯಕ್ಕಾಗಿ ಅದು ಭಾರತದಲ್ಲಿ ಅಷ್ಟೇ ಅಲ್ಲ, ಜಾಗತಿಕವಾಗಿ ಸದ್ಭಾವನೆಯನ್ನು ಕಳೆದುಕೊಂಡಿದೆ ಎಂದು ಸೇನಾ ಸಿಬ್ಬಂದಿಯ ಮಾಜಿ ಉಪಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ಗುರ್ಮಿತ್​ ಸಿಂಗ್​ ಹೇಳಿದ್ದಾರೆ.

    ಗಲ್ವಾನ್​ ಕಣಿವೆಯಲ್ಲಿನ ಚೀನಾದ ಮಾರಕ ದಾಳಿಯನ್ನು ಖಂಡಿಸಿದ ಅವರು, ಇದನ್ನು ಗಮನಿಸಿದಾಗ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ ಒಂದು ರಾಜಕೀಯ ಸೇನೆಯಾಗಿದೆ. ಇದು ಯಾವುದೇ ಮಿಲಿಟರಿ ನಿಯಮಗಳನ್ನು ಪಾಲಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಚೀನಾದ 1.45 ಕೋಟಿ ರೂ. ದೇಣಿಗೆ ಅಂಗವಿಕಲರ ಕಲ್ಯಾಣಕ್ಕೆ ಬಳಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts