More

    ಗಲ್ವಾನ್​ ಘರ್ಷಣೆ ಸ್ಥಳದಿಂದ ಹಿಂದಕ್ಕೆ ಮರಳುತ್ತಿರುವ ಭಾರತೀಯ ಯೋಧರು

    ನವದೆಹಲಿ: ಚೀನಾದ ಬಗ್ಗೆ ಅಪನಂಬಿಕೆಯ ಹೊರತಾಗಿಯೂ ಮಂಜು ಕರಗಿ ಗಲ್ವಾನ್ ನದಿಯಲ್ಲಿ ನೀರು ಉಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಗಲ್ವಾನ್​ ಪ್ರದೇಶದಿಂದ ಹಿಂದಕ್ಕೆ ಮರಳಲು ಆರಂಭಿಸಿದ್ದಾರೆ. ಗಲ್ವಾನ್​ ಪ್ರದೇಶದಲ್ಲಿ ಜೂ.15ರಂದು ಚೀನಾ ಯೋಧರೊಂದಿಗೆ ರಕ್ತಸಿಕ್ತ ಘರ್ಷಣೆ ಸಂಭವಿಸಿತ್ತು. ಅಂದಿನಿಂದ ಇಂದಿನವರೆಗೆ ಅಂದಾಜು 40 ದಿನ ಆ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನಾಪಡೆಯ ಪದಾತಿ ದಳದ ಯುದ್ಧವಾಹನಗಳು ಮೂಲಸ್ಥಾನಕ್ಕೆ ಮರಳಲು ಆರಂಭಿಸಿವೆ.

    ಲಡಾಖ್​ ಪೂರ್ವಭಾಗದಲ್ಲಿನ ಉದ್ವಿಗ್ನತೆಯನ್ನು ಶಮನ ಮಾಡುವ ಸಲುವಾಗಿ ಭಾರತ ಮತ್ತು ಚೀನಾದ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳಲ್ಲಿ ಒಪ್ಪಿಕೊಳ್ಳಲಾಗಿರುವಂತೆ ಮೊದಲ ಹಂತದ ಸೇನಾ ಹಿಂತೆಗೆತದ ಭಾಗವಾಗಿ ಭಾರತೀಯ ಸೇನಾಪಡೆ ಹಿಂದಕ್ಕೆ ಮರಳುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ನೆರೆಮನೆಯಾಕೆ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿ 2 ವರ್ಷದಿಂದ ನಿರಂತರ ಅತ್ಯಾಚಾರ

    ಜುಲೈ ಮೊದಲ ವಾರದಲ್ಲಿ ನಡೆದಿದ್ದ ಮಾತುಕತೆಯ ಪ್ರಕಾರ ಘರ್ಷಣೆ ನಡೆದ ಒಂದೂವರೆ ಕಿ.ಮೀ. ವ್ಯಾಪ್ತಿಯೊಳಗೆ ಮೀಸಲು ಪ್ರದೇಶ ನಿರ್ಮಿಸಲು ಒಪ್ಪಿಕೊಳ್ಳಲಾಗಿತ್ತು. ಅದರಂತೆ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಯೋಧರು ಮೀಸಲು ಪ್ರದೇಶದಿಂದ ಹಿಂತೆಗೆದಿದ್ದರೂ, ಕೆಲ ಭಾರತೀಯ ಯುದ್ಧವಾಹನಗಳು ಮೀಸಲು ಪ್ರದೇಶದೊಳಗೆ ಇದ್ದವು ಎನ್ನಲಾಗಿದೆ.

    ಚುಶುಲ್​ನಲ್ಲಿ ನಡೆದ ಭಾರತ ಮತ್ತು ಚೀನಾ ಸೇನಾಪಡೆಯ ಕೋರ್​ ಕಮಾಂಡರ್​ ಮಟ್ಟದ ಮಾತುಕತೆಯ ಬಳಿಕ ಮೀಸಲು ಪ್ರದೇಶದಲ್ಲಿದ್ದ ಭಾರತದ ಬಹುತೇಕ ಎಲ್ಲ ಯುದ್ಧವಾಹನಗಳು ಜುಲೈ 20ರೊಳಗೆ ಮರಳಿದ್ದವು. ಆದರೂ ಕೊನೆಯಲ್ಲಿ ಉಳಿದಿರುವ ಒಂದಷ್ಟು ವಾಹನಗಳು ವಾರಾಂತ್ಯಕ್ಕೆ ಹಿಂದಿರುಗುವ ಸಾಧ್ಯತೆಗಳಿವೆ. ಹೊಸದಾಗಿ ನಿರ್ಮಿಸಲಾಗಿರುವ ಸೇತುವೆಗಳನ್ನು ಹಾದು ಅವು ಸ್ವಸ್ಥಾನಕ್ಕೆ ಮರಳಲಿವೆ ಎನ್ನಲಾಗಿದೆ.

    ಉದ್ಯೋಗ ಮರಳಿಗಿಟ್ಟಿಸಿಕೊಳ್ಳಲು ಹಳೆ ಕಂಪನಿಯ ಡೇಟಾಬೇಸ್ ಅನ್ನೇ ಹ್ಯಾಕ್ ಮಾಡಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts