More

    ಕಾಫಿ ನಾಡು ನಾಳೆಯಿಂದ ಸಂಪೂರ್ಣ ಲಾಕ್​! ಮದುವೆಗೆ 10 ಮಂದಿ, ಅಂತ್ಯಸಂಸ್ಕಾರಕ್ಕೆ ಐವರಿಗೆ ಅವಕಾಶ

    ಚಿಕ್ಕಮಗಳೂರು: ಕರೊನಾ ಸೋಂಕಿನ ನಿಯಂತ್ರಣ ಮಾಡುವುದಕ್ಕೆ ಲಾಕ್​ಡೌನ್​ ಮಾಡುವ ನಿರ್ಧಾರವನ್ನು ಪ್ರಧಾನಿ ಮೋದಿ ಅಯಾ ಜಿಲ್ಲೆಗೆಳಿಗೆ ವಹಿಸಿಕೊಟ್ಟ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಮೇ 20ರಿಂದ 24ರವರೆಗೆ ಜಿಲ್ಲೆಯನ್ನು ಲಾಕ್​ಡೌನ್​ ಮಾಡುವುದಾಗಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಮೇ 20ರ ಬೆಳಗ್ಗೆ 10 ಗಂಟೆಯಿಂದ ಮೇ 24ರ ಸಂಜೆ 6 ಗಂಟೆಯವರೆಗೆ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಮೆಡಿಕಲ್​, ಆಸ್ಪತ್ರೆ ಮತ್ತು ಹಾಲಿನ ಅಂಗಡಿಗಳಿಗೆ ಮಾತ್ರವೇ ತೆರಯಲು ಅನುಮತಿ ನೀಡಲಾಗಿದೆ. ಎಲ್ಲ ರೀತಿಯ ವಾಹನ ಓಡಾಟಕ್ಕೆ ಬ್ರೇಕ್​ ಹಾಕಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಈಗಾಗಲೇ ನಿಶ್ಚಯವಾಗಿರುವ ಮದುವೆಗೆ ಅನುಮತಿ ಪಡೆದು, 10 ಮಂದಿಯನ್ನು ಸೇರಿಸಬಹುದು. ಕೇವಲ 5 ಮಂದಿಯ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಬಹುದು. ಸರ್ಕಾರಿ ಕಚೇರಿಗಳಲ್ಲಿ ಅಲ್ಲಿನ ಸಿಬ್ಬಂದಿ ಬಿಟ್ಟು ಬೇರಾರಿಗೂ ಪ್ರವೇಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಕೆ ಎಲ್ ಕುಮಾರ್ ಅದೇಶದಲ್ಲಿ ತಿಳಿಸಿದ್ದಾರೆ.

    ನಿವೃತ್ತ ಐಎಫ್​ಎಸ್ ಅಧಿಕಾರಿ ಮನೆಯಲ್ಲಿ ಚಪ್ಪಲಿ ಕದಿಯಲು ಹೋಗಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕಳ್ಳ!

    ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಹೆಂಡತಿ, ಮಗುವನ್ನು ನೋಡುವುದಕ್ಕಾಗಿ ಬಸ್ಸನ್ನೇ ಕದ್ದ! 4 ಜಿಲ್ಲೆ ದಾಟಿದ ನಂತರ ಸಿಕ್ಕಿಹಾಕಿಕೊಂಡಿದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts