More

    ಜಿಲ್ಲಾ ಹಬ್ಬದ ಅಂಗವಾಗಿ ಫೆ.23ರಿಂದ ವಿವಿಧ ಕ್ರೀಡಾಕೂಟ

    ಚಿಕ್ಕಮಗಳೂರು: ಜಿಲ್ಲಾ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಫೆ.23ರಿಂದ 25ರವರೆಗೆ ಗ್ರಾಮೀಣ ಮತ್ತಿತರ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷರೂ ಆಗಿರುವ ಡಿಡಿಪಿಐ ಸಿ.ನಂಜಯ್ಯ ಹೇಳಿದರು.

    ಫೆ.23ರಂದು ಬೆಳಗ್ಗೆ 6.30ಕ್ಕೆ ಜಿಲ್ಲಾ ಆಟದ ಮೈದಾನ, ಐಜಿ ರಸ್ತೆ, ಎಂ.ಜಿ. ರಸ್ತೆ ಮಾರ್ಗದಲ್ಲಿ ಫಿಟ್ ಚಿಕ್ಕಮಗಳೂರು ಸ್ಪರ್ಧೆ ಏರ್ಪಡಿಸಲಾಗಿದೆ. ಬೆಳಗ್ಗೆ 9.30ಕ್ಕೆ ಐಡಿಎಸ್​ಜಿ ಕಾಲೇಜು ಆವರಣದಲ್ಲಿ ಗಾಳಿಪಟ ಸ್ಪರ್ಧೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

    ಬೆಳಗ್ಗೆ 9ಕ್ಕೆ ನಲ್ಲೂರು ಗ್ರಾಮದಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ನಿಧಿ ಹುಡುಕಾಟ, ಭಾರ ಹೊತ್ತು ಓಡುವ ಸ್ಪರ್ಧೆ, 10ಕ್ಕೆ ಎಐಟಿ ಕಾಲೇಜಿನಲ್ಲಿ ಮುಕ್ತ ಚೆಸ್ ಸ್ಪರ್ಧೆ, ಟಿಎಂಎಸ್ ಕಾಲೇಜಿನಲ್ಲಿ ಯೋಗ, ಎಐಟಿ ಬಯಲು ರಂಗಮಂದಿರದಲ್ಲಿ ಸಬ್ ಜೂನಿಯರ್ ಟೆಕ್ವಾಂಡೋ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಹೇಳಿದರು.

    24ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಮಹಿಳೆ, ಪುರುಷರಿಗೆ ಜಿಲ್ಲಾ ಕಬಡ್ಡಿ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್, ಫೆ.25ರಂದು ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಮಹಿಳೆಯರಿಗೆ ಎಸ್​ಟಿಜಿ ಕಾಲೇಜಿನಲ್ಲಿ ಜಂಗೀಕುಸ್ತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಅಜ್ಜಂಪುರ, ತರೀಕೆರೆ, ಮೂಡಿಗೆರೆ, ಕಡೂರು ತಾಲೂಕು ಕೇಂದ್ರದಲ್ಲಿ ಗ್ರಾಮೀಣ ಕ್ರೀಡಾ ಕೂಟವನ್ನು ಬಕ್ಕಿ ಮಂಜುನಾಥ್ (ಮೊ:9448667558) ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಕ್ರೀಡಾಪಟುಗಳು ಫೆ.22ರಂದು ಸಂಘಟಕರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಜಿಲ್ಲೆಯವರಿಗೆ ಮಾತ್ರ ಅವಕಾಶವಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಇದೆ ಎಂದರು.

    ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಮಾತನಾಡಿ, ಮಹಿಳೆಯರಿಗೆ 17 ವರ್ಷದೊಳಗಿನ, 18-60 ವರ್ಷ ಹಾಗೂ 60 ವರ್ಷ ಮೇಲ್ಟಟ್ಟ ಮೂರು ವಿಭಾಗದಲ್ಲಿ ಕ್ರೀಡಾ ಸ್ಪರ್ಧೆ ನಡೆಸಲಾಗುವುದು ಎಂದು ಹೇಳಿದರು.

    ಪ್ಯಾರಾ ಸೈಲ್-ಗ್ಲೈಡಿಂಗ್: ಹಬ್ಬದ ಸೊಬಗು ಸವಿಯಲು ಬರುವ ಜನರಿಗೆ ಆಕಾಶದಿಂದ ಚಿಕ್ಕಮಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶ ವೀಕ್ಷಿಸಲು ಪ್ಯಾರಾ ಸೈಲಿಂಗ್ ಮತ್ತು ಗ್ಲೈಡಿಂಗ್ ಎರಡೂ ರೀತಿಯ ಆಕಾಶ ಯಾನ ಆಯೋಜಿಸಲಾಗಿದೆ ಎಂದು ಯವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ತಿಳಿಸಿದರು. ಎಐಟಿ ಕಾಲೇಜು ಮೈದಾನದಲ್ಲಿ ಪ್ಯಾರಾ ಗ್ಲೈಡಿಂಗ್ ಮಾಡಲಾಗುತ್ತಿದೆ. ಪ್ಯಾರಾ ಸೈಲಿಂಗ್​ನ್ನು ವಿಮಾನ ನಿಲ್ದಾಣಕ್ಕಾಗಿ ಕಾಯ್ದಿಟ್ಟ ಜಾಗದಲ್ಲಿ ಮಾಡಲು ಉದ್ದೇಶಿಸಲಾಗಿದೆ. ಇನ್ನೆರಡು ದಿನದಲ್ಲಿ ಸ್ಥಳವನ್ನು ತಜ್ಞರು ಕರಾರುವಕ್ಕಾಗಿ ನಿಗದಿ ಮಾಡುವರು ಎಂದು ಹೇಳಿದರು.

    ಕ್ರೀಡಾ ತರಬೇತುದಾರರಾದ ರವಿಕುಮಾರ್, ವಿನುತಾ, ಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts