More

    ಆರೋಗ್ಯ ಸಚಿವರೇ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ನಾಗರಹಾವು ಕಚ್ಚಿದ ಮಹಿಳೆಗೆ ಚುಚ್ಚುಮದ್ದು ಸಿಗದೇ ಸಾವು

    ಚಿಕ್ಕಮಗಳೂರು: ನಾಗರಹಾವು ಕಡಿತಕ್ಕೆ ಒಳಗಾದ ಮಹಿಳೆಗೆ ಚುಚ್ಚುಮದ್ದು ಸಿಗದೇ ಸಾವಿಗೀಡಾಗಿರುವ ಮನಕಲಕುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಶಾರದಮ್ಮ ( 60) ಮೃತ ದುರ್ದೈವಿ. ಸುಮಾರು 3 ಗಂಟೆ ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡಿದರು ಚುಚ್ಚುಮದ್ದು ಮಾತ್ರ ಸಿಗಲೇ ಇಲ್ಲ. ಈ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಜೀವ ಒಂದು ಬಲಿಯಾಗಿದೆ.

    ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಹಾವು ಕಡಿತದ ಚುಚ್ಚುಮದ್ದು ಇಲ್ಲ. ಕಾಫಿನಾಡಿನಲ್ಲಿ ಎಲ್ಲಿಯೂ ಎಎಸ್​ವಿ ಚುಚ್ಚುಮದ್ದು ಸ್ಟಾಕ್​ ಇಲ್ಲ. ಅದರಲ್ಲೂ ವೈದ್ಯಕೀಯ ಕಾಲೇಜು ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲೇ ಚುಚ್ಚುಮದ್ದು ಇಲ್ಲದಿರುವುದು ತಲೆತಗ್ಗಿಸುವಂತಹ ವಿಚಾರವಾಗಿದೆ.

    ಇದೀಗ ಸಾಮಾಜಿಕ ಜಾಲತಾಣದಲ್ಲಿ‌ ಆರೋಗ್ಯ ಇಲಾಖೆ ವಿರುದ್ದ ಜನರ ಆಕ್ರೋಶ ವ್ಯಕ್ತವಾಗಿದೆ. ಆರೋಗ್ಯ ಸಚಿವರೇ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಎಂದು ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ ಲೆಂಜೆಂಡರಿ ಗಾಯಕಿ ಸಂಧ್ಯಾ ಮುಖರ್ಜಿ! ಅವರು ಕೊಟ್ಟ ಕಾರಣ ಹೀಗಿದೆ…

    3 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಯೋಜನೆ ಆರಂಭ: ಸಿಎಂ ಬಸವರಾಜ ಬೊಮ್ಮಾಯಿ

    Phone Pay ಸ್ಕ್ಯಾನರ್​ ಬದಲಿಸಿ ಸ್ವಂತ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡ! ಕೆಲಸ ಕೊಟ್ಟ ಮಾಲೀಕನಿಗೇ ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts