More

    ಗಲ್ವಾನ್​ ಘರ್ಷಣೆಯಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಕೊನೆಗೂ ಸತ್ಯ ಒಪ್ಪಿಕೊಂಡ ಕುತಂತ್ರಿ ಚೀನಾ!

    ಬೀಜಿಂಗ್​: ಕಳೆದ ವರ್ಷ ಜೂನ್​ 15ರಂದು ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ ಭಾರತೀಯ ಯೋಧರ ವಿರುದ್ಧ ನಡೆದಿದ್ದ ಘರ್ಷಣೆಯಲ್ಲಿ ತಮ್ಮ ಐವರು ಅಧಿಕಾರಿಗಳು ಮತ್ತು ಯೋಧರು ಮೃತಪಟ್ಟಿರುವುದಾಗಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.

    ಮೃತಪಟ್ಟ ಐವರು ಅಧಿಕಾರಿ ಮತ್ತು ಯೋಧರಿಗೆ ಚೀನಾದ ಕೇಂದ್ರ ಮಿಲಿಟರಿ ಆಯೋಗ (ಸಿಎಂಸಿ) ಗೌರವ ಸಲ್ಲಿಸಿರುವುದಾಗಿ ಚೀನಾ ಮಿಲಿಟರ ಪೇಪರ್​ ಪಿಎಲ್​ಎ ಡೈಲಿ ಶುಕ್ರವಾರ ವರದಿ ಮಾಡಿದೆ.

    ಮೃತಪಟ್ಟವರಲ್ಲಿ ಪಿಎಲ್‌ಎ ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡ್​ನ ರೆಜಿಮೆಂಟಲ್​ ಕಮಾಂಡರ್​ ಕಿ ಫಾಬೋ ಸಹ ಒಳಗೊಂಡಿದ್ದಾರೆಂದು ವರದಿಯಾಗಿದೆ. ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ನೇತೃತ್ವದ ಪಿಎಲ್‌ಎ ನಾಯಕತ್ವವು ಕಿ ಫಾಬೋ, ಚೆನ್​ ಹೊಂಗ್​ಜನ್​, ಚೆನ್​ ಕ್ಸಿಯಾಂಗ್‌ರಾಂಗ್, ಕ್ಸಿಯಾವೋ ಸಿಯುವಾನ್ ಮತ್ತು ವಾಂಗ್ ಜೌರಾನ್​ ಸಾವಿಗೆ ಗೌರವ ಸೂಚಿಸಿದ್ದಾರೆ.

    ಇದನ್ನೂ ಓದಿರಿ: ವಾಟ್ಸ್​ಆ್ಯಪ್​ಗೆ ಸರ್ಕಾರ ಸೆಡ್ಡು: ಕೇಂದ್ರದಿಂದ 2 ಮೆಸೆಂಜರ್ ಆ್ಯಪ್​ ಅಭಿವೃದ್ಧಿ; ಬೀಟಾ ಪರೀಕ್ಷೆ ಆರಂಭ..

    ಗಲ್ವಾನ್​ ಘರ್ಷಣೆಯಲ್ಲಿ ಚೀನಾದ ಸುಮಾರು 30 ಯೋಧರು ಮೃತಪಟ್ಟಿದ್ದಾರೆಂದು ಭಾರತ ಹೇಳಿತ್ತು. ಆದರೆ, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಚೀನಾ ನಿರಾಕರಿಸಿತ್ತು. ಆದರೆ, ಚೀನಾದ 45 ಯೋಧರು ಮೃತರಾಗಿದ್ದಾರೆಂದು ಫೆ. 10ರಂದು ದಿ ರಷ್ಯನ್​ ಅಫಿಶಿಯಲ್​ ನ್ಯೂಸ್​ ಏಜೆನ್ಸಿ ವರದಿ ಮಾಡಿತ್ತು.

    ಜೂನ್​ 15ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದು ನಾಲ್ಕು ದಶಕಗಳಲ್ಲೇ ಎರಡು ದೇಶಗಳ ನಡುವೆ ನಡೆದ ಅತ್ಯಂತ ಭೀಕರ ಗಡಿ ಘರ್ಷಣೆಯಾಗಿತ್ತು. ನಮಗೇನು ಆಗಿಲ್ಲ ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದ ಚೀನಾ ಕೊನೆಗೂ ಸಾವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

    ಗಲ್ವಾನ್​ ಘರ್ಷಣೆ ಸ್ಥಳದಿಂದ ಹಿಂದಕ್ಕೆ ಮರಳುತ್ತಿರುವ ಭಾರತೀಯ ಯೋಧರು

    ಗಲ್ವಾನ್‌ ಘರ್ಷಣೆ: ಸತ್ತವರ ಸಂಖ್ಯೆ ಮುಚ್ಚಿಡಲು ಛೇ ಇದೆಂಥ ನೀಚ ಕೃತ್ಯ!

    ಗಲ್ವಾನ್‌ ಕಣಿವೆಯಿಂದ ಹಿಂದಕ್ಕೆ ಸರಿದ ಚೀನಾ? ಭಾರತದಿಂದ ಹದ್ದಿನ ಕಣ್ಣು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts