More

    ಸುದೀಪ್​ ವಿರುದ್ಧ ಪರೋಕ್ಷವಾಗಿ ಟಾಂಗ್​ ಕೊಟ್ರಾ ಚೇತನ್​?

    ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಮಾಫಿಯಾ ಕುರಿತು ಚರ್ಚೆಗಳಾಗುತ್ತಿರುವುದರ ಬಗ್ಗೆ ನಟ ‘ಆ ದಿನಗಳು’ ಚೇತನ್​ ಈಗಾಗಲೇ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಷಯದಲ್ಲಿ ದಿವಂಗತ ಚಿರಂಜೀವಿ ಸರ್ಜಾ ಅವರನ್ನು ಎಳೆದು ತರುವುದು ಸರಿಯಲ್ಲ ಎಂದು ಈಗಾಗಲೇ ಹೇಳಿದ್ದಾರೆ.

    ಇದನ್ನೂ ಓದಿ: ಯಶ್​-ರಾಧಿಕಾ ಮಗನ ಹೆಸರು ಕೊನೆಗೂ ಬಹಿರಂಗ …

    ಈಗ ಅವರು ಈ ವಿಷಯದ ಇನ್ನೊಂದು ಮಜಲಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರ ಜತೆಗೆ, ನಟ-ನಿರ್ದೇಶಕ ಸುದೀಪ್​ ಅವರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರಾ ಎಂಬ ಅನುಮಾನ ಬರುವಂತೆ ಮಾತನಾಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಪ್ರಸ್ತುತವಾಗಿ ಎಲ್ಲರ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ. ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ / ಪಾನ್ ಮಸಾಲಾ, ಜೂಜು (ರಮ್ಮಿ) … ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್​ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ ‘ರಾಯಭಾರಿಗಳಲ್ಲವೇ’?’ ಎಂದು ಚೇತನ್​ ಪ್ರಶ್ನಿಸಿದ್ದಾರೆ.

    ಈ ಪೈಕಿ, ನಟ ಸುದೀಪ್​ ಅವರು ಈ ಹಿಂದೆ ರಮ್ಮಿ ಕುರಿತ ಒಂದು ಜಾಹೀರಾತಿನಲ್ಲಿ ಭಾಗವಹಿಸಿದ್ದರು. ಅದಕ್ಕೆ ಪ್ರತಿಯಾಗಿ ಹಲವರು ಇದನ್ನು ಖಂಡಿಸಿದ್ದರು. ಒಬ್ಬ ಜವಾಬ್ದಾರಿಯುತ ನಟ, ಈ ರೀತಿ ಜೂಜಿನ ಕುರಿತ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ, ಇದರಿಂದ ತಪ್ಪು ಸಂದೇಶ ಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದರು. ಕೆಲವು ದಿನಗಳ ನಂತರ ಈ ವಿವಾದ ತಣ್ಣಗಾಗಿತ್ತು.

    ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮ ಬೇಡ; ಅಭಿಮಾನಿಗಳಿಗೆ ಸುದೀಪ್​ ಮನವಿ

    ಈಗ ಚೇತನ್​, ಮತ್ತೊಮ್ಮ ಈ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ. ಬರೀ ಡ್ರಗ್ಸ್​ ಅಷ್ಟೇ ಅಲ್ಲ, ಸಾಮಾಜಿಕ ದುಷ್ಕೃತ್ಯಗಳ ಕುರಿತು ಜಾಹೀರಾತು ನೀಡುವ ಸ್ಟಾರ್​ಗಳತ್ತಲೂ ಬೆರಳು ತೋರಿಸಬೇಕು ಎಂದು ಹೇಳಿದ್ದಾರೆ. ಹಾಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡವರಿಗೆ, ಯಾರ ಹೆಸರೇಳದೆ, ಸಾಮಾಜಿಕ ದುಷ್ಕೃತ್ಯಗಳ ರಾಯಾಭಾರಿಗಳು ಎಂದು ಹೇಳಿದ್ದಾರೆ.

     

    1 ಪರ್ಸೆಂಟ್​ ಜನರಿಗೆ ಮಾತ್ರ ಅಂಥದ್ದೊಂದು ಪ್ರತಿಭೆ ಇದೆಯಂತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts