More

    ಕಡೂರು ಕಾಂಗ್ರೆಸ್​ ಶಾಸಕರ ವಿರುದ್ಧ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿದ ಮಹಿಳಾ ಕಾನ್ಸ್​ಟೆಬಲ್​​ ಸಸ್ಪೆಂಡ್!​

    ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೆ.ಎಸ್​. ಆನಂದ್​ ವಿರುದ್ಧ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ಆಕ್ರೋಶ ಹೊರಹಾಕಿದ ಮಹಿಳಾ ಕಾನ್ಸ್​ಟೆಬಲ್​ರನ್ನು ಅಮಾನತು ಮಾಡಲಾಡಿದೆ.

    ಕಡೂರು ಶಾಸಕರಿಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದರು ತೊಂದರೆ ಆದರೆ ಅದಕ್ಕೆ ಶಾಸಕರೇ ಕಾರಣ ಎಂದು ಮಹಿಳಾ ಪೇದೆ ಲಂತಾ ಎಂಬುವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದಕ್ಕೆ ಸಂಬಂಧಿಸಿದ ಸ್ಕ್ರೀನ್​ಶಾಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.

    ಇದನ್ನೂ ಓದಿ: ಪೊಲೀಸರಿಗೇ ಸುತ್ತಿಕೊಂಡ ಬಿಟ್ ಕಾಯಿನ್ ಉರುಳು: ಜಪ್ತಿ ಮಾಡಿದ್ದ ಮೊಬೈಲ್, ಪೆನ್​ಡ್ರೖೆವ್, ಮ್ಯಾಕ್ಬುಕ್​ನಲ್ಲಿ ಸಾಕ್ಷಿ ನಾಶ

    ಲತಾ ಅವರು ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಡೂರಿನಿಂದ ತರೀಕೆರೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಲತಾ, ಇದು ದ್ವೇಷದ ವರ್ಗಾವಣೆ ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ವರ್ಗಾವಣೆ ವಿರೋಧಿಸಿ ಸಬ್​ ಇನ್ಸ್​ಪೆಕ್ಟರ್ ಜತೆಯೂ ಲತಾ ಮಾತಿನ ಚಕಮಕಿ ನಡೆಸಿದ್ದಾರೆಂದು ತಿಳಿದುಬಂದಿದೆ.

    Kaduru Congress MLA

    ಲತಾ ಅವರ ಈ ವರ್ತನೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​ ಅವರ ಗಮನಕ್ಕೆ ಬಂದಿದ್ದು, ಲತಾರನ್ನ ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಹೆಲ್ಮೆಟ್​ ಧರಿಸಿದೇ ಓಡಾದಿದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರಿಗೆ ಲತಾ ಅವರು ದಂಡ ವಿಧಿಸಿದ್ದರು ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಆನಂದ್​ ಅವರು ಪೇದೆ ಜತೆ ಮಾತಿನ ಚಕಮಕಿ ನಡೆಸಿದ್ದ ವಿಡಿಯೋ ಈ ಹಿಂದೆ ವೈರಲ್​ ಆಗಿತ್ತು. ಇದೇ ದ್ವೇಷಕ್ಕೆ ವರ್ಗಾವಣೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ನಾನು ಸಲಿಂಗಕಾಮಿ ಅಲ್ಲ ಎನ್ನುತ್ತಲೇ ಕಟ್ಟಡದಿಂದ ಹಾರಿದ ವಿದ್ಯಾರ್ಥಿ! ಹಾಸ್ಟೆಲ್‍ನಲ್ಲಿ ಅಂದು ಆಗಿದ್ದೇನು?

    ಸರ್ಕಾರದಿಂದ ಬಿಡುಗಡೆಯಾಗದ ಹಣ: ಅಂಗನವಾಡಿ ಬಾಡಿಗೆ ಕಟ್ಟಲು ಚಿನ್ನ ಅಡವಿಟ್ಟ ಕಾರ್ಯಕರ್ತೆ!

    ರಾತ್ರಿ ನಾಪತ್ತೆಯಾದ ಯುವತಿ ಮುಂಜಾನೆ ಶವವಾಗಿ ಪತ್ತೆ ಕೇಸ್​: ಎದುರುಮನೆ ಕಾಮುಕನ ಭೀಕರ ಕೃತ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts