More

    Phone Pay ಸ್ಕ್ಯಾನರ್​ ಬದಲಿಸಿ ಸ್ವಂತ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡ! ಕೆಲಸ ಕೊಟ್ಟ ಮಾಲೀಕನಿಗೇ ವಂಚನೆ

    ಕುಣಿಗಲ್​: ಡಿಜಿಟಲ್​ ಪೇಮೆಂಟ್​ನಲ್ಲಿ ಅಂಗಡಿ ಮಾಲೀಕನ ಖಾತೆಗೆ ಪಾವತಿಯಾಗಬೇಕಿದ್ದ ಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡು ಕೆಲಸ ಕೊಟ್ಟ ಮಾಲೀಕನಿಗೆ 14 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

    ಎಡೆಯೂರಿನ ಮೇಗಲಹಳ್ಳಿ ಬಳಿ ಜಿಯಾವುಲ್ಲಾ ಎಂಬುವರು ಗೋಲ್ಡ್​ ಲೂಮ್​ ಎಂಬ ಹೆಸರಿನಲ್ಲಿ ಡ್ರೈ ಫ್ರೂಟ್ಸ್​ ಅಂಗಡಿ ತೆರೆದಿದ್ದಾರೆ. ಈ ಅಂಗಡಿಯಲ್ಲಿ ಮಂಗಳೂರು ಮೂಲದ ಸಾದತ್​ ರಿಜ್ವಾನ್ ಎಂಬಾತ ಕೆಲಸ ಮಾಡುತ್ತಿದ್ದ.

    ಕೆಲ ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಾದತ್​ ರಿಜ್ವಾನ್​ ಪೂರ್ಣವಾಗಿ ಡ್ರೈ ಫ್ರೂಟ್ಸ್​ ಅಂಗಡಿ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆತ, ಶಾಪ್​ನಲ್ಲಿಟ್ಟಿದ್ದ ಗೂಗಲ್​ ಪೇ, ಫೋನ್​ ಪೇ ಸ್ಕ್ಯಾನರ್​ ಬದಲಿಸಿ ಗ್ರಾಹಕರು ಪಾವತಿಸಿದ ಹಣವನ್ನು ತನ್ನ ಸ್ವಂತ ಖಾತೆಗೆ ಕಳೆದ ಮೂರ್ನಾಲ್ಕು ತಿಂಗಳು ವರ್ಗಾವಣೆ ಮಾಡಿಕೊಂಡಿರುವುದು ಮಾಲೀಕನಿಗೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

    ಹಂತ ಹಂತವಾಗಿ ಬರೋಬ್ಬರಿ 13 ಲಕ್ಷ ರೂಪಾಯಿ ವಂಚಿಸಿರುವ ಸಾದತ್​, ಅಂಗಡಿಯಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಡ್ರೈ ಫ್ರೂಟ್ಸ್​ ಅನ್ನೂ ಕಳವು ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಕೆಲಸಗಾರ ಸಾದತ್​ ವಿರುದ್ಧ ಮಾಲೀಕ ಜಿಯಾವುಲ್ಲಾ ಅಮೃತೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

    ಪತ್ನಿಯ ತಂಗಿಯನ್ನೇ ಪ್ರೇಮಿಸಿದ, ಮದ್ವೆ ಆಗ್ತೀನಂತ ಪತ್ನಿಗೆ ಹಿಂಸಿಸಿದ… ನಾದಿನಿಗಾಗಿ ಹಾತೊರೆದವ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts